ಮುಂದಿನ ವರ್ಷ ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಭೇಟಿ? ಪಾಕ್ ಸಚಿವರ ಹೇಳಿಕೆ ಬಳಿಕ ಸಂಚಲನ!

Published : Jul 31, 2026, 01:28 PM IST
will pakistan invite PM Modi for sco summit next year 2027 what Islamabad said

ಸಾರಾಂಶ

2027ರಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಗೆ ಭಾರತವನ್ನು ಆಹ್ವಾನಿಸುವುದಾಗಿ ಪಾಕಿಸ್ತಾನ ಹೇಳಿದೆ. ಈ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು 2015ರ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆಯೇ ಎಂಬ ಕುತೂಹಲ ಮೂಡಿದೆ.

ಮುಂದಿನ ವರ್ಷ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಗೆ ಎಲ್ಲಾ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರನ್ನು ಅಥವಾ ಸರ್ಕಾರವನ್ನು ಆಹ್ವಾನಿಸಲಿದೆ. ಅಂದರೆ ಪಾಕಿಸ್ತಾನ ಸರ್ಕಾರ ಭಾರತವನ್ನು ಆಹ್ವಾನಿಸಲಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಹೇಳಿರುವ ಹಿನ್ನೆಲೆ ಕುತೂಹಲ ಮೂಡಿಸಿದೆ.

ಒಂದು ವೇಳೆ ಪಾಕಿಸ್ತಾನ ಆಹ್ವಾನಿಸಿದರೆ 2027 ರಲ್ಲಿ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಬಹಳ ಕುತೂಹಲ ಮೂಡಿಸಿದೆಯಾದರೂ, ಪಾಕಿಸ್ತಾನಕ್ಕೆ ಹೋಗುವ ಬಗ್ಗೆ ಅನುಮಾನವಿದೆ .

ಪಾಕಿಸ್ತಾನ ಹೇಳಿದ್ದೇನು?

ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ತಾಹಿರ್ ಅಂದ್ರಾಬಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ' ಎಲ್ಲಾ SCO ಸದಸ್ಯ ರಾಷ್ಟ್ರಗಳನ್ನು ಶೃಂಗಸಭೆಗೆ ಆಹ್ವಾನಿಸಲಾಗುವುದು ಎಂದು ಹೇಳಿದ್ದಾರೆ. ಎಲ್ಲಾ ಸದಸ್ಯ ರಾಷ್ಟ್ರಗಳ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಸರ್ಕಾರಗಳು ಸಹ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ. ಇದರರ್ಥ ಭಾರತವೂ ಆಹ್ವಾನಿತ ದೇಶಗಳಲ್ಲಿ ಸೇರಿದೆ. SCO ಕಾರ್ಯವಿಧಾನಗಳು ಮತ್ತು ಶಿಷ್ಟಾಚಾರಗಳ ಅಡಿಯಲ್ಲಿ, ಎಲ್ಲಾ ಸದಸ್ಯ ರಾಷ್ಟ್ರಗಳನ್ನು ಆಹ್ವಾನಿಸುವುದು ಆತಿಥೇಯ ದೇಶದ ಜವಾಬ್ದಾರಿಯಾಗಿದೆ ಎಂದು ಪಾಕಿಸ್ತಾನದ ವಕ್ತಾರರು ಹೇಳಿದ್ದಾರೆ.

ಪ್ರಧಾನಿ ಮೋದಿ ಪ್ರಧಾನಿ ಬಳಿಕ ಮೊದಲ ಮತ್ತು ಕೊನೆಯ ಭೇಟಿ:

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಪಾಕಿಸ್ತಾನಕ್ಕೆ ಯಾವುದೇ ಭೇಟಿ ನೀಡಿಲ್ಲ. ಪ್ರಧಾನಿಯಾಗಿ ಡಿಸೆಂಬರ್ 25, 2015 ರಂದು ಆಗಿನ ಪಾಕಿಸ್ತಾನಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿ ಮಾಡಿದ್ದರು. ಅದು ಲಾಹೋರ್‌ನಲ್ಲಿ ಒಂದು ಚಿಕ್ಕ ಭೇಟಿಯಾಗಿತ್ತು. ಅದೇ ಮೊದಲ ಭೇಟಿ ಮತ್ತು ಅದೇ ಕೊನೆಯದಾಗಿತ್ತು. ಇದೀಗ ಒಂದು ವೇಳೆ ಪಾಕಿಸ್ತಾನ ಸರ್ಕಾರ ಆಹ್ವಾನಿಸಿದರೆ ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೋ ಇಲ್ವೋ ಎಂಬ ಕುತೂಹಲ ಮೂಡಿಸಿದೆ. ಅದಾಗ್ಯೂ ಭದ್ರತೆ ಕಾರಣಗಳಿಗಾಗಿ ಹೋಗುವ ಸಾಧ್ಯತೆ ಕಡಿಮೆ.

ಏನಿದು SCO ಶೃಂಗಸಭೆ? ಸದಸ್ಯ ರಾಷ್ಟ್ರಗಳು ಯಾವವು?

SCO ಶೃಂಗಸಭೆಯು 2027 ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿದೆ. SCO ಬಹುಪಕ್ಷೀಯ ಸಭೆಗಳ ಭಾಗವಾಗಿ ಸದಸ್ಯ ರಾಷ್ಟ್ರಗಳಿಗೆ ಅಂತಹ ಆಹ್ವಾನಗಳನ್ನು ಕಳುಹಿಸಲಾಗುತ್ತದೆ. SCO ಶೃಂಗಸಭೆಯು ಪ್ರಮುಖ ವಾರ್ಷಿಕ ಅಂತರರಾಷ್ಟ್ರೀಯ ವೇದಿಕೆಯಾಗಿದೆ. ಇದರಲ್ಲಿ ಚೀನಾ, ರಷ್ಯಾ, ಭಾರತ, ಪಾಕಿಸ್ತಾನ, ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಇರಾನ್ ಹಾಗೂ ಬೆಲಾರಸ್ ಸೇರಿವೆ.

ಜೂನ್ 15, 2001 ರಂದು ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಸ್ಥಾಪನೆಯಾದ ಈ ಸಂಸ್ಥೆಯ ಉದ್ದೇಶವೆಂದರೆ ಈ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಆರ್ಥಿಕ ಸಮೃದ್ಧಿಯನ್ನು ಉತ್ತೇಜಿಸುವುದು. ಇದರ ಸರ್ವೋಚ್ಚ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ರಾಷ್ಟ್ರ ಮುಖ್ಯಸ್ಥರ ಮಂಡಳಿ (CHS), ವಾರ್ಷಿಕವಾಗಿ ಸದಸ್ಯ ರಾಷ್ಟ್ರಗಳಿಂದ ಅಧ್ಯಕ್ಷತೆಯಲ್ಲಿ ವಾರ್ಷಿಕವಾಗಿ ರಾಷ್ಟ್ರ ಮುಖ್ಯಸ್ಥರ ಶೃಂಗಸಭೆಯನ್ನು ಸಹ ಆಯೋಜಿಸುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Digital India: ದೇಶದ ಮೊದಲ ಮೊಬೈಲ್​ಫೋನ್​ ಕರೆಗಿಂದು 31 ವರ್ಷ: ಅಂದು ಕಾಲ್​ ಮಾಡಿದ್ಯಾರು? ಫೋನ್​ ನಡೆದು ಬಂದ ಪಯಣ
ದೇಶದ ಅತಿ ಸಿರಿವಂತ ಮುಖ್ಯಮಂತ್ರಿಗಳ ಪಟ್ಟಿ ಬಿಡುಗಡೆ: ಡಿ.ಕೆ. ಶಿವಕುಮಾರ್‌ ನಂ. 1, ಅತೀ ಬಡ ಸಿಎಂ ಇವರೇ ನೋಡಿ!