ಕೋವಿಡ್‌ ರೀತಿ ಲಾಕ್ಡೌನ್‌ ಜಾರಿ ಆಗುತ್ತಾ ? : ಕೇಂದ್ರ ಹೇಳೋದೇನು ?

Kannadaprabha News   | Kannada Prabha
Published : Mar 28, 2026, 03:40 AM IST
india lockdown

ಸಾರಾಂಶ

ಮಧ್ಯಪ್ರಾಚ್ಯ ಯುದ್ಧದ ಕಾರಣ ದೇಶದಲ್ಲಿ ದೇಶದಲ್ಲಿ ತೈಲ ಹಾಹಾಕಾರ ಉಂಟಾಗಬಹುದು. ಹೀಗಾಗಿ ತೈಲ ಉಳಿತಾಯಕ್ಕಾಗಿ ಕೋವಿಡ್‌ ಅವಧಿಯಂತೆಯೇ ಲಾಕ್‌ಡೌನ್‌ ಘೋಷಿಸಲಾಗುತ್ತದೆ’ ಎಂಬ ವದಂತಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದ್ದು, ‘ಇಂಥ ಸುಳ್ಳು ಸುದ್ದಿಗಳನ್ನು ನಂಬಬೇಡಿ, ಒಗ್ಗಟ್ಟಾಗಿರಿ’ ಎಂದು ಮನವಿ ಮಾಡಿದೆ.

ನವದೆಹಲಿ: ‘ಮಧ್ಯಪ್ರಾಚ್ಯ ಯುದ್ಧದ ಕಾರಣ ದೇಶದಲ್ಲಿ ದೇಶದಲ್ಲಿ ತೈಲ ಹಾಹಾಕಾರ ಉಂಟಾಗಬಹುದು. ಹೀಗಾಗಿ ತೈಲ ಉಳಿತಾಯಕ್ಕಾಗಿ ಕೋವಿಡ್‌ ಅವಧಿಯಂತೆಯೇ ಲಾಕ್‌ಡೌನ್‌ ಘೋಷಿಸಲಾಗುತ್ತದೆ’ ಎಂಬ ವದಂತಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದ್ದು, ‘ಇಂಥ ಸುಳ್ಳು ಸುದ್ದಿಗಳನ್ನು ನಂಬಬೇಡಿ, ಒಗ್ಗಟ್ಟಾಗಿರಿ’ ಎಂದು ಮನವಿ ಮಾಡಿದೆ.

ವದಂತಿ ನಂಬದಂತೆ ಕೋರಿದ್ದಾರೆ

ಸಂಸತ್ತಿನಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಟ್ವೀಟ್‌ ಮಾಡಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್‌ ಸಿಂಗ್‌ ಪುರಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ವದಂತಿ ನಂಬದಂತೆ ಕೋರಿದ್ದಾರೆ.

‘ಕೋವಿಡ್‌ ಸಮಯದಂತೆಯೇ ಭಾರತದಲ್ಲಿ ಲಾಕ್‌ಡೌನ್ ಘೋಷಿಸಲಾಗುತ್ತದೆ ಎಂಬ ವದಂತಿಗಳು ಸಂಪೂರ್ಣವಾಗಿ ಸುಳ್ಳು. ಅಂತಹ ಯಾವುದೇ ಪ್ರಸ್ತಾವ ಭಾರತ ಸರ್ಕಾರದ ಪರಿಶೀಲನೆಯಲ್ಲಿಲ್ಲ. ಇಂತಹ ಸಮಯದಲ್ಲಿ, ನಾವು ಶಾಂತವಾಗಿ, ಜವಾಬ್ದಾರಿಯುತವಾಗಿ ಮತ್ತು ಒಗ್ಗಟ್ಟಿನಿಂದ ಇರುವುದು ಮುಖ್ಯ. ಮೋದಿ ಸರ್ಕಾರ ಎಲ್ಲ ಅಗತ್ಯ ತೈಲ ಹಾಗೂ ಅನಿಲ ದಾಸ್ತಾನು ಮಾಡಿದೆ. ಚಿಂತಿಸುವ ಅಗತ್ಯವಿಲ್ಲ’ ಎಂದಿದ್ದಾರೆ.

ಪಾಕ್‌ನಲ್ಲಿ ಇತ್ತೀಚೆಗೆ ತೈಲ ಉಳಿಸಲು ಸರ್ಕಾರವು ಶಾಲೆಗಳಿಗೆ ರಜೆ ಹಾಗೂ ಸರ್ಕಾರಿ ನೌಕರರಿಗೆ ವರ್ಕ್‌ ಫ್ರಂ ಹೋಂ ವ್ಯವಸ್ಥೆ ಮಾಡಿತ್ತು.

ಏನಿದು ವದಂತಿ?

- ಮಧ್ಯಪ್ರಾಚ್ಯದಲ್ಲಿನ ಯುದ್ಧದಿಂದಾಗಿ ತೈಲ, ಅನಿಲ ಪೂರೈಕೆಗೆ ಭಾರಿ ಸಮಸ್ಯೆ

- ಹೀಗಾಗಿ ಹಲವು ದೇಶಗಳಲ್ಲಿ ಶಾಲಾ-ಕಾಲೇಜು, ಕಚೇರಿಗಳಿಗೆ ರಜೆ ಘೋಷಣೆ

- ತೈಲ ಉಳಿಸುವ ಉದ್ದೇಶದಿಂದ ಕೋವಿಡ್‌ ರೀತಿ ದೇಶದಲ್ಲಿ ಲಾಕ್ಡೌನ್‌ ವದಂತಿ

- ಅಂತಹ ಪ್ರಸ್ತಾವವೇ ಪರಿಶೀಲನೆಯಲ್ಲಿಲ್ಲ ಎಂದ ಸಚಿವರಾದ ನಿರ್ಮಲಾ, ಪುರಿ

- ದೇಶದಲ್ಲಿ ಸಾಕಷ್ಟು ತೈಲ, ಅನಿಲ ದಾಸ್ತಾನು ಇದೆ, ಚಿಂತೆ ಬೇಡ ಎಂದು ಸ್ಪಷ್ಟನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸುಂಕ ಭಾರಿ ಕಟ್‌ : ಆದ್ರೂ ಪೆಟ್ರೋಲ್‌ ದರ ಇಳಿಯಲ್ಲ- ಏರೋದೂ ಇಲ್ಲ
ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಹಿಮಪಾತಕ್ಕೆ 7 ಬಲಿ: ಹಿಮದಡಿ ಹೂತು ಹೋದ ಡಜನ್‌ಗಟ್ಟಲೇ ವಾಹನಗಳು