ಗಾಯಗೊಂಡ ಪತಿಯನ್ನು ಬೆನ್ನಮೇಲೆ ಹೊತ್ತು ಆಸ್ಪತ್ರೆ ದಾಖಲಿಸಿದ ಪತ್ನಿ, ಮನಕಲುಕುವ ಘಟನೆ

By Chethan Kumar  |  First Published Jan 14, 2025, 4:51 PM IST

ಪತಿ ಗಾಯಗೊಂಡು ನಡೆಯಲು ಸಾಧ್ಯವಾಗದ ಪರಿಸ್ಥಿತಿ. ಆದರೆ ಆಸ್ಪತ್ರೆಯಲ್ಲಿ ಕನಿಷ್ಠ ವ್ಹೀಲ್‌ಚೇರ್ ಕೂಡ ಇಲ್ಲ. ಹೀಗಾಗಿ ಪತಿಯನ್ನು ಬೆನ್ನ ಮೇಲೆ ಹೊತ್ತುಕೊಂಡೇ ಸಾಗಿದ ಘಟನೆ ನಡೆದಿದೆ.


ಕೋಲ್ಕತಾ(ಜ.14) ಜನಸಾಮಾನ್ಯರಿಗೆ ಸರ್ಕಾರಿ ಆಸ್ಪತ್ರಗಳು ಸೂಕ್ತ ಸೌಲಭ್ಯ ಹಾಗೂ ಸೇವೆ ಕಲ್ಪಿಸಲು ವಿಫಲವಾದ ಹಲವು ಘಟನೆಗಳಿವೆ.ಇದೀಗ ಮಹಿಳೆಯೊಬ್ಬರು ಗಾಯಗೊಂಡ ಪತಿಯನ್ನು ಇ ರಿಕ್ಷಾ ಮೂಲಕ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆಸ್ಪತ್ರಯಲ್ಲಿ ಸರಿಯಾಗಿ ವ್ಹೀಲ್‌‌ಚೇರ್‌ಗಳೇ ಇಲ್ಲ. ಕೆಲ ವ್ಹೀಲ್‌ಚೇರ್ ಕಾರ್ಯನಿರ್ವಹಿಸುತ್ತಿಲ್ಲ. ಇದರ ಪರಿಣಾಮ ನಡೆಯಲು ಸಾಧ್ಯವಾಗದೆ ಪತಿಯನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು ಪತ್ನಿ ಆಸ್ಪತ್ರೆ ದಾಖಲಿಸಿದ ಮನಕಲುಕುವ ಘಟನೆ ಪಶ್ಚಿಮ ಬಂಗಾಳದ ಉತ್ತರ ದಿನಜಪುರ ಜಿಲ್ಲೆಯಲ್ಲಿ ನಡೆದಿದೆ.

51 ವರ್ಷದ ಪಾರಿತೋಷ್ ಬರ್ಮನ್ ಕೂಲಿ ಕಾರ್ಮಿಕ. ಕೆಲಸದ ವೇಳೆ ಪಾರಿತೋಷ್ ಬರ್ಮನ್ ಕಾಲುಗಳಿಗೆ ಗಾಯವಾಗಿದೆ. ನಿರ್ಮಾಣ ಕೆಲಸದ ವೇಳೆ ಆಯತಪ್ಪಿ ಬಿದ್ದಿದ್ದಾರೆ. ಕಲ್ಲುಗಳು ಕಾಲುಗಳ ಮೇಲೆ ಬಿದ್ದಿದೆ. ಹೀಗಾಗಿ ಕಾಲಿಗೆ ಗಂಭೀರವಾಗಿ ಗಾಯವಾಗಿದೆ. ಇದೇ ನಿರ್ಮಾಣ ಕಾರ್ಯದ ಸೈಟ್‌ನಲ್ಲಿ ಪಾರಿತೋಷ್ ಬರ್ಮನ್ ಸಲಿತಾ ಬರ್ಮನ್ ಕೂಡ ಕೆಲಸ ಮಾಡುತ್ತಿದ್ದರು. ಅವಘಡ ಸಂಭಲಿಸಿದ ಬೆನ್ನಲ್ಲೇ ಪತ್ನಿ ಓಡೋಡಿ ಬಂದಿದ್ದಾರೆ. ಬಡತನದ ಕಾರಣ ಕನಿಷ್ಠ ಆಟೋ ರಿಕ್ಷಾದಲ್ಲಿ ಆಸ್ಪತ್ರೆ ಕರೆದುಕೊಂಡು ಹೋಗಲು ಹಣವಿಲ್ಲ. ಹೀಗಾಗಿ ಇ ರಿಕ್ಷಾ ಮೂಲಕ ಪತಿಯನ್ನು ಸಲಿತಾ ಬರ್ಮನ್ ರಾಯಿಗಂಜ್ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗೆ ಕರೆತಂದಿದ್ದಾರೆ.

Tap to resize

Latest Videos

ಇ ರಿಕ್ಷಾ ಆಸ್ಪತ್ರೆ ಮುಂದೆ ನಿಲ್ಲಿಸಿ ಪತ್ನಿ ಓಡೋಡಿ ಆಸ್ಪತ್ರೆಗೆ ತೆರಳಿದ್ದಾರೆ. ಬಳಿಕ ಪತಿ ಕಾಲಿಗೆ ಗಾಯವಾಗಿದೆ. ನಡೆಯಲು ಸಾಧ್ಯವಿಲ್ಲ. ವ್ಹೀಲ್‌ಚೇರ್ ನೀಡಿ ಎಂದು ಮನವಿ ಮಾಡಿದ್ದಾಳೆ. ಆದರೆ ಆಸ್ಪತ್ಪೆಯಿಂದ ಬಂದ ಉತ್ತರ ತೀವ್ರ ನಿರಾಸೆಗೊಳಿಸಿದೆ. ಕಾರಣ ಆಸ್ಪತ್ರೆಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಒಂದೆರೆಡು ವ್ಹೀಲ್ ಚೇರ್ ಮಾತ್ರ. ಇದು ರೋಹಿಗಗಳು ಬಳಸುತ್ತಿದ್ದಾರೆ. ಹೀಗಾಗಿ ವ್ಹೀಲ್‌ಚೇರ್ ಸೌಲಭ್ಯ ಲಭ್ಯವಿಲ್ಲ ಎಂದಿದ್ದಾರೆ. ಆದರ ಮೊದಲೇ ತಡವಾಗಿದೆ. ಹೀಗಾಗಿ ಮತ್ತಷ್ಟು ತಡ ಮಾಡಿದರೆ ಪತಿ ಆರೋಗ್ಯಕ್ಕೆ ಅಪಾಯ ಎದುರಾಗಬಹುದು ಎಂದು ಅರಿತ ಪತ್ನಿ ಸಲಿತಾ, ಚರ್ಚೆ, ಹಕ್ಕು ಮಂಡಿಸಲು ಹೋಗಿಲ್ಲ. 

ವೈದ್ಯರು ಮೃತ ಎಂದು ಖಚಿತಪಡಿಸಿದ ವ್ಯಕ್ತಿಗೆ ಪುನರ್ಜನ್ಮ ನೀಡಿದ ಆ್ಯಂಬುಲೆನ್ಸ್ ಬ್ರೇಕ್!

ಇ ರಿಕ್ಷಾ ಬಳಿ ಬಂದು ಗಂಡನನ್ನು ತನ್ನ ಬೆನ್ನಮೇಲೆ ಹೊತ್ತುಕೊಂಡು ಆಸ್ಪತ್ರೆ ಒಳಗೆ ಹೆಜ್ಜೆ ಹಾಕಿದ್ದಾರೆ. ಸರದಿ ಸಾಲಿನಲ್ಲಿ ನಿಂತಿದ್ದ ಕ್ಯೂನಲ್ಲಿ ನಿಂತು ನೋಂದಣಿ ಮಾಡಿಕೊಂಡಿದ್ದಾಳೆ. ಬಳಿಕ ಬೆನ್ನಮೇಲೆ ಹೊತ್ತುಕೊಂಡೆ ಸಾಗಿದ ಪತ್ನಿ ಸಲಿತಾ ಬರ್ಮನ್ ಪತಿಯನ್ನು ಆಸ್ಪತ್ರೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಲ್ಲಿಗೆ ಸಲಿತಾ ಬರ್ಮನ್ ಸಂಕಷ್ಟ ಮುಗಿದಿಲ್ಲ. ಕಾರಣ ಔಟ್ ಪೇಶೇನ್ ವಾರ್ಡ್‌ನಲ್ಲಿ ಪತಿಯನ್ನು ದಾಖಲಿಸಿದ್ದಾರೆ. ಕೆಲ ಹೊತ್ತಿನ ಬಳಿಕ ವೈದ್ಯರು ಆಗಮಿಸಿ ತಪಾಸಣೆ ನಡೆಸಿದ್ದಾರೆ.

ತಪಾಸಣೆ ನಡೆಸಿದ ವೈದ್ಯರು ಸಿಟಿ ಸ್ಕ್ಯಾನ್‌ಗೆ ಸೂಚಿಸಿದ್ದಾರೆ. ಆದರೆ ಸಿಟಿ ಸ್ಕ್ಯಾನ್ ಅದೇ ಕಟ್ಟಡದಲ್ಲಿ ಲಭ್ಯವಿಲ್ಲ. ಸಿಟಿ ಸ್ಕ್ಯಾನ್‌ಗಾಗಿ ಮತ್ತೊಂದು ಕಟ್ಟಡಕ್ಕೆ ತೆರಳಬೇಕು. ಇಷ್ಟಾದರೂ ಆಸ್ಪತ್ರೆಯಲ್ಲಿ ವ್ಹೀಲ್‌ಚೇರ್ ಸೌಲಭ್ಯವಿಲ್ಲ. ಬೇರೆ ದಾರಿಯಿಲ್ಲದೆ ಪತ್ನಿ ಮತ್ತೆ ಪತಿಯನ್ನು ಬೆನ್ನಮೇಲೆ ಹೊತ್ತುಕೊಂಡು ಸಿಟಿ ಸ್ಕ್ಯಾನ್ ಬಳಿ ದಾಖಲಿಸಿದ್ದಾರೆ. ಸಿಟಿ ಸ್ಕ್ಯಾನ್ ಮುಗಿಸಿ ಮತ್ತೆ ಪತಿಯನ್ನು ಪಕ್ಕದ ಕಟ್ಟದಿಂದ ಹೊರರೋಗಿಗಳ ವಿಭಾಗದ ಕಟ್ಟಡಕ್ಕೆ ಹೊತ್ತು ತಂದಿದ್ದಾರೆ. ಇದೇ ವೇಳೆ ಆಸ್ಪತ್ರೆ ಬಂದಿದ್ದ ಹಲವರು ಆಸ್ಪತ್ರೆಯ ಅವ್ಯವಸ್ಥೆ ಹಾಗೂ ದಂಪತಿಗಳ ಕಷ್ಟದ ಫೋಟೋ, ವಿಡಿಯೋ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಸರ್ಕಾರಿ ಆಸ್ಪತ್ರೆ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಈ ಫೋಟೋ ಹಾಗೂ ವಿಡಿಯೋ ಭಾರಿ ಕೋಲಾಹಲ ಸೃಷ್ಟಿಸಿದೆ. ತಕ್ಷಣವೇ ಅಧಿಕಾರಿಗಳು ಆಗಮಿಸಿ ದಂಪತಿಗೆ ವ್ಹೀಲ್‌ಚೇರ್ ವ್ಯವಸ್ಥೆ ಮಾಡಿದ್ದಾರೆ.

ನನ್ನಮ್ಮ ಎಲ್ಲಿ: ಟರ್ಕಿ ಭೂಕಂಪದಲ್ಲಿ ಹೆತ್ತವರ ಕಳಕೊಂಡು ಪುಟ್ಟ ಮಗುವಿನ ಗೋಳು
 

click me!