ಕಾಡು ಬಿಟ್ಟು ನಾಡು ನೋಡಲು ಬಂದ ಕರಡಿ: ಓಟಕಿತ್ತ ಜನ: ವೈರಲ್ ವೀಡಿಯೋ

Published : Aug 13, 2023, 02:15 PM ISTUpdated : Aug 13, 2023, 02:20 PM IST
ಕಾಡು ಬಿಟ್ಟು ನಾಡು ನೋಡಲು ಬಂದ ಕರಡಿ:  ಓಟಕಿತ್ತ ಜನ: ವೈರಲ್ ವೀಡಿಯೋ

ಸಾರಾಂಶ

ಕರಡಿಯೊಂದು ಕಾಡು ಬಿಟ್ಟು ನಾಡು ನೋಡಲು ಬಂದಿದೆ. ಕಾಡಿನಲ್ಲಿರಬೇಕಾದ ಪ್ರಾಣಿ ನಾಡಿನಲ್ಲಿರುವುದನ್ನು ಕಂಡು ಜನ ಓಡಲು ಶುರು ಮಾಡಿದ್ದಾರೆ. ತೆಲಂಗಾಣದ ಕರೀಂನಗರದಲ್ಲಿ ಈ ಘಟನೆ ನಡೆದಿದೆ.

ಹೈದರಾಬಾದ್‌: ಕರಡಿಯೊಂದು ಕಾಡು ಬಿಟ್ಟು ನಾಡು ನೋಡಲು ಬಂದಿದೆ. ಕಾಡಿನಲ್ಲಿರಬೇಕಾದ ಪ್ರಾಣಿ ನಾಡಿನಲ್ಲಿರುವುದನ್ನು ಕಂಡು ಜನ ಓಡಲು ಶುರು ಮಾಡಿದ್ದಾರೆ. ತೆಲಂಗಾಣದ ಕರೀಂನಗರದಲ್ಲಿ ಈ ಘಟನೆ ನಡೆದಿದೆ. ಶನಿವಾರ ಕರೀಂ ನಗರದ ರಸ್ತೆಗಳಲ್ಲಿ ಕರಡಿಯೊಂದು ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿರುವ ಹಾಗೂ ಕರಡಿಯನ್ನು ನೋಡಿ ಜನರು ಕೂಡ ಗಾಬರಿಯಿಂದ ಓಡುತ್ತಿರುವ  ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ.  ಸದ್ಯ ಈ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. 

ಶುಕ್ರವಾರ ರಾತ್ರಿ ಶ್ರೀಪುರಂ (Sripuram)ಪ್ರದೇಶವನ್ನು ದಾಟಿ ಶನಿವಾರ ಬೆಳಗ್ಗೆ ರೆಕುರ್ತಿ ಪ್ರದೇಶಕ್ಕೆ  (Rekurthi area) ಕರಡಿಯೊಂದು ಬಂದಿತ್ತು. ಶ್ರೀಪುರಂ ಕಾಲೋನಿಯ ಜನ ಈ ಕರಡಿ ಜನವಸತಿ ಪ್ರದೇಶದಲ್ಲಿ ಓಡಾಡುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಜೊತೆಗೆ ಅಲ್ಲಿದ್ದ ಸಿಸಿಟಿವಿಯಲ್ಲೂ ಕರಡಿ ಆ ಪ್ರದೇಶದಲ್ಲಿ ಓಡಾಡುತ್ತಿರುವ ದೃಶ್ಯ ಸೆರೆ ಆಗಿತ್ತು. 

ಚೀನಾದಲ್ಲಿ ಯಾವುದೂ ಅಸಾಧ್ಯ ಅಲ್ಲ ಬಿಡಿ: ಮನುಷ್ಯನಂತೆ ಕಾಣುವ ಕರಡಿ ವೀಡಿಯೋ ವೈರಲ್

ಇತ್ತ ತಾವಿರುವ ಪ್ರದೇಶದಲ್ಲಿ ಕರಡಿಯನ್ನು ನೋಡಿದ ಜನ ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ನಂತರ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕರಡಿಗಾಗಿ ಶೋಧ ನಡೆಸಿದ್ದಾರೆ. ಪೊದೆಗಳ ಬಳಿ ಬಲೆ ಇಟ್ಟು ಆರು ಗಂಟೆಗೂ ಹೆಚ್ಚು ಕಾಲ ಕರಡಿಯನ್ನು ಸೆರೆ ಹಿಡಿಯಲು ಪ್ರಯತ್ನ ನಡೆಸಿದ್ದು, ಕಡೆಗೂ ಕರೀಂನಗರ ಅರಣ್ಯ  ಸಿಬ್ಬಂದಿ ಹಾಗೂ ಕರಡಿ ವಾರಂಗಲ್ ಮೃಗಾಲಯದ ರಕ್ಷಣಾ ತಂಡಕ್ಕೆ (Warangal zoo rescue teams) ಕರಡಿ ಸೆರೆ ಸಿಕ್ಕಿದೆ ಎಂದು ತಿಳಿದು ಬಂದಿದೆ. 

ಚಿತ್ರದುರ್ಗ: ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದ ಕರಡಿ ಕೊನೆಗೂ ಸೆರೆ

ರೈತನ ಮೇಲೆ ಏಕಾಏಕಿ ದಾಳಿ ಮಾಡಿದ ಕರಡಿ: ತೀವ್ರ ಗಾಯ

ರೈತನ ಮೇಲೆ ಕರಡಿ ದಾಳಿ ಮಾಡಿ ರೈತನನ್ನು ತೀವ್ರ ಗಾಯಗೊಳಿಸಿದ ಘಟನೆ ತುಮಕೂರು ಜಿಲ್ಲೆ, ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದಲ್ಲಿ ಕಳೆದ ಜುಲೈನಲ್ಲಿ ನಡೆದಿತ್ತು ಪ್ರತಾಪರೆಡ್ಡಿ(45) ಕರಡಿ ದಾಳಿಗೊಳಗಾದ ರೈತ. ತನ್ನ ಜಮೀನಿಗೆ ರೈತ ಪ್ರತಾಪರೆಡ್ಡಿ ತೆರಳುತ್ತಿದ್ದಾಗ ಕರಡಿಯು ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಪ್ರತಾಪರೆಡ್ಡಿ ತಲೆ‌ ಮತ್ತು ಮುಖಕ್ಕೆ ತೀವ್ರ ಗಾಯವಾಗಿದ್ದು, ಅವರನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಗಾಯಾಳುವನ್ನ ಭೇಟಿ ಮಾಡಿದ್ದಾರೆ. ಇನ್ನು ಪಾವಗಡ ತಾಲೂಕಿನಲ್ಲಿ ಮನುಷ್ಯನ ಮೇಲೆ ಕರಡಿ ದಾಳಿ ನಡೆಯುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದರು. ಸದ್ಯ ಪಾವಗಡ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹೂತಗೆರೆ ಗ್ರಾಮದಲ್ಲಿ ಕರಡಿ ಪ್ರತ್ಯಕ್ಷ:

ಮದ್ದೂರು ತಾಲೂಕಿನ ಹೂತಗೆರೆ ಗ್ರಾಮದಲ್ಲಿ ಕರಡಿ ಪ್ರತ್ಯಕ್ಷವಾಗಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಗ್ರಾಮದ ಕಲ್ಲೇಗೌಡರ ಮನೆ ಬಳಿ ಕರಡಿ ಕಾಣಿಸಿಕೊಂಡಿದ್ದು, ಮನೆಯವರು ಕರಡಿಯನ್ನು ನೋಡಿಲ್ಲವಾದರೂ ಸಿಸಿ ಕ್ಯಾಮೆರಾದಲ್ಲಿ ಕರಡಿ ಅಡ್ಡಾಡುತ್ತಿರುವ ದೃಶ್ಯ ಸೆರೆಯಾಗಿದೆ. ಮನೆ ಆವರಣ ಗೋಡೆ ಹೊರ ಭಾಗದಲ್ಲಿ ಕರಡಿ ಹಾದು ಹೋಗಿದ್ದು, ಬಯಲು ಪ್ರದೇಶದಲ್ಲಿ ಕಣ್ಮರೆಯಾಗಿದೆ. ಸಿಸಿ ಕ್ಯಾಮೆರಾ ದೃಶ್ಯಾವಳಿ ನೋಡುತ್ತಿದ್ದಾಗ ಕರಡಿ ಪ್ರತ್ಯಕ್ಷವಾಗಿರುವುದು ಮನೆಯವರಿಗೆ ಗೊತ್ತಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು