
ಲಕ್ನೋ: ಅವರಿಬ್ಬರು ಒಂದೇ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸಹೋದ್ಯೋಗಿಗಳು ಆಗಿದ್ದವರು, ಪ್ರೇಮಿಗಳು ಆದರು. ನಂತರ ಕುಟುಂಬಸ್ಥರ ಒಪ್ಪಿಗೆ ಪಡೆದು 2017ರಲ್ಲಿ ಮದುವೆಯಾದ್ರು. ಆದ್ರೆ ಸಂಸಾರದಲ್ಲಿ ಮಾತ್ರ ಅವನಿಗೆ ನೆಮ್ಮದಿಯೇ ಇರಲಿಲ್ಲ. ಇದೀಗ ಬ್ಯಾಂಕ್ ಉದ್ಯೋಗಿ ಹೋಟೆಲ್‌ನಲ್ಲಿ ರೂಮ್ ಪಡೆದುಕೊಂಡು, ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತ ಬ್ಯಾಂಕ್ ಉದ್ಯೋಗಿ ಅಂಕಿತ್ ಕುಟುಂಬಸ್ಥರು, ಮಗನ ಸಾವಿಗೆ ಆತನ ಪತ್ನಿ ಮೇಘಾಳೇ ಕಾರಣ ಎಂದು ಆರೋಪಿಸಿದ್ದಾರೆ. ಮೇಘಾ ಕಿರುಕುಳದಿಂದಾಗಿ ಮಗನನ್ನು ಕಳೆದುಕೊಂಡಿದ್ದೇನೆ ಎಂದು ಅಂಕಿತ್ ತಾಯಿ ಆರೋಪ ಮಾಡಿ ದೂರು ಸಹ ದಾಖಲಿಸಿದ್ದಾರೆ.
ಉತ್ತರ ಪ್ರದೇಶದ ಬುಲಂದ್‌ಶಹರ್ ನಗರದ ಕೊತ್ವಾಲಿಯಲ್ಲಿ ನಡೆದಿದೆ. ಮೃತ ಅಂಕಿತ್, ಡೆಪ್ಯೂಟಿ ಗಂಜ್ ನಿವಾಸಿಯಾಗಿದ್ದು ಬ್ಯಾಂಕ್ ಆಫ್ ಬರೋಡಾದಲ್ಲಿ ಕೆಲಸ ಮಾಡಿಕೊಂಡಿದ್ದರು. ನಗರದ ಹೋಟೆಲ್‌ನಲ್ಲಿ ರೂಮ್ ಪಡೆದುಕೊಂಡಿದ್ದ ಅಂಕಿತ್ ಅಲ್ಲಿಯೇ ವಿಷ ಸೇವಿಸಿದ್ದಾರೆ. ಬೆಳಗ್ಗೆ ಹೋಟೆಲ್ ಕೆಲಸಗಾರರು ಟೀ ನೀಡಲು ಬಂದಾಗ ಬೆಲ್ ಬಾರಿಸಿದ್ದಾರೆ. ಬಾಗಿಲು ತೆಗೆಯದಿದ್ದಾಗ ಅಂಕಿತ್ ನೀಡಿದ ನಂಬರ್‌ಗೆ ಕಾಲ್ ಮಾಡಿದ್ದಾರೆ. ಕರೆ ಸ್ವೀಕರಿಸಿದಿದ್ದಾಗ ನಕಲಿ ಕೀ ಬಳಸಿ ಬಾಗಿಲು ತೆರೆದು ನೋಡಿದಾಗ ಅಂಕಿತ್ ಹಾಸಿಗೆ ಮೇಲೆ ಪ್ರಜ್ಞಾಹೀನನಾಗಿರೋದನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಅಂಕಿತ್ ಮೃತವಾಗಿರೋದು ಖಚಿತವಾಗಿದೆ.
ಅಂಕಿತ್ ಮತ್ತು ಮೇಘಾ ಬರೇಲಿಯ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು. 2016ರಲ್ಲಿ ಪರಿಚಯವಾದ ಅಂಕಿತ್ ಮತ್ತು ಮೇಘಾ ನಡುವೆ ಪ್ರೇಮಾಂಕುರವಾಗುತ್ತದೆ. ನಂತರ ಇಬ್ಬರು 2017ರಲ್ಲಿ ಮದುವೆಯಾದರು. ಮದುವೆ ಖುಷಿ ಕೆಲವೇ ದಿನ ಮಾತ್ರವಿತ್ತು. ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು.
ಸೊಸೆ ಮೇಘಾ ಡಿವೋರ್ಸ್ ಪಡೆಯಲು ಪ್ಲಾನ್ ಮಾಡಿಕೊಂಡಿದ್ದಳು. ಡಿವೋರ್ಸ್ ನಂತರ ಪರಿಹಾರವಾಗಿ 20 ಲಕ್ಷ ರೂ. ಪಡೆಯಲು ಯೋಚಿಸಿದ್ದಳು.ವಿಚ್ಛೇದನ ನೀಡುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದಳು. ಇದರಿಂದಾಗಿ ಮೇಘಾಳಿಂದ ದೂರವಾಗಿದ್ದ ಅಂಕಿತ್ ಬರೇಲಿಯಲ್ಲಿ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದನು. ಸೊಸೆ ಮೇಘಾ ಬೇರೆಯವರ ಜೊತೆ ಸಂಬಂಧ ಹೊಂದಿದ್ದಳು ಎಂದು ತಾಯಿ ಆರೋಪಿಸಿದ್ದಾರೆ.
ಸಾಯುವ ಮುನ್ನ ಮೇಘಾ ಜೊತೆ ಮಾತನಾಡಲು ಅಂಕಿತ್ ಪ್ರಯತ್ನಿಸಿದ್ದಾನೆ. ಆದ್ರೆ ಮೇಘಾ ಮಾತನಾಡಲು ಒಪ್ಪಿಲ್ಲ. ತನಗೆ ಎರಡು ದಿನದಲ್ಲಿಯೇ ಡಿವೋರ್ಸ್ ಬೇಕೆಂದು ಷರತ್ತು ಹಾಕಿದ್ದಳು. ಮೇಘಾಳ ಈ ರೀತಿಯ ಕಿರುಕುಳದಿಂದಾಗಿ ಮಗ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಇದರಿಂದ ಹೋಟೆಲ್‌ಗೆ ತೆರಳಿ ವಿಷ ಸೇವಿಸಿದ್ದಾನೆ ಎಂದು ಅಂಕಿತ್ ತಾಯಿ ಕಣ್ಣೀರು ಹಾಕುತ್ತಾರೆ.
ಅಂಕಿತ್ ಸಾವಿನ ವಿಷಯವನ್ನು ಮೇಘಾ ಕರೆ ಮಾಡಿ ತಿಳಿಸಿದಳು. ಆದ್ರೆ ಗಂಡನ ಸಾವಿಗೆ ಆಕೆ ಯಾವುದೇ ಸಂತಾಪವನ್ನು ಸೂಚಿಸಿಲ್ಲ ಮತ್ತು ಅಂತ್ಯಕ್ರಿಯೆಗೂ ಬಂದಿಲ್ಲ. ಅಂಕಿತ್ ಆಗಸ್ಟ್ 1ರಂದು ಹೋಟೆಲ್‌ನಲ್ಲಿ ರೂಮ್ ಪಡೆದುಕೊಂಡಿದ್ದನು. ಮರುದಿನ ನಮಗೆ ಮಗನ ಸಾವಿನ ಸುದ್ದಿ ತಿಳಿದಿದೆ ಎಂದು ಅಂಕಿತ್ ತಾಯಿ ಹೇಳಿದ್ದಾರೆ.
ಈ ಪ್ರಕರಣದ ಕುರಿತು ಮಾಹಿತಿ ನೀಡಿರುವ ಎಸ್‌ಪಿ ಸಿಟಿ ಶಂಕರ್ ಪ್ರಸಾದ್, ಕೊತ್ವಾಲಿಯ ನಟರಾಜ್ ಹೋಟೆಲ್‌ನಲ್ಲಿ ಬ್ಯಾಂಕ್ ಉದ್ಯೋಗಿ ಅಂಕಿತ್ ಶವ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ವಿಷ ಸೇವಿಸಿ ಅತ್ಮಹ*ತ್ಯೆ ಮಾಡಿಕೊಂಡಿರೋದು ತಿಳಿದು ಬಂದಿದೆ. ಮೃತ ವ್ಯಕ್ತಿ ಪತ್ನಿಯ ಕಿರುಕುಳದಿಂದಾಗಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಅಂಕಿತ್ ತಾಯಿ ದೂರು ಸಲ್ಲಿಕೆ ಮಾಡಿದ್ದು, ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮಗನ ಸಾವಿಗೆ ಸೊಸೆಯೇ ಕಾರಣ ಎಂದು ಅಂಕಿತ್ ತಾಯಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ