ವಿವಿಧ ರಾಜ್ಯಗಳಲ್ಲಿ ಸೋಂಕು ಹರಡುವ ಹೊಸ ಆತಂಕ!| ತವರಿನತ್ತ ಲಕ್ಷಾಂತರ ವಲಸಿಗ ಕಾರ್ಮಿಕರು
ಭೋಪಾಲ್(ಮೇ.03): ಉದ್ಯೋಗ ನಿಮಿತ್ತ ವಿವಿಧ ರಾಜ್ಯಗಳಿಗೆ ತೆರಳಿದ್ದ ವಲಸೆ ಕಾರ್ಮಿಕರಿಗೆ ತವರಿಗೆ ತೆರಳಲು ಆರಂಭಿಸಲಾಗಿರುವ ‘ಶ್ರಮಿಕ್ ಸ್ಪೆಷಲ್’ ರೈಲುಗಳು ವಿವಿಧ ರಾಜ್ಯಗಳಿಂದ ಸಂಚಾರ ಆರಂಭಿಸಿದ್ದು, ಇನ್ನು ಕೆಲ ರೈಲುಗಳು ಶನಿವಾರ ಗಮ್ಯ ಸ್ಥಾನ ತಲುಪಿವೆ. ಕಾರ್ಮಿಕರು ಹೊರಟ ರಾಜ್ಯ ಮತ್ತು ಆಗಮಿಸಿದ ರಾಜ್ಯ ಎರಡೂ ಕಡೆ ಅವರನ್ನು ಕೊರೋನಾ ಸೋಂಕಿನ ತಪಾಸಣೆಗೆ ಗುರಿಪಡಿಸಲಾಗುತ್ತಿದೆ.
ಆದರೆ ಸೋಂಕಿನ ಲಕ್ಷಣವೇ ಇಲ್ಲದ ಪ್ರಕರಣಗಳು ದೇಶಾದ್ಯಂತ ಭಾರೀ ಪ್ರಮಾಣದಲ್ಲಿ ಹೊರಬರುತ್ತಿರುವಾಗ, ಲಕ್ಷಾಂತರ ಸಂಖ್ಯೆಯಲ್ಲಿ ನಡೆದಿರುವ ಈ ಮರುವಲಸೆ, ವಿವಿಧ ರಾಜ್ಯಗಳಲ್ಲ ಹೊಸದಾಗಿ ಸೋಂಕು ಹರಡುವ ಭೀತಿಯನ್ನೂ ಹುಟ್ಟಿಸಿದೆ.
undefined
ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್: ಆದಾಯ ಹೆಚ್ಚಿಸಿಕೊಳ್ಳಲು ಆರೇಂಜಿಗೆ ಇಳಿದಿ ಅಬಕಾರಿ..!
ವಿದ್ಯಾರ್ಥಿಗಳು ಹಾಗೂ ಕೂಲಿ ಕಾರ್ಮಿಕರು ಸೇರಿದಂತೆ ರಾಜಸ್ಥಾನ ಹಾಗೂ ತೆಲಂಗಾಣದಲ್ಲಿದ್ದ ತಲಾ 1200ಕ್ಕೂ ಹೆಚ್ಚು ಪ್ರಯಾಣಿಕರು ತಮ್ಮ ತವರು ರಾಜ್ಯ ಜಾರ್ಖಂಡ್‌ಗೆ ತಲುಪಿದರು. ಇನ್ನು ಮಹಾರಾಷ್ಟ್ರದ ನಾಶಿಕ್‌ನಿಂದ 847 ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿರುವ 17 ಭೋಗಿಗಳನ್ನೊಳಗೊಂಡ ವಿಶೇಷ ರೈಲು ಉತ್ತರ ಪ್ರದೇಶದ ಲಖನೌಗೆ ಭಾನುವಾರ ಬೆಳಗ್ಗೆ ತಲುಪಲಿದೆ.
ಮತ್ತೊಂದೆಡೆ, ನಾಶಿಕ್‌ನಲ್ಲಿ ಸಿಲುಕಿದ್ದ 340 ಮಂದಿ ಭೋಪಾಲ್‌ಗೆ ತಲುಪಿದ್ದಾರೆ. ಹಾಗೆಯೇ, ಲಾಕ್‌ಡೌನ್‌ನಿಂದಾಗಿ ಕೇರಳದಲ್ಲಿ ಸಿಲುಕಿದ್ದ 1140ಕ್ಕೂ ಹೆಚ್ಚು ಮಂದಿಯನ್ನು ಹೊತ್ತ ವಿಶೇಷ ರೈಲು ಒಡಿಶಾದ ಭುವನೇಶ್ವರಕ್ಕೆ ತೆರಳಿದ್ದು, ರಾಜ್ಯದಲ್ಲಿರುವ ಮತ್ತಷ್ಟುಕೂಲಿ ಕಾರ್ಮಿಕರನ್ನು ಅವರವರ ರಾಜ್ಯಗಳಾದ ಬಿಹಾರ, ಜಾರ್ಖಂಡ್ ಹಾಗೂ ಒಡಿಶಾಕ್ಕೆ ಕಳುಹಿಸಿಕೊಡಲು ಮತ್ತೆ ನಾಲ್ಕು ವಿಶೇಷ ರೈಲು ಬೇಕಾಗಬಹುದು ಎನ್ನಲಾಗಿದೆ.