
ನವದೆಹಲಿ(ಜೂ.12): ಗುರುವಾರ ದೇಶದಲ್ಲಿ 11445 ಜನರಿಗೆ ಹೊಸದಾಗಿ ಕೊರೋನಾ ಪತ್ತೆಯಾಗುವುದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 288731ಕ್ಕೆ ತಲುಪಿದೆ. ಜೊತೆಗೆ 386 ಜನ ಸಾವನ್ನಪ್ಪುವ ಮೂಲಕ ಒಟ್ಟು ಸಾವಿನ ಸಂಖ್ಯೆ 8485ಕ್ಕೆ ತಲುಪಿದೆ.
"
ಆದರೆ ಜಾಗತಿಕ ಮಟ್ಟದಲ್ಲಿ ಕೊರೋನಾ ಅಂಕಿಸಂಖ್ಯೆಗಳ ಮೇಲೆ ಕಣ್ಣಿಡುವ ವಲ್ಡೋರ್‍ಮೀಟರ್ ಲೆಕ್ಕದ ಅನ್ವಯ, ಗುರುವಾರ ಭಾರತದಲ್ಲಿ ಸೋಂಕಿತರ ಸಂಖ್ಯೆ 2.97ಲಕ್ಷಕ್ಕೆ ತಲುಪುವ ಮೂಲಕ ಭಾರತ ಜಾಗತಿಕ ಮಟ್ಟದಲ್ಲಿ ಬ್ರಿಟನ್ ಮತ್ತು ಸ್ಪೇನ್ ಹಿಂದಿಕ್ಕಿ ದಿಢೀರನೆ 6ರಿಂದ 4ನೇ ಸ್ಥಾನಕ್ಕೆ ಏರಿದೆ.
ಭಾರತದಲ್ಲಿ 2020ರ ಜ.30ಕ್ಕೆ ಮೊದಲ ಸೋಂಕು ಪತ್ತೆಯಾಗಿತ್ತು. ಆಗ ವಿಶ್ವ ಮಟ್ಟದಲ್ಲಿ 20ರ ಆಸುಪಾಸಿನ ಸ್ಥಾನದಲ್ಲಿದ್ದ ಭಾರತ ಮೇ 25ಕ್ಕೆ 10ನೇ ಸ್ಥಾನ ತಲುಪಿತ್ತು. ಆಗ ಸೋಂಕಿತರ ಸಂಖ್ಯೆ 1.41 ಲಕ್ಷ ಇತ್ತು. ಅದಾದ 1 ತಿಂಗಳಲ್ಲಿ ಇದೀಗ 2.97 ಲಕ್ಷ ಸೋಂಕಿತರೊಂದಿಗೆ ದೇಶ 4ನೇ ಸ್ಥಾನಕ್ಕೆ ಏರಿದೆ. ಸದ್ಯ ಅಮೆರಿಕ, ಬ್ರೆಜಿಲ್ ಮತ್ತು ರಷ್ಯಾ ಅತಿ ಹೆಚ್ಚು ಸೋಂಕಿತರೊಂದಿಗೆ ಟಾಪ್ 3 ಸ್ಥಾನದಲ್ಲಿದೆ.
ಕೊರೋನಾ ಅಬ್ಬರಕ್ಕೆ ಗುರುವಾರ ರಾಜ್ಯದಲ್ಲಿ 7 ಬಲಿ..!
ಮಹಾ ಸ್ಫೋಟ: ಮಹಾರಾಷ್ಟ್ರದಲ್ಲಿ ಗುರುವಾರ ದಾಖಲೆಯ 3607 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಇಲ್ಲಿ ಸೋಂಕಿತರ ಸಂಖ್ಯೆ 97,648ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ, ಗುರುವಾರ ಒಂದೇ ದಿನ ವ್ಯಾಧಿಗೆ 152 ಬಲಿಯಾಗುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 3590ಕ್ಕೆ ಜಿಗಿದಿದೆ. ಉಳಿದಂತೆ ದಿಲ್ಲೀಲಿ 1877, ತಮಿಳುನಾಡಿನಲ್ಲಿ 1871, ಗುಜರಾತ್‌ನಲ್ಲಿ 513 ಹಾಗೂ ಉತ್ತರ ಪ್ರದೇಶದಲ್ಲಿ 477 ಮಂದಿಗೆ ಈ ಸೋಂಕಿಗೆ ತುತ್ತಾಗಿದ್ದಾರೆ.
ಸ್ಥಾನ - ದಿನಾಂಕ- ಸೋಂಕಿತರ ಸಂಖ್ಯೆ- ಅವಧಿ
10 ಮೇ 25 - 1,41,794- 116 ದಿನ
09 ಮೇ29 - 1,68,386- 04 ದಿನ
07 ಮೇ31 - 1,84,662- 02 ದಿನ
06 ಜೂ.2 - 2,37,867- 02 ದಿನ
04 ಜೂ.11- 2,97,205- 09 ದಿನ
ಕೊರೋನಾ ಸೋಂಕಿತ ಟಾಪ್ 4 ದೇಶಗಳು
ದೇಶ - ಸೋಂಕಿತರು - ಸಾವು
ಅಮೆರಿಕ 2,069,931- 115,242
ಬ್ರೆಜಿಲ್ 775,581 - 39,803
ರಷ್ಯಾ 502436 - 6532
ಭಾರತ 297001- 8473
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ