ವರ್ಲ್ಡ್‌ ವಾರ್ ಶುರುವಾಗೋಕೆ ಇಷ್ಟೇ ದಿನ ಬಾಕಿ.. ಭಯಾನಕ ಭವಿಷ್ಯವಾಣಿ ನುಡಿದ ನಾಸ್ಟ್ರಾಡಾಮಸ್ ಖ್ಯಾತಿಯ ಜ್ಯೋತಿಷಿ

By Mahmad Rafik  |  First Published Aug 4, 2024, 12:59 PM IST

ಆತಂಕಕಾರಿ ಪರಿಸ್ಥಿತಿಯನ್ನು ಗಮನಿಸಿದ್ರೆ ಯುರೋಪ್ ಮತ್ತು ಏಷ್ಯಾದ ಹಲವು ದೇಶಗಳ ನಡುವೆ ಶೀಘ್ರದಲ್ಲೇ ಸಂಘರ್ಷ ಪ್ರಾರಂಭವಾಗಲಿದೆ ಎಂದು ಕಾಣಿಸುತ್ತಿದೆ ಎಂದು ಜ್ಯೋತಿಷಿ ಹೇಳಿದ್ದಾರೆ.


ನವದೆಹಲಿ: ವಿಶ್ವದ ಹಲವು ದೇಶಗಳ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗಿದ್ದು, ಯುದ್ಧದ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಸದ್ಯ ಇಸ್ರೇಲ್ ಮತ್ತು ಇರಾನ್ ನಡುವೆ ಯಾವುದೇ ಸಮಯದಲ್ಲಿ ಯುದ್ಧದ ರಣಕಹಳೆ ಮೊಳಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಈ ಎಲ್ಲಾ ಬೆಳವಣಿಗೆಗಳ ನಡುವೆ ಭಾರತದ ಖ್ಯಾತ ಜ್ಯೋತಿಷಿ, ಮುಂದಿನ ಎರಡು ದಿನಗಳಲ್ಲಿ ಮೂರನೇ ವಿಶ್ವ ಯುದ್ಧ ಆರಂಭವಾಗಲಿದೆ ಎಂದು ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹಾನಿಯಾ ಹತ್ಯೆ ಬಳಿಕ ಯುದ್ಧದ ವಾತಾವರಣ ನಿರ್ಮಾಣವಾಗುತ್ತಿದೆ.  ಇಸ್ಮಾಯಿಲ್ ಹಾನಿಯಾ ಸಾವಿನ ಬಳಿಕ ಇಸ್ರೇಲ್ ಮೇಲೆ ಹಮಾಸ್ ಯಾವುದೇ ಕ್ಷಣದಲ್ಲಿ ಯುದ್ಧ ಸಾರಬಹುದು ಎಂದು ವಿಶ್ಲೇಷಣೆ  ಮಾಡಲಾಗುತ್ತಿದೆ. 

ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದ ಟೆಹ್ರಾನ್‌ನಲ್ಲಿ ಉಂಟಾದ ನಷ್ಟಕ್ಕೆ ಬೆಲೆ ತೆರಬೇಕಾಗುತ್ತದೆ ಎಂಬ ಸಂದೇಶವನ್ನು ರವಾನೆಯಾಗಿದೆ. ಸೇನಾ ಕಮಾಂಡರ್ ಫುವಾದ್ ಶುಕರ್ ಮರಣದ ಬಳಿಕ ಟೆಲ್ ಅವಿವ್ ಈ ಸಂಘರ್ಷದಲ್ಲಿ ಲೆಬನಾನ್ ಬೆಂಬಲಕ್ಕೆ ನಿಂತಿದೆ. ಕೆಲ ದಿನಗಳ ಹಿಂದೆಯಷ್ಟೇ ಇಸ್ರೇಲ್‌ನ ಫುಟ್‌ಬಾಲ್ ಮೈದಾನದಲ್ಲಿ ಕ್ಷಿಪಣಿಗಳನ್ನು ಉಡಾಯಿಸಿತ್ತು. ಈ ದಾಳಿಯಲ್ಲಿ 12 ಮಕ್ಕಳ ಸಾವು ಆಗಿತ್ತು. ದಾಳಿಯ ತೀವ್ರತೆ ಹೆಚ್ಚಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

Latest Videos

undefined

ಏನದು ಭವಿಷ್ಯವಾಣಿ?

ಭಾರತದ ನಾಸ್ಟ್ರಡಾಮ್ ಎಂಬ ಖ್ಯಾತಿಯ ಪ್ರಸಿದ್ಧ ಜ್ಯೋತಿಷಿ ಕುಶಾಲ್ ಕುಮಾರ್ ಭಯಾನಕ ಭವಿಷ್ಯವಾಣಿ ನುಡಿದಿದ್ದಾರೆ. ಮುಂದಿನ 48 ಗಂಟೆಯಲ್ಲಿ ವಿಶ್ವಯುದ್ಧ ಶುರುವಾಗಬಹುದು. ಆಗಸ್ಟ್ 5ರ ವೇಳೆಗೆ ಹಲವು ದೇಶಗಳ ನಡುವೆ ಸಂಘರ್ಷ ಉಂಟಾಗಬಹುದು ಎಂಬ ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಯುನೈಟೆಡ್ ಸ್ಟೇಟ್‌ನ ಅಲಾಸ್ಕಾ ಬಳಿ ರಷ್ಯಾ ಮತ್ತು ಚೀನಾ ಬಾಂಬ್‌ಗಳು ಸಿದ್ಧವಾಗಿವೆ. ಇತ್ತ ಕ್ಯೂಬಾದಲ್ಲಿ ಮಿಲಟರಿ ಸನ್ನದ್ಧವಾಗಿದೆ. ಅತ್ತ ರೊಮೇನಿಯಾದಲ್ಲಿ ಆತಂಕಕಾರಿ ಪರಿಸ್ಥಿತಿಯನ್ನು ಗಮನಿಸಿದ್ರೆ ಯುರೋಪ್ ಮತ್ತು ಏಷ್ಯಾದ ಹಲವು ದೇಶಗಳ ನಡುವೆ ಶೀಘ್ರದಲ್ಲೇ ಸಂಘರ್ಷ ಪ್ರಾರಂಭವಾಗಲಿದೆ ಎಂದು ಕಾಣಿಸುತ್ತಿದೆ ಎಂದು ಜ್ಯೋತಿಷಿ ಕುಶಾಲ್ ಕುಮಾರ್ ಹೇಳಿದ್ದಾರೆ. 

ಜ್ಯೋತಿಷಿ ಕುಶಾಲ್ ಕುಮಾರ್ ಹರಿಯಾಣ ಮೂಲದವರಾಗಿದ್ದು, ತಮ್ಮ ಭಯಾನಕ ಭವಿಷ್ಯವಾಣಿಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಇದಕ್ಕೂ ಮೊದಲು ಜೂನ್ 18ರಂದು ವಿಶ್ವಯುದ್ಧ ಆರಂಭವಾಗುತ್ತೆ ಎಂದು ನುಡಿದಿದ್ದ ಭವಿಷ್ಯವಾಣಿ ಸುಳ್ಳು ಆಗಿತ್ತು. ಆನಂತರ ಮತ್ತೆ ಜುಲೈ 26 ಅಥವಾ 27ರ ದಿನಾಂಕ ನೀಡಿದ್ದರೂ ಅದು ಸಹ ಹುಸಿಯಾಗಿತ್ತು. ಇದೀಗ ಮತ್ತೊಮ್ಮೆ ಭವಿಷ್ಯ ನುಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

5 ಸ್ಟಾರ್ ಹೋಟೆಲ್ ರೀತಿಯ ಮನೆ, 25ಕ್ಕೂ ಅಧಿಕ ವಾಹನ, ಪ್ರೈವೇಟ್ ಜೆಟ್ - ಹತನಾದ ಹಮಾಸ್ ನಾಯಕನ ಆಸ್ತಿ ಎಷ್ಟು?

ಇರಾನ್‌ ಮತ್ತು ಹಮಾಸ್‌ ಉಗ್ರರಿಂದ ದಾಳಿಯ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮಿತ್ರ ರಾಷ್ಟ್ರ ಇಸ್ರೇಲ್‌ಗೆ ನೆರವು ನೀಡಲು ಮಧ್ಯಪ್ರಾಚ್ಯಕ್ಕೆ ತನ್ನ ಮತ್ತಷ್ಟು ಯುದ್ಧನೌಕೆ, ಕ್ಷಿಪಣಿ ತಡೆ ವ್ಯವಸ್ಥೆ ಸೇರಿದಂತೆ ರಕ್ಷಣಾ ತಂಡವನ್ನು ರವಾನಿಸಲು ಅಮೆರಿಕದ ನಿರ್ಧರಿಸಿದೆ. ಹಮಾಸ್‌ ನಾಯಕ ಇಸ್ಮಾಯಿಲ್‌ ಹನಿಯೆನನ್ನು ಇಸ್ರೇಲ್‌, ಇರಾನ್‌ನಲ್ಲಿ ಹತ್ಯೆಗೈದ ಬಳಿಕ ಎರಡೂ ದೇಶಗಳು ಇಸ್ರೇಲ್‌ ಮೇಲೆ ಪ್ರತೀಕಾರದ ಕ್ರಮ ಘೋಷಣೆ ಮಾಡಿವೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯಕ್ಕೆ ಹೆಚ್ಚುವರಿ ಯುದ್ಧನೌಕೆ, ಖಂಡಾಂತರ ಕ್ಷಿಪಣಿ ತಡೆ ವ್ಯವಸ್ಥೆ ಹೊಂದಿರುವ ನೌಕೆ, ಡ್ರೋನ್‌, ಡಿಸ್ಟ್ರಾಯರ್‌ಗಳನ್ನು ರವಾನಿಸುವ ಘೋಷಣೆ ಮಾಡಿದೆ.

ಗುರುವಾರ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ಗೆ ದೂರವಾಣಿ ಕರೆ ಮಾಡಿದ ಬೆನ್ನಲ್ಲೇ ಅಮೆರಿಕ ಹೆಚ್ಚುವರಿ ಸೇನೆ ನಿಯೋಜನೆಯ ಘೋಷಣೆ ಮಾಡಿದೆ.

ಹೆಚ್ಚಿದ ಯುದ್ಧ ಭೀತಿ: ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಎಚ್ಚರದಿಂದಿರಲೂ ಸೂಚನೆ

click me!