ಇಮ್ಯುನಿಟಿ ಹೆಚ್ಚಿಸುತ್ತೆ ಕೊವ್ಯಾಕ್ಸಿನ್, ಬಳಕೆಗೆ ಸುರಕ್ಷಿತ: ಆದ್ರೆ ಈ ಕೆಲವು ಸಮಸ್ಯೆ ಕಾಮನ್

By Suvarna NewsFirst Published Jan 23, 2021, 9:43 AM IST
Highlights

ಮೊದಲ ಹಂತದ ಕೊರೋನಾ ಲಸಿಕೆ ಪ್ರಯೋಗ ಮಾಡಲಾಗಿದೆ. ಏನಾಗಿದೆ ರಿಸಲ್ಟ್..? ವ್ಯಾಕ್ಸಿನೇಷನ್ ಪರಿಣಾಮ ಹೇಗಿದೆ..? ಲೆನ್ಸೆಟ್ ವರದಿಯಲ್ಲಿ ರಿವೀಲ್ ಆಗಿದ್ದಿಷ್ಟು..

ನವದೆಹಲಿ(ಜ.23): ಭಾರತದ ಮೊದಲ ದೇಶೀ ಕೊರೋನಾ ಲಸಿಕೆ ಕೊವ್ಯಾಕ್ಸಿನ್ ಮೊದಲ ಹಂತದ ಪ್ರಯೋಗ ಆಗಿದೆ. ಈ ಪ್ರಯೋಗ ಯಶಸ್ವಿಯಾಯ್ತಾ..? ಲಸಿಕೆ ಪಡೆದವರಲ್ಲಿ ಆದ ಬದಲಾವಣೆಗಳೇನು..? ಎಷ್ಟಿದೆ ಕೊವ್ಯಾಕ್ಸಿನ್ ಪವರ್..? ಇಂತಹ ಎಲ್ಲ ಗೊಂದಲಗಳಿಗೆ ಉತ್ತರ ಕೊಟ್ಟಿದೆ ಲೆನ್ಸೆಟ್ ವರದಿ.

ಕೊವ್ಯಾಕ್ಸಿನ್ ಸಹಿಸಿಕೊಳ್ಳುವಷ್ಟು ಸುರಕ್ಷತಾ ಮಟ್ಟವನ್ನು ಹೊಂದಿದೆ. ಹಾಗೆಯೇ ಲಸಿಕೆ ಪಡೆದುಕೊಂಡವರಲ್ಲಿ ಇಮ್ಯುನಿಟಿ ಹೆಚ್ಚಳವಾಗಿದೆ. ಇದು ಸದ್ಯಕ್ಕೆ ಸಮಾಧಾನಕರ ವಿಚಾರ ಎಂದೇ ಹೇಳಬಹುದು. ಭಾರತ್ ಬಯೋಟೆಕ್ ಮತ್ತು ಭಾರತೀಯ ಔಷಧ ಸಂಶೋಧನಾ ಮಂಡಳಿ ಮತ್ತು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯು ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್‌ನನ್ನು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.

6 ದಿನದಲ್ಲಿ 10 ಲಕ್ಷ ಜನರಿಗೆ ಲಸಿಕೆ: ಹೊಸ ವಿಶ್ವದಾಖಲೆ ಬರೆದ ಭಾರತ!

ಇದೀಗ ಭಾರತದಲ್ಲಿ ಕೊವ್ಯಾಕ್ಸಿನ್ 3ನೇ ಹಂತದ ಪ್ರಯೋಗ ನಡೆಯುತ್ತಿದೆ. BBV152 ಕೋಡ್ ನೇಮ್ ಇರುವ ಲಸಿಕೆ ಎಲ್ಲ ವಯಸ್ಕರಲ್ಲೂ ಎಲ್ಲ ರೀತಿಯ ಡೋಸ್‌ನಲ್ಲಿ ಗಂಭೀರವಾದ ಅಡ್ಡಪರಿಣಾಮವನ್ನೇನೂ ಬೀರಿಲ್ಲ ಎಂದು ಭಾರತದ ಬಯೋಟೆಕ್ ಬರಹಗಾರರು ತಿಳಿಸಿದ್ದಾರೆ.

ಕೊರೋನಾ ಲಸಿಕೆಯ ಅಡ್ಡ ಪರಿಣಾಮಗಳು ಗಂಭೀರವಾದದ್ದಲ್ಲ, ಮೈಲ್ಡ್ ಆಗಿರುವ ಕೆಲವು ಪರಿಣಾಮಗಳಾಗಿವೆ. ವರದಿಯಾದ ಅಡ್ಡ ಪರಿಣಾಮಗಳು ಲಸಿಕೆಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಮುಂದಿನ ಹಂತದಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಲಸಿಕೆ?

ಲಸಿಕೆಯ ಸುರಕ್ಷೆಯನ್ನು ಖಾತ್ರಿ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಭಾರತದ 11 ಆಸ್ಪತ್ರೆಗಳಲ್ಲಿ ಲಸಿಕೆ ಪ್ರಯೋಗ ನಡೆದಿತ್ತು. 18ರಿಂದ 55 ವರ್ಷದ ನಡುವಿನ ಜನರಿಗೆ ಯಾವುದೇ ಅಡ್ಡ ಪರಿಣಾಮಗಳಾಗಿಲ್ಲ.

ಜ್ವರ, ತಲೆನೋವು, ಆಯಾಸ ಕೊರೋನಾ ಲಸಿಕೆ ಪಡೆದ ಮೇಲೆ ಆಗುವ ಸಾಧಾರಣ ಅಡ್ಡ ಪರಿಣಾಮಳಾಗಿವೆ. ಎರಡು ಡೋಸ್ ಪಡೆದವರಲ್ಲಿ ಲಸಿಕೆಯಲ್ಲಿರುವ ವೈರಲ್ ಪ್ರೋಟಿನ್ ಆಕ್ಟಿವೇಟ್ ಆಗಿ ಇಮ್ಯುನಿಟಿಯನ್ನು ವೃದ್ಧಿಸುತ್ತದೆ. ಇದು ಭವಿಷ್ಯದಲ್ಲಿ ಆಗುವ ಇನ್ಫೆಕ್ಷನ್‌ಗಳಿಂದ ವ್ಯಕ್ತಿಯನ್ನು ರಕ್ಷಿಸಬಲ್ಲದು. ಭಾರತ್ ಬಯೋಟೆಕ್ ಪ್ರಕಾರ ಕೊವ್ಯಾಕ್ಸಿನ್‌ನ್ನು ಒಂದು ಕೋಣೆಯ ಟೆಂಪರೇಚರ್‌ನಲ್ಲಿ ಕನಿಷ್ಠ 1 ವಾರ ಸ್ಟೋರ್ ಮಾಡಬಹುದಾಗಿದೆ.

click me!