ಇನ್ಮುಂದೆ ಚೆನ್ನೈ - ಬೆಂಗಳೂರು ರೈಲು ಪ್ರಯಾಣ ಸಲೀಸು: ಸಮಯದಲ್ಲೂ ಭಾರಿ ಉಳಿತಾಯ

By BK Ashwin  |  First Published Apr 8, 2023, 3:46 PM IST

ದಕ್ಷಿಣ ರೈಲ್ವೆ 110 kmph ಮತ್ತು 130 kmph ವೇಗದಲ್ಲಿ ರೈಲುಗಳನ್ನು ನಿರ್ವಹಿಸಲು ಉಳಿದ ಮಾರ್ಗಗಳನ್ನು ನವೀಕರಿಸುತ್ತಿದೆ. ಭವಿಷ್ಯದಲ್ಲಿ ರೈಲ್ವೆ ಇಲಾಖೆ ವಂದೇ ಭಾರತ್ ಸೇವೆಗಳ ಸ್ಲೀಪರ್ ಆವೃತ್ತಿಗಳು ಮತ್ತು ಇಂಟರ್-ಸಿಟಿ ವಂದೇ ಭಾರತ್ ಸೇವೆಗಳ ಮೆಮು ಆವೃತ್ತಿಗಳಂತಹ ಸ್ವಯಂ ಚಾಲಿತ ರೈಲುಗಳನ್ನು ಪರಿಚಯಿಸಲು ಯೋಜಿಸಿದೆ. ಈ ಹಿನ್ನೆಲೆ ವೇಗ ವರ್ಧನೆಯತ್ತ ಗಮನಹರಿಸುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 


ಚೆನ್ನೈ (ಏಪ್ರಿಲ್ 8, 2023): ಚೆನ್ನೈ - ಬೆಂಗಳೂರು ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳಂತಹ ಪ್ರೀಮಿಯಂ ರೈಲುಗಳನ್ನು ಜೂನ್‌ನಿಂದ ಚೆನ್ನೈ ಮತ್ತು ಜೋಲಾರ್‌ಪೇಟೆ ನಡುವೆ ಗಂಟೆಗೆ 130 ಕಿಮೀ ವೇಗದಲ್ಲಿ ಓಡಿಸಲು ದಕ್ಷಿಣ ರೈಲ್ವೆ ಯೋಜಿಸಿದೆ. ಈ ಮೂಲಕ ಚೆನ್ನೈ ಮತ್ತು ಬೆಂಗಳೂರು ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಸಿದ್ಧವಾಗಿದೆ. ಪರಿಣಾಮವಾಗಿ, ಬೆಂಗಳೂರು ಮಾರ್ಗದಲ್ಲಿ ಬರುವ ಈ ರೈಲುಗಳಿಂದ 30 ರಿಂದ 45 ನಿಮಿಷಗಳ ಕಾಲ ಸಮಯ ಉಳಿತಾಯವಾಗುವ ನಿರೀಕ್ಷೆ ಇದೆ. ಅಲ್ಲದೆ, ಮೇಲೆ ತಿಳಿಸಿದ ರೈಲುಗಳು ಜೋಲಾರ್‌ಪೇಟೆ ಮಾರ್ಗವನ್ನು ಬಳಸುವುದರಿಂದಲೂ ಬೆಂಗಳೂರಿಗೆ ಬರುವ ಇತರ ರೈಲುಗಳ ಪ್ರಯಾಣದ ಸಮಯ ಕಡಿಮೆಯಾಗುವ ಸಾಧ್ಯತೆಯಿದೆ.

ಚೆನ್ನೈ-ಕೊಯಮತ್ತೂರು ವಂದೇ ಭಾರತ್ ರೈಲಿಗೆ ಇಂದು ಚಾಲನೆ ನೀಡಲಾಗುತ್ತಿದ್ದು, ಚೆನ್ನೈ-ಜೋಲಾರ್‌ಪೇಟ್ ಮಾರ್ಗದ ನವೀಕರಣದಿಂದಾಗಿ ಪ್ರಯಾಣದ ಸಮಯವನ್ನು 5.50 ಗಂಟೆಗಳವರೆಗೆ ಕಡಿತಗೊಳಿಸುವ ನಿರೀಕ್ಷೆಯಿದೆ. ಇನ್ನು, ವಂದೇ ಭಾರತ್ ಮತ್ತು ಶತಾಬ್ದಿ ಎಕ್ಸ್‌ಪ್ರೆಸ್‌ನಂತಹ ಪ್ರೀಮಿಯಂ ರೈಲುಗಳ ವೇಗವನ್ನು ಹೆಚ್ಚಿಸಲಾಗುವುದು ಮತ್ತು ಬೆಂಗಳೂರಿಗೆ ಬರುವ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಹೆಚ್ಚಿನ ರೈಲುಗಳ ವೇಗ ಹೆಚ್ಚಿಸಲಾಗುವುದು ಎಂದೂ ರೈಲ್ವೆ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

Tap to resize

Latest Videos

ಇದನ್ನು ಓದಿ: ತಿರುಪತಿಗೆ ಇನ್ನು ವಂದೇ ಭಾರತ್‌ ರೈಲು: ಇಂದು ಪ್ರಧಾನಿ ಮೋದಿ ಚಾಲನೆ

ಇನ್ನೊಂದೆಡೆ, ಹೆಚ್ಚಿನ ವೇಗದ ಕಾರ್ಯಾಚರಣೆಗಾಗಿ ರೈಲ್ವೆ ಇಲಾಖೆ ಬೆಂಗಳೂರಿನವರೆಗೆ ಹಳಿಗಳನ್ನು ನವೀಕರಿಸುವ ಕೆಲಸ ಮಾಡುತ್ತಿದೆ. ಈ ವಲಯದಲ್ಲಿರುವ ಹಲವಾರು ಎಕ್ಸ್‌ಪ್ರೆಸ್ ರೈಲುಗಳನ್ನು ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು ವಿವಿಧ ರೀತಿಯ ಪರೀಕ್ಷೆಯ ಅಗತ್ಯವಿರುತ್ತದೆ. ಹಾಗೆ, ಕೋಚ್‌ಗಳು ಮತ್ತು ಎಂಜಿನ್‌ಗಳು ಈಗಾಗಲೇ 130 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ, ಈಗಾಗಲೇ ರೈಲ್ವೆ ಹಳಿಗಳ ನವೀಕರಣದಿಂದ ಹಿಂದಿನ ಹಣಕಾಸು ವರ್ಷದಲ್ಲಿ 44 ರೈಲುಗಳ ವೇಗವನ್ನು ಹೆಚ್ಚಿಸಲು ರೈಲ್ವೆ ಇಲಾಖೆಗೆ ಸಾಧ್ಯವಾಗಿದೆ. ಹೆಚ್ಚುವರಿಯಾಗಿ, ಕಳೆದ ವರ್ಷ ದಕ್ಷಿಣ ರೈಲ್ವೆಯ ವಿವಿಧ ವಿಭಾಗಗಳ ಲೂಪ್ ಲೈನ್‌ಗಳ ವೇಗವನ್ನು ಹೆಚ್ಚಿಸಲಾಗಿದೆ ಮತ್ತು ರೈಲುಗಳು ಈಗ ಮೊದಲಿನ 15kmph ನಿಂದ ಸರಾಸರಿ 30kmph ವೇಗದಲ್ಲಿ ಚಲಿಸುತ್ತಿವೆ. ಈ ಎಲ್ಲಾ ಪ್ರಯತ್ನಗಳು ಸರಕು ಸೇವೆಗಳಿಗೆ ಕೆಲವು ಟ್ರ್ಯಾಕ್‌ಗಳನ್ನು ಮುಕ್ತಗೊಳಿಸುತ್ತವೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕೇರಳ ರೈಲಿನಲ್ಲಿ ಬೆಂಕಿ ಹಚ್ಚಿ ಮೂವರನ್ನು ಬಲಿ ತೆಗೆದುಕೊಂಡ ಆರೋಪಿ ಶಾರುಖ್‌ ಸೈಫಿ ಬಂಧನ

ದಕ್ಷಿಣ ರೈಲ್ವೆ 110 kmph ಮತ್ತು 130 kmph ವೇಗದಲ್ಲಿ ರೈಲುಗಳನ್ನು ನಿರ್ವಹಿಸಲು ಉಳಿದ ಮಾರ್ಗಗಳನ್ನು ನವೀಕರಿಸುತ್ತಿದೆ. ಭವಿಷ್ಯದಲ್ಲಿ ರೈಲ್ವೆ ಇಲಾಖೆ ವಂದೇ ಭಾರತ್ ಸೇವೆಗಳ ಸ್ಲೀಪರ್ ಆವೃತ್ತಿಗಳು ಮತ್ತು ಇಂಟರ್-ಸಿಟಿ ವಂದೇ ಭಾರತ್ ಸೇವೆಗಳ ಮೆಮು ಆವೃತ್ತಿಗಳಂತಹ ಸ್ವಯಂ ಚಾಲಿತ ರೈಲುಗಳನ್ನು ಪರಿಚಯಿಸಲು ಯೋಜಿಸಿದೆ. ಈ ಹಿನ್ನೆಲೆ ವೇಗ ವರ್ಧನೆಯತ್ತ ಗಮನಹರಿಸುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 

ಇದನ್ನೂ ಓದಿ: 100 ಕಿ.ಮೀ. ದೂರದ ನಗರಗಳ ಮಧ್ಯೆ ವಂದೇ ಮೆಟ್ರೋ ರೈಲು: ಬೆಂಗಳೂರು, ತುಮಕೂರು, ರಾಮನಗರಕ್ಕೆ ಲಭ್ಯ..?

click me!