ಸಂಜೀವಿನಿ ಹೊತ್ತ ಹನುಮಂತನ ಫೋಟೋ ಜೊತೆ ಮೋದಿಗೆ ಥ್ಯಾಂಕ್ಸ್ ಹೇಳಿದ ಬ್ರೆಜಿಲ್ ಅಧ್ಯಕ್ಷ

By Suvarna NewsFirst Published Jan 23, 2021, 12:18 PM IST
Highlights

ಜಗತ್ತಿನಲ್ಲಿಯೇ ಅತ್ಯಧಿಕ ವ್ಯಾಕ್ಸಿನ್ ತಯಾರಿಸುವ ಭಾರತ ಈಗಾಗಲೇ ಬಹಳಷ್ಟು ದೇಶಗಳಿಗೆ ನೆರವಾಗಿದೆ. ಇದೀಗ ಕೊರೋನಾ ಲಸಿಕೆಗಾಗಿ ಬ್ರೆಜಿಲ್ ಅಧ್ಯಕ್ಷ ಮೋದಿಗೆ ಥ್ಯಾಂಕ್ಸ್ ಹೆಳಿದ್ದಾರೆ.

ಜಗತ್ತಿನಲ್ಲಿಯೇ ಅತ್ಯಧಿಕ ವ್ಯಾಕ್ಸಿನ್ ತಯಾರಿಸುವ ಭಾರತ ಈಗಾಗಲೇ ಬಹಳಷ್ಟು ದೇಶಗಳಿಗೆ ನೆರವಾಗಿದೆ. ಇದೀಗ ಕೊರೋನಾ ಲಸಿಕೆಗಾಗಿ ಬ್ರೆಜಿಲ್ ಅಧ್ಯಕ್ಷ ಮೋದಿಗೆ ಥ್ಯಾಂಕ್ಸ್ ಹೆಳಿದ್ದಾರೆ.

ಕೊರೋನಾ ವೈರಸ್ ಲಸಿಕೆಗಾಗಿ ಬ್ರೆಜಿಲ್‌ನ ಅಧ್ಯಕ್ಷ ಜೈರ್ ಬೊಲ್ಸೊನಾರೋ ಪ್ರಧಾನಿ ನರೇಂದ್ರ ಮೋದಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಜಗತ್ತಿನಲ್ಲಿಯೇ ಅತ್ಯಧಿಕ ವ್ಯಾಕ್ಸಿನ್ ತಯಾರಿಸುವ ಭಾರತ ಈಗಾಗಲೇ ಬಹಳಷ್ಟು ದೇಶಗಳಿಗೆ ಕೊರೋನಾ ಲಸಿಕೆ ನೀಡುವುದರ ಮೂಲಕ ನೆರವಾಗುತ್ತಿದೆ.

ಇಮ್ಯುನಿಟಿ ಹೆಚ್ಚಿಸುತ್ತೆ ಕೊವ್ಯಾಕ್ಸಿನ್, ಬಳಕೆಗೆ ಸುರಕ್ಷಿತ: ಆದ್ರೆ ಈ ಕೆಲವು ಸಮಸ್ಯೆ ಕಾಮನ್

ಭಾರತದಿಂದ ಬ್ರೆಜಿಲ್‌ಗೆ ಸಂಜೀವಿನಿ ಬೆಟ್ಟವನ್ನು ಹೊತ್ತು ತರುವ ಹನುಂತನ ಫೋಟೋ ಪೋಸ್ಟ್ ಮಾಡಿದ್ದಾರೆ. ರಾಮಾಯಣದಲ್ಲಿ ಯುದ್ಧದಲ್ಲಿ ಗಾಯಗೊಂಡ ಲಕ್ಷ್ಮಣನಿಗಾಗಿ ಹನುಂತ ಸಂಜೀವಿನಿ ತರುವ ಅರ್ಥದಲ್ಲಿ ಈ ಚಿತ್ರ ಪೋಸ್ಟ್ ಮಾಡಲಾಗಿದೆ. ಕೊರೋನಾ ವ್ಯಾಕ್ಸಿನ್ ಸಂಜೀವಿನಿ ಔಷಧದಂತೆ ಎಂದೂ ಅವರು ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ನಮಸ್ಕಾರ, ಜಾಗತಿಕ ಅಡಚಣೆಯನ್ನು ಮೆಟ್ಟಿ ನಿಲ್ಲಲು ನಮ್ಮ ಪ್ರಯತ್ನವನ್ನೂ ನಿಮ್ಮೊಂದಿಗೆ ಸೇರಿಸಿ ಪಾಲುದಾರರಾಗಲು ಗೌರವ ಎನಿಸುತ್ತದೆ. ಭಾರತದಿಂದ ಲಸಿಕೆ ರಫ್ತು ಮಾಡಿ ನೆರವಾಗಿದ್ದಕ್ಕೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಮುಂದಿನ ಹಂತದಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಲಸಿಕೆ?

ತಲಾ 20 ಲಕ್ಷ ಕೊರೋನಾ ಲಸಿಕೆಯನ್ನು ಹೇರಿದ್ದ ಎರಡು ವಿಮಾನಗಳು ಮುಂಬೈನಿಂದ ಬ್ರೆಜಿಲ್ ಮತ್ತು ಮೊರೊಕ್ಕಾಗೆ ಹೋಗಿವೆ. ಇನ್ನು ಪಾಕಿಸ್ತಾನಕ್ಕೆ ಔಷಧ ಕಳಿಸುವ ಬಗ್ಗೆ ಪ್ರತಿಕ್ರಿಯಿಸಿದ ವಿದೇಶ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾಸ್ತವನ್ ಮಾತನಾಡಿ, ಪಾಕ್ ಸರ್ಕಾರದಿಂದ ಯಾವುದೇ ಬೇಡಿಕೆ ಬಂದಿಲ್ಲ ಎಂದಿದ್ದಾರೆ.

- Namaskar, Primeiro Ministro

- O Brasil sente-se honrado em ter um grande parceiro para superar um obstáculo global. Obrigado por nos auxiliar com as exportações de vacinas da Índia para o Brasil.

- Dhanyavaad! धनयवाद pic.twitter.com/OalUTnB5p8

— Jair M. Bolsonaro (@jairbolsonaro)
click me!