
ಭೋಪಾಲ್: ಮಧ್ಯಪ್ರದೇಶದದಲ್ಲಿ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಮತದಾರರ ಸೆಳೆಯಲು ಹಲವು ಯತ್ನಗಳನ್ನು ಮಾಡುತ್ತಿವೆ. ಈ ಮಧ್ಯೆ 17 ಕೊಲೆ ಪ್ರಕರಣ ಸೇರಿದಂತೆ ತನ್ನ ವಿರುದ್ಧ 90 ಕೇಸುಗಳನ್ನು ಹೊಂದಿದ್ದ ಮಾಜಿ ಡಕಾಯಿತ ಮಲ್ಖನ್ ಸಿಂಗ್ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್‌ನಾಥ್ (Kamal Nath) ಉಪಸ್ಥಿತಿಯಲ್ಲಿ ಮಲ್ಕನ್ ಸಿಂಗ್ (Malkhan Singh) ಕಾಂಗ್ರೆಸ್ ಸದಸ್ಯತ್ವ ಪಡೆದುಕೊಂಡಿದ್ದಾರೆ.
ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಖನ್ ಸಿಂಗ್, ಭಾರತೀಯ ಜನತಾ ಪಕ್ಷವು (BJP) ತತ್ವಬದ್ಧ ಪಕ್ಷವಾಗಿದೆ ಎಂದು ನಾನು ಭಾವಿಸಿದ್ದೆ, ಆದರೆ ಅದು ಬರೀ ಭ್ರಮೆಯಾಗಿದೆ. ಬಿಜೆಪಿ ನಾನು ಎಣಿಸಿದಂತೆ ಇಲ್ಲ, ನಾನು ಆ ಪಕ್ಷವನ್ನು ದ್ವೇಷಿಸುತ್ತೇನೆ. ಬಿಜೆಪಿ ಸರಕಾರವನ್ನು ಬದಲಾಯಿಸಬೇಕಾಗಿದೆ ಎಂದು ಹೇಳಿದ್ದಾರೆ. ಮಲ್ಖನ್ ಸಿಂಗ್ ಕಾಂಗ್ರೆಸ್ ಸೇರ್ಪಡೆ ವೇಳೆ ಮಧ್ಯಪ್ರದೇಶ ವಿಧಾನಸಭೆ ವಿರೋಧ ಪಕ್ಷದ ನಾಯಕ ಗೋವಿಂದ್ ಸಿಂಗ್, ಮಾಜಿ ರಾಜ್ಯಾಧ್ಯಕ್ಷ ಹಾಗೂ ಬುಡಕಟ್ಟು ನಾಯಕ ಕಾಂತಿಲಾಲ್ ಬುರಿಯಾ (Kantilal Bhuria) ಉಪಸ್ಥಿತರಿದ್ದರು.
ಸಚಿವ ಸಿಂಧಿಯಾ ಕ್ಷೇತ್ರದಲ್ಲಿ ಪ್ರಿಯಾಂಕಾ ಪ್ರಚಾರ ಕಹಳೆ
2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ, ನಾನು ಕಾಂಗ್ರೆಸ್ ಪರ ಪ್ರಚಾರ ಮಾಡಲಿದ್ದೇನೆ ಹಾಗೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕಮಲನಾಥ್ ಹೇಳಿದ್ದಾರೆ. ಈ ಹಿಂದೆ ನಾನು ಅನ್ಯಾಯದ ವಿರುದ್ಧ ಗನ್ (Gun) ಬಳಸಿದ್ದೆ, ಆದರೆ ಇಂದು ಅನ್ಯಾಯದ ವಿರುದ್ಧ ನಾನು ಬೊಬ್ಬೆ ಹೊಡೆಯುತ್ತಿದ್ದೇನೆ 2023ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಮನೆಗೆ ಕಳುಹಿಸಲಿದ್ದೇವೆ ಹಾಗೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕಮಲನಾಥ್ (Kamalnath) ಕುಳಿತುಕೊಳ್ಳಿದ್ದಾರೆ ಎಂದು ಮಲ್ಖನ್ ಸಿಂಗ್ ಹೇಳಿದ್ದಾರೆ.
ಬಿಜೆಪಿಗೆ ತತ್ವ ಸಿದ್ಧಾಂತಗಳಿಲ್ಲ
ಅನ್ಯಾಯ ಮತ್ತು ದೌರ್ಜನ್ಯಗಳು ಹೆಚ್ಚಾಗದಿದ್ದರೆ, ನಾನು ಬಂಡಾಯಗಾರನಾಗುತ್ತಿರಲಿಲ್ಲ, ಒಂದು ಕಾಲದಲ್ಲಿ ಬಿಜೆಪಿ ತತ್ವ ಸಿದ್ಧಾಂತಗಳಿರುವ ಪಕ್ಷ ಎಂದು ತಿಳಿದು ನಾನು ಅದರ ಪರ ಪ್ರಚಾರ ಮಾಡಿದ್ದೆ, ಆದರೆ ಈಗ ಬಿಜೆಪಿ ಆಡಳಿತದಲ್ಲಿ ಅನ್ಯಾಯ, ದೌರ್ಜನ್ಯಗಳು ಹೆಚ್ಚಿವೆ. ಅತ್ಯಾಚಾರಗಳು ನಡೆಯುತ್ತಿವೆ, ಜನರ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ, ಅದಕ್ಕಾಗಿಯೇ ನಾನು ಬಿಜೆಪಿ ತೊರೆದಿದ್ದೇನೆ ಎಂದು ಹೇಳಿದ್ದಾರೆ. ಈ ಹಿಂದೆ ಮಲ್ಖನ್ ಸಿಂಗ್ ಅವರು 2014ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಇತ್ತ ಮಲ್ಖನ್ ಸಿಂಗ್ ಮಾತಿಗೆ ಸಹಮತ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ಕಮಲ್ ನಾಥ್, ಇಡೀ ರಾಜ್ಯದಲ್ಲಿ ಇದೇ ರೀತಿ ಬಿಜೆಪಿ ವಿರೋಧಿ ಅಲೆ ಇದೆ ಎಂದಿದ್ದಾರೆ.
ಬಿಹಾದ್‌ನ ದರೋಡೆಕೋರ ಮಲ್ಕನ್ ಸಿಂಗ್
ಬಿಹಾದ್ ಪ್ರದೇಶದ ದರೋಡೆಕೋರ ರಾಜ ಎಂದೇ ಕುಖ್ಯಾತಿ ಪಡೆದಿದ್ದ ಮಲ್ಖನ್ ಸಿಂಗ್, ಗ್ರಾಮದ ರಾಮಜಾನಕಿ ದೇವಸ್ಥಾನಕ್ಕೆ ಸೇರಿದ 25 ಎಕರೆ ಭೂಮಿಯನ್ನು ದೇವಸ್ಥಾನಕ್ಕೆ ಸೇರಿಸಲು ಶಸ್ತ್ರಾಸ್ತ್ರ ಕೈಗೆ ತೆಗೆದುಕೊಂಡಿದ್ದರು. ಆ ಸಮಯದಲ್ಲಿ ಅವರು ಗ್ರಾಮದ ಪಂಚರೂ ಆಗಿದ್ದರು. 1982ರಲ್ಲಿ ಮಲ್ಖನ್ ಸಿಂಗ್ ಹಾಗೂ ಆತನ ಸಂಗಡಿಗರು ಅಂದಿನ ಸಿಎಂ ಅರ್ಜುನ್ ಸಿಂಗ್ ಮುಂದೆ ಶರಣಾಗಿದ್ದರು. ಆ ಸಂದರ್ಭದಲ್ಲಿ 30 ಸಾವಿರಕ್ಕೂ ಜನ ಅಲ್ಲಿ ಸೇರಿದ್ದರು, ಇದಾದ ನಂತರ ಮಲ್ಖನ್ ಸಿಂಗ್‌ಗೆ (Arjun Singh) 6 ವರ್ಷ ಜೈಲು ಶಿಕ್ಷೆಯಾಗಿತ್ತು. ನಂತರ 1989ರಲ್ಲಿ ಆತನ ವಿರುದ್ಧವಿದ್ದ ಎಲ್ಲಾ ಕೇಸ್‌ಗಳು ಖುಲಾಸೆಗೊಂಡು ಜೈಲಿನಿಂದ ಬಿಡುಗಡೆಯಾಗಿದ್ದ.
ಶಾಲಾ ಬಾಲಕಿಯರ ಕುಡಿಯುವ ನೀರಿನ ಬಾಟಲ್‌ನಲ್ಲಿ ಮೂತ್ರ ಮಿಕ್ಸ್, ಮಧ್ಯಪ್ರದೇಶದಲ್ಲಿ ಮತ್ತೊಂದು ಘಟನೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ