ಒಂದೇ ದಿನ 2530 ಜನರಿಗೆ ಸೋಂಕು: ದೇಶದಲ್ಲಿ 41000 ಗಡಿದಾಟಿದ ಸೋಂಕಿತರು!

Published : May 04, 2020, 08:54 AM ISTUpdated : May 04, 2020, 09:32 AM IST
ಒಂದೇ ದಿನ 2530 ಜನರಿಗೆ ಸೋಂಕು: ದೇಶದಲ್ಲಿ 41000 ಗಡಿದಾಟಿದ ಸೋಂಕಿತರು!

ಸಾರಾಂಶ

41000 ಗಡಿದಾಟಿದ ಸೋಂಕಿತರು| ನಿನ್ನೆ 2530 ಜನರಿಗೆ ಸೋಂಕು, ಈವರೆಗಿನ ದೈನಂದಿನ ಗರಿಷ್ಠ| ಒಂದೇ ದಿನ 98 ಜನರ ಸಾವು, ಸಾವಿನ ಸಂಖ್ಯೆ 1391ಕ್ಕೇರಿಕೆ

ನವದೆಹಲಿ(ಮೇ.04): ಭಾರತದಲ್ಲಿ ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ಭರ್ಜರಿ ಏರಿಕೆ ಕಂಡಿದೆ. ಭಾನುವಾರ ಒಂದೇ ದಿನ 2530 ಹೊಸ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 41779ಕ್ಕೆ ತಲುಪಿದೆ. ಇದು ಈವರೆಗಿನ ಒಂದು ದಿನದ ಗರಿಷ್ಠ ಸೋಂಕು ಖಚಿತಪಟ್ಟ ಪ್ರಮಾಣವಾಗಿದೆ. ಇದೇ ವೇಳೆ ಭಾನುವಾರ 98 ಜನ ಸಾವನ್ನಪ್ಪಿದ್ದು, ಮೃತಪಟ್ಟವರ ಒಟ್ಟು ಸಂಖ್ಯೆ 1391ಕ್ಕೆ ತಲುಪಿದೆ. ಇದು ಕೂಡಾ ಗರಿಷ್ಠ ಸಾವಿನ ದಾಖಲೆಯಾಗಿದೆ.

ಇನ್ನು ಒಟ್ಟು ಸೋಂಕಿತರ ಪೈಕಿ ಈವರೆಗೂ 11,204 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಸೋಂಕಿನಿಂದ ಬಳಲುತ್ತಿರುವ 29 ಸಾವಿರಕ್ಕೂ ಹೆಚ್ಚು ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಭಾನುವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ದಾವಣಗೆರೆಯಲ್ಲಿ 21 ಕೇಸ್‌ ಸ್ಫೋಟ: ರಾಜ್ಯದಲ್ಲಿ ಒಂದೇ ದಿನ 34 ಮಂದಿಗೆ ಸೋಂಕು!

ಭಾರೀ ಏರಿಕೆ: ದೇಶದಲ್ಲಿ ಅತಿಹೆಚ್ಚು ಸೋಂಕಿತರನ್ನು ಒಳಗೊಂಡ ಮಹಾರಾಷ್ಟ್ರದಲ್ಲಿ ಮತ್ತೆ 678 ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಇಲ್ಲಿ ಕೊರೋನಾ ಪೀಡಿತರ ಸಂಖ್ಯೆ 12974 ಆಗಿದ್ದು, ಬಲಿಯಾದವರ ಸಂಖ್ಯೆ 548ಕ್ಕೆ ಏರಿಕೆ ಕಂಡಿದೆ. ದೆಹಲಿಯಲ್ಲಿ ಭಾನುವಾರ 427, ಗುಜರಾತ್‌ನಲ್ಲಿ 374, ತಮಿಳುನಾಡಲ್ಲಿ 266 ಹೊಸ ಪ್ರಕರಣಗಳು ಪತ್ತೆಯಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!