
ಬೆಂಗಲೂರು(ಮೇ.04): ಹಂತ ಹಂತವಾಗಿ ದೇಶ ಹಹಾಗೂ ರಾಜ್ಯದಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಸಡಿಲಗೊಳಿಸಲಾಗುತ್ತಿದೆ. ಮೂರನೇ ಹಂತದಲ್ಲಿ ಅನೇಕ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಹೀಗಿರುವಾಗ ಮೂರು ವಲಯದಲ್ಲಿ ಏನೇನು ಲಭ್ಯವಿರುತ್ತೆ? ಇಲ್ಲಿದೆ ಮಾಹಿತಿ
ಕೆಂಪು ವಲಯ
(ಕಂಟೈನ್ಮೆಂಟ್ ಹೊರತಾಗಿ)
- ಹಾಲಿ ಇರುವ ಅಗತ್ಯ ಸೇವೆಗಳು, ಖಾಸಗಿ ಆಸ್ಪತ್ರೆಗಳ ಒಪಿಡಿಗಳು, ವೈದ್ಯಕೀಯ ಕ್ಲಿನಿಕ್‌ಗಳು. ಷರತ್ತುಬದ್ಧ ಮದ್ಯ ಮಾರಾಟ
- ಅನುಮತಿ ಪಡೆದ ವಾಹನಗಳ ಸಂಚಾರ. ನಾಲ್ಕು ಚಕ್ರ ವಾಹನ (ಚಾಲಕ+ಇಬ್ಬರು), ದ್ವಿಚಕ್ರ ವಾಹನ (ಸವಾರ ಮಾತ್ರ)
- ಅಗತ್ಯ ವಸ್ತುಗಳ ಸೇವೆ ಒದಗಿಸುವ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ, ಇ-ಕಾಮರ್ಸ್. ಇತರೆಡೆ ಎಲ್ಲ ರೀತಿಯ ಅಂಗಡಿ
- 33% ನೌಕರರೊಂದಿಗೆ ಸರ್ಕಾರಿ, ಖಾಸಗಿ ಕಚೇರಿಗೆ. ನಗರಗಳಲ್ಲಿ ಎಸ್‌ಇಜೆಡ್, ರಫ್ತು ಆಧರಿತ ಕೈಗಾರಿಕೆ, ಪ್ಯಾಕಿಂಗ್ ಉದ್ದಿಮೆ
- ಸ್ಥಳೀಯ ನೌಕರರು, ಕಾರ್ಮಿಕರ ಬಳಸಿ ಮಾಡುವ ಎಲ್ಲ ನಿರ್ಮಾಣ ಕಾರ‍್ಯ, ನವೀಕರಿಸಬಹುದಾದ ಇಂಧನ ಯೋಜನೆಗಳು
ರೋಣದಲ್ಲಿ ದೃಢಪಟ್ಟ ಮಹಾಮಾರಿ ಕೊರೋನಾ: ಹುಬ್ಬಳ್ಳಿಯಲ್ಲಿ ಆತಂಕ
ಕಿತ್ತಳೆ ವಲಯ
(ಕಂಟೈನ್ಮೆಂಟ್ ಹೊರತಾಗಿ)
- ಕೆಂಪು ವಲಯದಲ್ಲಿ ಅನುಮತಿ ಇರುವ ಎಲ್ಲ ವ್ಯವಸ್ಥೆಗಳು
- ಹೆಚ್ಚುವರಿಯಾಗಿ ಕ್ಷೌರದಂಗಡಿಗೆ ಷರತ್ತುಬದ್ಧ ಅನುಮತಿ
- ಇ-ಕಾಮರ್ಸ್ ಸೇವೆಯಡಿ ಎಲ್ಲಾ ರೀತಿಯ ವಸ್ತು ಪೂರೈಕೆ
- ಎಲ್ಲ ಸರ್ಕಾರಿ ನೌಕರರೂ ಕಚೇರಿಗೆ
ಹಸಿರು ವಲಯ
- ಕೆಂಪು, ಕಿತ್ತಳೆ ವಲಯದಲ್ಲಿ ಇರುವ ಎಲ್ಲಾ ವ್ಯವಸ್ಥೆಗಳು
- ಜಿಲ್ಲೆಯೊಳಗೆ ಷರತ್ತುಬದ್ಧ ಸರ್ಕಾರಿ ಬಸ್ ಸಂಚಾರ
- ಎಲ್ಲ ಸರ್ಕಾರಿ ನೌಕರರೂ ಕಚೇರಿಗೆ
ದಾವಣಗೆರೆಯಲ್ಲಿ 21 ಕೇಸ್ ಸ್ಫೋಟ: ರಾಜ್ಯದಲ್ಲಿ ಒಂದೇ ದಿನ 34 ಮಂದಿಗೆ ಸೋಂಕು!
ಎಲ್ಲಾ ಕಡೆ ಏನಿರಲ್ಲ?
- ರೈಲು, ಮೆಟ್ರೋ, ವಿಮಾನ ಸೇರಿ ಬಹುತೇಕ ಸಾರಿಗೆ ಸೇವೆ
- ಶಾಲಾ, ಕಾಲೇಜು ಸೇರಿದಂತೆ ಎಲ್ಲ ರೀತಿಯ ಶಿಕ್ಷಣ ಸಂಸ್ಥೆಗಳು
- ಮಾಲ್, ಥಿಯೇಟರ್ ಸೇರಿದಂತೆ ಮನರಂಜನಾ ಕೇಂದ್ರಗಳು
- ಧಾರ್ಮಿಕ, ಸಾಮಾಜಿಕ, ರಾಜಕೀಯ ಸಭೆ-ಸಮಾರಂಭಗಳು
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ