ಎಲ್ಲರೆದರು ಗಂಡನ ಮರ್ಯಾದೆ ತೆಗೆದ ಮಹಿಳೆ; ಇಂಥಾ ಹೆಂಡ್ತಿ ಬೇಕಾ ಎಂದ ನೆಟ್ಟಿಗರು

Published : Mar 16, 2025, 03:41 PM ISTUpdated : Mar 16, 2025, 03:47 PM IST
ಎಲ್ಲರೆದರು ಗಂಡನ ಮರ್ಯಾದೆ ತೆಗೆದ ಮಹಿಳೆ; ಇಂಥಾ ಹೆಂಡ್ತಿ ಬೇಕಾ ಎಂದ ನೆಟ್ಟಿಗರು

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋದಲ್ಲಿ ಮಹಿಳೆಯೊಬ್ಬಳು ಗಂಡನನ್ನು ಕೀಟಲೆ ಮಾಡುತ್ತಾ, ಆತನ ಕಪ್ಪು ಬಣ್ಣದ ಬಗ್ಗೆ ಮಾತನಾಡಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೆಲವೊಮ್ಮೆ ತಮಾಷೆಯ ವಿಡಿಯೋಗಳು ಗಂಭೀರ ಸ್ವರೂಪ ಪಡೆದುಕೊಳ್ಳುತ್ತವೆ. ಇಂದು ಜನರು ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ಆ ವಿಡಿಯೋಗೆ ಬರುವ ಲೈಕ್ಸ್ ಮತ್ತು ಕಮೆಂಟ್‌ನಿಂದ ಆನಂದಿಸುತ್ತಾರೆ. ಡಿಜಿಟಲ್ ಯುಗದಲ್ಲಿ ಜನರು ತಮ್ಮ ಪ್ರೈವೇಸಿಯನ್ನೇ ಉಳಿಸಿಕೊಂಡಿಲ್ಲ. ಹೆಚ್ಚು ಲೈಕ್ಸ್ ಮತ್ತು ವಿಡಿಯೋಗಾಗಿ ಜನರು ವಿಚಿತ್ರ ಕಂಟೆಂಟ್‌ವುಳ್ಳ ರೀಲ್ಸ್ ಹಂಚಿಕೊಳ್ಳುತ್ತಿರುತ್ತಾರೆ. ಇಲ್ಲೋರ್ವ ಮಹಿಳೆ, ಎಲ್ಲರೆದರು ಗಂಡನ ಮರ್ಯಾದೆಯನ್ನು ತೆಗೆದಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು, ಇಂಥಾ ಹೆಂಡ್ತಿ ನಿನಗೆ ಬೇಕಾ ಎಂದು ಕಮೆಂಟ್ ಮಾಡಿದ್ದಾರೆ. ಹಾಗೆಯೇ ಮಹಿಳೆಯನ್ನು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇಂತಹ  ವಿಡಿಯೋಗಳನ್ನು ರೋಸ್ಟ್ ಎಂದು ಕರೆಯಲಾಗುತ್ತದೆ. ಆದ್ರೆ ಈ ರೀತಿ ಇಷ್ಟು ಹಗುರವಾಗಿ ಗಂಡನ ಬಗ್ಗೆ ರೀಲ್ಸ್ ಮಾಡಬಾರದು ಎಂದು ಮಹಿಳೆಗೆ ಸಲಹೆ ನೀಡಿದ್ದಾರೆ. ಈ ರೀತಿಯ ಕೀಟಲೆಯನ್ನು ಜನರು ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಹಿಳೆ ಜೊತೆಯಲ್ಲಿರುವ ಪುರುಷನಿಗೆ ನೆಟ್ಟಿಗರು ಸಾಂತ್ವಾನ ಹೇಳಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?
ಈ  ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನನ್ನು ಕೀಟಲೆ ಮಾಡುತ್ತಿರೋದನ್ನು ಕಾಣಬಹುದು. ಮಹಿಳೆ ಕ್ಯಾಮೆರಾ ಮುಂದೆ, ಆದಾಯ ತೆರಿಗೆ  ಇಲಾಖೆಯ ಅಧಿಕಾರಿಗಳೇ, ನನ್ನ ಬಳಿ ಕಪ್ಪು ಹಣವಿದೆ ಎಂದು ಹೇಳುತ್ತಾಳೆ. ನಂತರ ಕ್ಯಾಮೆರಾವನ್ನು ಗಂಡನ ಕಡೆಗೆ ತಿರುಗಿಸುತ್ತಾಳೆ. ಮಹಿಳೆಯ ಮಾತನ್ನು ಕೇಳಿ ಗಂಡ ಆಶ್ವರ್ಯದಿಂದ ನೋಡುತ್ತಾನೆ. ಈ ಮೂಲಕ ತನ್ನ ಗಂಡ  ಕರಿಯಾ ಎಂದು ಹೇಳಿದ್ದಾಳೆ. ಆದ್ರೆ ಈ ವಿಡಿಯೋ ಯಾವಾಗ  ಮಾಡಲಾಗಿದೆ ಎಂಬುದರ ಬಗ್ಗೆ  ನಿಖರ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಎಲ್ಲರ ಗಮನವನ್ನು ಈ ವಿಡಿಯೋ  ಸೆಳೆಯುತ್ತಿದೆ. 

ಇದನ್ನೂ ಓದಿ: ಡೋಂಟ್ ಟಚ್ ಮಿ ಮೇಡಂ.. ಕ್ಯಾಬ್‌ನಲ್ಲಿ ನಶೆ ಏರಿಸ್ಕೊಂಡ ಮಹಿಳೆ ಹಾರಾಟ, ಕೂಗಾಟ!

ವೈರಲ್ ಆಗಿರುವ ವಿಡಿಯೋವನ್ನು @Dank_jetha ಹೆಸರಿನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ 48 ಸಾವಿರಕ್ಕೂ ಅ‍ಧಿಕ ವ್ಯೂವ್ ಮತ್ತು ನೂರಾರು ಕಮೆಂಟ್‌ಗಳು ಬಂದಿವೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ಓರ್ವ ನೆಟ್ಟಿಗ, ಇದೊಂದು ದೊಡ್ಡ ಅವಮಾನ. ಈ ಸಹೋದರನಿಗಾದ ಅವಮಾನವನ್ನು ನಾನು ಸಹಿಸಲಾರೆ. ಕಪ್ಪು ಅಂತ ಕರೆಯುವ ಈ ಬಿಳಿ ಹುಡುಗಿ ಯಾಕೆ  ಅವನನ್ನು ಮದುವೆಯಾಗಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಕಪ್ಪು ಬಣ್ಣವನ್ನು ಕಪ್ಪು ಎಂದು ಕರೆಯಲಾಗುತ್ತದೆ, ಅದರಲ್ಲಿ ಕೆಟ್ಟ ಭಾವನೆ ಏನು?  ಒಂದು ವೇಳೆ ಇದೇ ತದ್ವಿರುದ್ದ ಆದ್ರೆ ಮಹಿಳೆಯರೆಲ್ಲರೂ ಕಮೆಂಟ್ ಮಾಡಲು ಬರುತ್ತಿದ್ದರು ಎಂದು ಕಮೆಂಟ್‌ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಕರಿಮಣಿ ಮಾಲೀಕ ನೀನಲ್ಲ
ಕೆಲ ವರ್ಷಗಳ ಹಿಂದೆಯಷ್ಟೇ ಕರ್ನಾಟಕದಲ್ಲಿ ಕರಿಮಣಿ ಮಾಲೀಕ ನೀನಲ್ಲ ಎಂಬ ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಚಿಕ್ಕ ಮಕ್ಕಳಿಂದ ಹಿಡಿದು ಆಂಟಿ, ಅಜ್ಜಿಯರು ಸಹ ಈ ರೀಲ್ಸ್  ಮಾಡಿದ್ದರು. ಇದಕ್ಕೆ ಪತ್ನಿ ರೀಲ್ಸ್ ಮಾಡಿದ್ದಕ್ಕೆ ನೊಂದ ಗಂಡ ಪ್ರಾಣ ಕಳೆದುಕೊಂಡಿದ್ದನು. ಈ ವಿಷಯ ಭಾರೀ ಚರ್ಚಗೆ ಗ್ರಾಸವಾಗಿತ್ತು.

ಇದನ್ನೂ ಓದಿ: ರೇಷ್ಮಾ ಆಂಟಿಯ ಕಿಡ್ನ್ಯಾಪ್; KRS ಡ್ಯಾಂಗೆ ಎತ್ತಾಕಿ ಎಂದ ನೆಟ್ಟಿಗರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ನಿರ್ಮಾಪಕರನ್ನು ಕೋಟಿ ಕೋಟಿ ಸಾಲದಲ್ಲಿ ಮುಳುಗಿಸಿದ ಬಾಲಿವುಡ್‌ನ 8 ಸಿನಿಮಾ
ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ