Watch: ಬೆಂಗಳೂರು ರಸ್ತೆಯಲ್ಲಿ ಮಗಳು ಅಕ್ಷತಾ ಜೊತೆ ನಾರಾಯಣ ಮೂರ್ತಿ, ಸುಧಾ ಮೂರ್ತಿ ಪುಸ್ತಕ ಹುಡುಕಾಟ!

Published : Feb 26, 2024, 10:03 PM IST
Watch: ಬೆಂಗಳೂರು ರಸ್ತೆಯಲ್ಲಿ ಮಗಳು ಅಕ್ಷತಾ ಜೊತೆ ನಾರಾಯಣ ಮೂರ್ತಿ, ಸುಧಾ ಮೂರ್ತಿ ಪುಸ್ತಕ ಹುಡುಕಾಟ!

ಸಾರಾಂಶ

ಯುನೈಟೆಡ್‌ ಕಿಂಗ್‌ಡಮ್‌ ಫರ್ಸ್ಟ್‌ ಲೇಡಿ ಅಕ್ಷತಾ ಮೂರ್ತಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬೆಂಗಳೂರಿನ ಪ್ರಸಿದ್ಧ ರಾಘವೇಂದ್ರ ಮಠದ ರಸ್ತೆಯಲ್ಲಿ ಪುಸ್ತಕಗಳ ಹುಡುಕಾಟ ನಡೆಸುತ್ತಿರುವ ವಿಡಿಯೋ ವೈರಲ್‌ ಆಗಿದೆ.  

ಬೆಂಗಳೂರು (ಫೆ.26): ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಅವರ ಪತ್ನಿ ಸುಧಾ ಮೂರ್ತಿ ಪ್ರತಿ ಬಾರಿಯೂ ತಮ್ಮ ಸರಳ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಅವರು ಬೆಂಗಳೂರಿನ ರಾಘವೇಂದ್ರ ಮಠದ ರಸ್ತೆಯಲ್ಲಿ ತಮ್ಮ ಪುತ್ರಿ ಹಾಗೂ ಯುನೈಟೆಡ್‌ ಕಿಂಗ್‌ಡಮ್‌ನ ಫರ್ಸ್ಟ್‌ ಲೇಡಿ ಅಕ್ಷತಾ ಮೂರ್ತಿ ಅವರ ಜೊತೆ ರಸ್ತೆಯಲ್ಲು ಪುಸ್ತಕಗಳ ಹುಡುಕಾಟ ನಡೆಸಿರುವ ವಿಡಿಯೋ ವೈರಲ್‌ ಆಗಿದೆ. ಈ ವೇಳೆ ಅಕ್ಷತಾ ಮೂರ್ತಿ ಅವರ ಇಬ್ಬರು ಪುತ್ರಿಯರಾದ ಅನುಷ್ಕಾ ಹಾಗೂ ಕೃಷ್ಣಾ ಕೂಡ ಜೊತೆಯಲ್ಲಿದ್ದರು. ಕುಟುಂಬ ಸಮೇತರಾಗಿ ಮಠದ ರಸ್ತೆಯಲ್ಲಿ ಪುಸ್ತಕಗಳನ್ನು ಪರಿಶೀಲಿಸುತ್ತಿರುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಳೆದ ವಾರ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಜೀವನ ಚರಿತ್ರೆ ಬಿಡುಗಡೆಗಾಗಿ ಅಕ್ಷತಾ ಮೂರ್ತಿ ಮತ್ತು ಮಕ್ಕಳು ಬೆಂಗಳೂರಿಗೆ ಬಂದಿದ್ದರು. ಬಹುಶಃ ಈ ವೇಳೆ ಇದನ್ನು ರೆಕಾರ್ಡ್‌ ಮಾಡಿರುವ ಸಾಧ್ಯತೆ ಇದೆ.

ಸರಳ ಡ್ರೆಸ್‌ನಲ್ಲಿ ಯಾವುದೇ ಭದ್ರತೆಯ ಸುಳಿವೂ ಇಲ್ಲದಂತೆ ಇಡೀ ಕುಟುಂಬ ಮಠದ ರಸ್ತೆಯಲ್ಲಿ ತಮ್ಮ ಸಮಯ ಕಳೆದಿದ್ದು ಅಚ್ಚರಿಕೆ ಕಾರಣವಾಗಿದೆ. ಯುನೈಟೆಡ್‌ ಕಿಂಗ್‌ಡಮ್‌ ಪ್ರಧಾನಿ ರಿಷಿ ಸುನಕ್‌ ಅವರ ಪತ್ನಿ ಹಾಗೂ ಮಕ್ಕಳು ರಾಘವೇಂದ್ರ ಮಠದ ರಸ್ತೆಯಲ್ಲಿ ಕಂಡಿದ್ದು ಹೀಗೆ. ಇವರೊಂದಿಗೆ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಕೂಡ ಇದ್ದರು. ಯಾವುದೇ ಭದ್ರತೆಗಳ ಆಡಂಬರವಿಲ್ಲದೆ, ಅವರ ಸರಳತೆ ಹೊಳೆಯುತ್ತಿರುವುದು ಕಂಡಿದೆ ಎಂದು ಎಕ್ಸ್‌ ಬಳಕೆದಾರರಾದ ಎಂಆರ್‌ ಗುರುಪ್ರಸಾದ್‌ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡು ಬರೆದಿದ್ದಾರೆ.

ಸಾರ್ವಜನಿಕವಾಗಿ ಕಾಣಿಸಿಕೊಂಡ ವೇಳೆ ನಾರಾಯಣ ಮೂರ್ತಿ ಅವರ ಕುಟುಂಬ ಅವರ ಸರಳತೆಗೆ ಸಾಕ್ಷಿಯಾಗಿರುವುದು ಇದು ಮೊದಲೇನಲ್ಲ. ಕಳೆದ ವಾರ ಅಕ್ಷತಾ ಮೂರ್ತಿ ಹಾಗೂ ನಾರಾಯಣ ಮೂರ್ತಿ, ಬೆಂಗಳೂರಿನ ಪ್ರಸಿದ್ಧ ಐಸ್‌ಕ್ರೀಮ್‌ ಪಾರ್ಲರ್‌ನಲ್ಲಿ ಐಸ್‌ಕ್ರೀಮ್‌ ಸೇವಿಸುತ್ತಿರುವ ವಿಡಿಯೋ ಕೂಡ ವೈರಲ್‌ ಆಗಿತ್ತು. ಸರಳ ಬಟ್ಟೆಯಲ್ಲಿಯೇ ಬಂದಿದ್ದ ತಂದೆ ಮಗಳು ಐಸ್‌ಕ್ರೀಮ್‌ ಕಪ್‌ಅನ್ನು ಕೈಯಲ್ಲಿ ಹಿಡಿದು ಫೋಟೋಗೆ ಪೋಸ್‌ ನೀಡಿದ್ದರು.

ಬೆಂಗಳೂರಿನಲ್ಲಿ ಮಗಳು ಅಕ್ಷತಾ ಮೂರ್ತಿ ಜೊತೆ ಐಸ್ ಕ್ರೀಂ ಸವಿದ ನಾರಾಯಣ ಮೂರ್ತಿ; ಸರಳತೆ ಮೆಚ್ಚಿದ ನೆಟ್ಟಿಗರು

ಫೆಬ್ರವರಿ 10 ರಂದು, ಇಡೀ ಕುಟುಂಬವು ಚಿತ್ರಾ ಬ್ಯಾನರ್ಜಿ ದಿವಾಕರುಣಿ ಅವರ ಪುಸ್ತಕ, An Uncommon Love: The Early Life of Sudha and Narayana Murthy ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ನಾರಾಯಣ ಮೂರ್ತಿ ಅವರು ಪತ್ನಿ ಮತ್ತು ಸಮಾಜಸೇವಕಿ ಸುಧಾ ಮೂರ್ತಿ ಅವರೊಂದಿಗೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರೆ, ಅಕ್ಷತಾ ಮತ್ತು ಅವರ ಪುತ್ರಿಯರೊಂದಿಗೆ ಮಗ ರೋಹನ್ ಮೂರ್ತಿ ಉಪಸ್ಥಿತರಿದ್ದರು.

ಯುಕೆ ಪ್ರಧಾನಿ ರಿಷಿ ಸುನಕ್‌, ಅಕ್ಷತಾ ನಿವಾಸದಲ್ಲಿ ಸಡಗರದ ದೀಪಾವಳಿ: ಹಬ್ಬಕ್ಕೆ ಶುಭ ಕೋರಿದ ಭಾರತದ ಅಳಿಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಸೋನಿಯಾ ಗಾಂಧಿಗೆ ಕೇರಳ ಚುನಾವಣೆಯಲ್ಲಿ ಸೋಲು
ಶೇ.100ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇರುವ ಕೇರಳದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು