* ಸೋಂಕಿನ ಪ್ರಮಾಣ ಅಥವಾ ಪಾಸಿಟಿವಿಟಿ ದರ ಸತತ 14 ದಿನ ಇಳಿಕೆ
* 14 ದಿನದಿಂದ ಶೇ.5ಕ್ಕಿಂತ ಕಮ್ಮಿ ಪಾಸಿಟಿವಿಟಿ:ಮುಗಿಯಿತೇ 2ನೇ ಅಲೆ?
* 2ನೇ ಅಲೆ ಇನ್ನೂ ಮುಗಿದಿಲ್ಲ. ಅದು ಕೊನೆಗೊಳ್ಳುವುದಕ್ಕೆ ಇನ್ನೂ ಸಮಯವಿದೆ ಎಂದ ತಜ್ಞರು
ನವದೆಹಲಿ(ಜೂ.22): ಸೋಂಕಿನ ಪ್ರಮಾಣ ಅಥವಾ ಪಾಸಿಟಿವಿಟಿ ದರ ಸತತ 14 ದಿನ ಇಳಿಕೆ ಹಾದಿಯಲ್ಲಿದ್ದರೆ ಅಥವಾ ನಿಗದಿತ ಮಿತಿಗಿಂತ ಕಡಿಮೆ ಇದ್ದಲ್ಲಿ ಅದು ಸೋಂಕು ಇಳಿಮುಖದಲ್ಲಿರುವ ಸೂಚನೆ ಎಂದೇ ಜನಜನಿತ. ಇದೀಗ ಭಾರತದಲ್ಲೂ ಸತತ 14 ದಿನಗಳಿಂದ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದಾಖಲಾಗಿರುವ ಕಾರಣ 2ನೇ ಅಲೆ ಮುಕ್ತಾಯವಾಗಿರಬಹುದು ಎಂಬ ಮಾತುಗಳು ಕೇಳಿಬಂದಿವೆ.
ಆದರೆ ತಜ್ಞರು ಮಾತ್ರ 2ನೇ ಅಲೆ ಇನ್ನೂ ಮುಗಿದಿಲ್ಲ. ಅದು ಕೊನೆಗೊಳ್ಳುವುದಕ್ಕೆ ಇನ್ನೂ ಸಮಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ಈಗ ಪಾಸಿಟಿವಿಟಿ ದರ ಶೇ.3.38ಕ್ಕೆ ಇಳಿದಿದ್ದರೂ, ಕೆಲವು ಜಿಲ್ಲೆಗಳಲ್ಲಿ ಈಗಲೂ ಪಾಸಿಟಿವಿಟಿ ದರ 5ಕ್ಕಿಂತಲೂ ಹೆಚ್ಚಿದೆ. ಅಲ್ಲದೇ ಹೊಸದಾಗಿ ಕಂಡುಬಂದಿರುವ ಡೆಲ್ಟಾಪ್ಲಸ್ ರೂಪಾಂತರಿ ವೈರಸ್ ಅಧಿಕ ಪ್ರಸರಣದಲ್ಲಿ ಪ್ರಸರಣಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಹೀಗಾಗಿ ಈಗಲೇ ಕೊರೋನಾ 2ನೇ ಅಲೆ ಮುಕ್ತಾಯಕಂಡಿದೆ ಎಂದು ಹೇಳಲು ಆಗದು ತಂದು ಸ್ಕೂಲ್ ಆಫ್ ನ್ಯಾಚುರಲ್ ಸೈನ್ಸ್‌ನ ಪ್ರಾಧ್ಯಾಪಕ ನಾಗ ಸುರೇಶ್ ವೀರಾಪು ಅಭಿಪ್ರಾಯಪಟ್ಟಿದ್ದಾರೆ.