ಉತ್ತರಪ್ರದೇಶದಲ್ಲಿ ಬ್ಯಾನ್ ಆಗುತ್ತಾ ಬುಲ್ಡೋಜರ್? ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ!

By Santosh NaikFirst Published Jun 15, 2022, 8:40 PM IST
Highlights

ಜಮಿಯತ್ ಉಲೇಮಾ-ಎ-ಹಿಂದ್‌ನ ಎರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ವಿಚಾರಣೆ ನಡೆಸಲಿದೆ. ಇವುಗಳಲ್ಲಿ ಯುಪಿ ಮತ್ತು ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಬುಲ್ಡೋಜರ್‌ಗಳ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಆಗ್ರಹವನ್ನು ಮಾಡಲಾಗಿದೆ.
 

ಲಕ್ನೋ (ಜೂನ್ 15): ಉತ್ತರಪ್ರದೇಶದಲ್ಲಿ(Uttar Pradesh) ಅವ್ಯಾಹತವಾಗಿ ನಡೆಯುತ್ತಿದ್ದ ಅಪರಾಧ ಪ್ರಕರಣಗಳ (Crime) ಮೇಲೆ ನಿಯಂತ್ರಣ ಹೇರುವ ಸಲುವಾಗಿ ಯೋಗಿ ಆದಿತ್ಯನಾಥ್ (Yogi Adityanath) ನೇತೃತ್ವದ ಸರ್ಕಾರ ಬುಲ್ಡೋಜರ್‌ಗಳನ್ನು(bulldozer )  ಮೆರೆಸಿತ್ತು. ಅಪರಾಧ ಪ್ರಕರಣಗಳಲ್ಲಿ ಆರೋಪಗಳ ಮನೆಗಳ ಮೇಲೆ ಬುಲ್ಡೋಜರ್ ಹರಿಸುವ ಉತ್ತರ ಪ್ರದೇಶದ ಸರ್ಕಾರದ ವಿರುದ್ಧ ಜಮಿಯತ್ ಉಲೇಮಾ-ಎ-ಹಿಂದ್ (Jamiat Ulema-e-Hind ) ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿದೆ. ದೆಹಲಿಯ (Delhi) ಜಹಾಂಗೀರ್ ಪುರಿ ಹಾಗೂ ಉತ್ತರ ಪ್ರದೇಶದ ವಿಚಾರವಾಗಿ ಜಮಿಯತ್ ಉಲೇಮಾ ಸುಪ್ರೀಂಗೆ ಸಲ್ಲಿಸಿರುವ ಅರ್ಜಿಯನ್ನು ಗುರುವಾರ ವಿಚಾರಣೆಗೆ ಒಳಪಡಿಸಲಿದೆ.

ಅಕ್ರಮಗಳಲ್ಲಿ ಭಾಗಿಯಾದ ಆರೋಪಿಗಳನ್ನು ಗುರುತಿಸಿ, ಅವರ ಉಳಿದುಕೊಂಡಿದ್ದ ಮನೆಗಳ ಮಾಹಿತಿಯನ್ನು ಯೋಗಿ ಸರ್ಕಾರ ತೆಗೆದುಕೊಳ್ಳುತ್ತಿತ್ತು. ಹಾಗೇನಾದರೂ ಮನೆಗಳು ಅಕ್ರಮವಾಗಿ ಕಟ್ಟಿದ್ದಲ್ಲಿ, ಅವರಿಗೆ ಸೂಚನೆಯನ್ನು ನೀಡಿ ಬುಲ್ಡೋಜರ್ ಬಳಸಿ ಮನೆಯನ್ನು ಧ್ವಂಸ ಮಾಡುವ ಕೆಲಸಗಳು ನಡೆಯುತ್ತಿದ್ದವು. ಇದರ ಕುರಿತಾಗಿ ಜಮಿಯತ್ ಉಲೇಮಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇದರೊಂದಿಗೆ ದೆಹಲಿಯ ಜಹಾಂಗೀರ್‌ಪುರಿ ಪ್ರಕರಣದಲ್ಲಿ ಮಸೀದಿಯ ಆವರಣದಲ್ಲಿ ಬುಲ್ಡೋಜರ್‌ಗಳ ಕಾರ್ಯಾಚರಣೆಯ ವಿರುದ್ಧವೂ ನ್ಯಾಯಾಲಯವು ವಿಚಾರಣೆ ನಡೆಸಲಿದೆ.

 ಪ್ರಯಾಗ್‌ರಾಜ್‌ನಲ್ಲಿರುವ (Prayagraj) ಜಾವೇದ್ ಅಹ್ಮದ್ (Javed Ahmad) ಅವರ ಆಸ್ತಿಯ ಮೇಲಿನ ಕ್ರಮದ ನಂತರ ಜಮಿಯತ್ ಉಲೇಮಾ-ಎ-ಹಿಂದ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದೆ. ಸುಪ್ರೀಂ ಕೋರ್ಟ್‌ನ ಬಾಗಿಲು ತಟ್ಟಿರುವ ಸಂಘಟನೆಯು, ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದೆ ಇನ್ನು ಮುಂದೆ ಯಾವುದೇ ನೆಲಸಮವನ್ನು ನಡೆಸದಂತೆ ನೋಡಿಕೊಳ್ಳಲು ಯುಪಿ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದೆ. ಉತ್ತರ ಪ್ರದೇಶ ಸರ್ಕಾರ ಜಾರಿಗೆ ತಂದಿರುವ ಕಾನೂನು ಮತ್ತು ಮುನ್ಸಿಪಲ್ ಕಾನೂನುಗಳನ್ನು ಉಲ್ಲಂಘಿಸಿ ಕೆಡವಲಾದ ಮನೆಗಳಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಜಮೀಯತ್ ಉಲೇಮಾ-ಎ-ಹಿಂದ್ ತನ್ನ ಅರ್ಜಿಯಲ್ಲಿ ಮನವಿ ಮಾಡಿದೆ.

ಪ್ರಸ್ತುತ ಪರಿಸ್ಥಿತಿ ಹೆಚ್ಚು ಚಿಂತಾಜನಕವಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ, ದಂಡನಾತ್ಮಕ ಕ್ರಮವಾಗಿ ಇದೇ ಸಂದರ್ಭಗಳಲ್ಲಿ ವಾಯುವ್ಯ ದೆಹಲಿಯಲ್ಲಿ ನಡೆಸಲಾಗುತ್ತಿರುವ ನೆಲಸಮವನ್ನು ಸುಪ್ರೀಂ ಕೋರ್ಟ್ ಈಗಾಗಲೇ ತಡೆಯಲು ಆದೇಶಿಸಿದೆ. ಉತ್ತರ ಪ್ರದೇಶದ ಹಲವು ಪ್ರದೇಶಗಳಲ್ಲಿ ಶುಕ್ರವಾರ (ಜೂನ್ 10) ನಡೆದ ಹಿಂಸಾಚಾರದ ನಂತರ, ಯೋಗಿ ಸರ್ಕಾರವು ಬುಲ್ಡೋಜರ್ ಮೂಲಕ ಕಠಿಣ ಕ್ರಮ ಕೈಗೊಂಡಿದ್ದರು.

ಮುಗ್ಧರನ್ನ ಮುಟ್ಟಲ್ಲ..ದುಷ್ಟರನ್ನ ಬಿಡಲ್ಲ, ಗಲಭೆಕೋರರ ಮನೆಗೇ ನುಗ್ಗಿತು ಯೋಗಿ ಬುಲ್ಡೋಜರ್..!

ಯುಪಿಯಲ್ಲಿ ಹಿಂಸಾಚಾರವನ್ನು ಹರಡುವವರ ಆಸ್ತಿಗಳ ಮೇಲೆ ರಾಜಕೀಯ ಗದ್ದಲವೂ ಪ್ರಾರಂಭವಾಗಿದೆ. ಪ್ರತಿಪಕ್ಷಗಳು ಇದನ್ನು ಕಾನೂನು ಉಲ್ಲಂಘನೆ ಎಂದು ಕರೆದಿದ್ದಲ್ಲದೆ ಸ್ಥಳೀಯ ಆಡಳಿತದ ಕ್ರಮವನ್ನು ಪ್ರಶ್ನಿಸಿದರು. ಇದೇ ವೇಳೆ ಬಿಜೆಪಿ ನಾಯಕರು ಇಂತಹ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಕಿಡಿಗೇಡಿಗಳಿಗೆ ಉತ್ತರವಾಗಿ ಕಠಿಣ ಕ್ರಮವನ್ನೇ ಹೇಳುತ್ತಿದ್ದಾರೆ.
ಯೋಗಿ ಆದಿತ್ಯನಾಥ್ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಾಕಷ್ಟು ಕಿಡಿಗೇಡಿಗಳು ಸ್ವತಃ ತಾವಾಗಿಯೇ ಬಂದು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದರು. ನಮ್ಮ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ, ಆದರೆ, ಯಾವುದೇ ಕಾರಣಕ್ಕೂ ಮನೆಯನ್ನು ಧ್ವಂಸ ಮಾಡುವ ಕೆಲಸ ಮಾಡಬೇಡಿ ಎಂದು ಬೇಡಿಕೊಂಡಿದ್ದರು.

Prophet Comments Row : ಕಲ್ಲು ತೂರಿದವರ ಮೇಲೆ ಮುಗಿಬಿದ್ದ ಬುಲ್ಡೋಜರ್, ರಾಂಚಿಯಲ್ಲಿ ಇಬ್ಬರ ಸಾವು!

ಇನ್ನು ಉತ್ತರ ಪ್ರದೇಶದಲ್ಲಿ ನಡೆದ ಇತ್ತೀಚಿನ ಪ್ರಕರಣದಲ್ಲಿ ಸಾರ್ವಜನಿಕ ಶೌಚಾಲಯದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವಾಗಿತ್ತು. ಸಿಸಿಟಿವಿ ಮೂಲಕ ಆರೋಪಿಯನ್ನು ಪೊಲೀಸರು ಗುರುತಿಸಿದ್ದರು. ಆದರೆ, ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ. ಕೆಲ ದಿನಗಳ ಬಳಿಕ ಅವರ ಮನೆಯ ಎದುರು ಸರ್ಕಾರ ಬುಲ್ಡೋಜರ್ ನಿಲ್ಲಿಸಿದ ಬಳಿಕ, ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ.

Latest Videos

click me!