ಅನುಕಂಪದ ಆಧಾರದ ಹುದ್ದೆ: ಮರುಮದ್ವೆಯಾದ್ರೂ ಸೊಸೆ ಸಂಬಳದ ಶೇ.25 ಭಾಗ ಅತ್ತೆಗೆ- ಹೈಕೋರ್ಟ್​ ಮಹತ್ವದ ತೀರ್ಪು

Published : Sep 23, 2026, 09:00 PM IST
High court

ಸಾರಾಂಶ

ಪತಿಯ ಮರಣದ ನಂತರ ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆದು ಮರುಮದುವೆಯಾದ ಮಹಿಳೆಯು ತನ್ನ ಮಾಜಿ ಅತ್ತೆಗೆ ಶೇ. 25ರಷ್ಟು ವೇತನ ನೀಡಬೇಕು ಎಂದು ರಾಜಸ್ಥಾನ ಹೈಕೋರ್ಟ್ ತೀರ್ಪು ನೀಡಿದೆ. ಅನುಕಂಪದ ನೇಮಕಾತಿಯು ವೈಯಕ್ತಿಕ ಆಸ್ತಿಯಲ್ಲ, ಕುಟುಂಬದ ನಿರ್ವಹಣೆ ಅದರ ಮೂಲ ಉದ್ದೇಶ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಜೈಪುರ: ಪತಿಯ ಮರಣದ ನಂತರ ಅವನ ಉದ್ಯೋಗವನ್ನು ಅನುಕಂಪದ ಆಧಾರದ ಮೇಲೆ ಪತ್ನಿಗೆ ನೀಡಿದರೆ, ಆಕೆ ಮರುಮದುವೆಯಾದರೂ ಆ ಪತಿಯ ಅಮ್ಮನಿಗೆ ಶೇಕಡಾ 25ರಷ್ಟು ವೇತನವನ್ನು ನೀಡಬೇಕು ಎಂದು ರಾಜಸ್ಥಾನ ಹೈಕೋರ್ಟ್‌ನ ಜೈಪುರ ಪೀಠವು ಮಹತ್ವದ ತೀರ್ಪು ನೀಡಿದೆ. ಅನುಕಂಪದ ಆಧಾರದ ಮೇಲೆ ನೇಮಕಾತಿ ದೊರೆತು, ಮರು ಮದುವೆಯಾದ ಬಳಿಕ ಮಾಜಿ ಅತ್ತೆಯ ಜೊತೆಗೆ ಸಂಬಂಧ ಹೊಂದಿಲ್ಲದೇ ಇದ್ದರೂ, ಆ ಮಗನನ್ನು ಅವಲಂಬಿಸಿದ್ದ ತಾಯಿಯನ್ನು ಅರ್ಥಾತ್​ ಮಹಿಳೆಯ ಮಾಜಿ ಅತ್ತೆಯನ್ನು ಬೆಂಬಲಿಸುವ ನೈತಿಕ ಮತ್ತು ಕಾನೂನು ಬಾಧ್ಯತೆಯಿಂದ ಆಕೆಯನ್ನು ಮುಕ್ತಗೊಳಿಸಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣವೊಂದರಲ್ಲಿ, ನ್ಯಾಯಮೂರ್ತಿ ಆನಂದ್ ಶರ್ಮಾ ನೇತೃತ್ವದ ಏಕ ಪೀಠವು, ಸೊಸೆಯ ಮಾಸಿಕ ವೇತನದ 25 ಪ್ರತಿಶತವನ್ನು ಕಡಿತಗೊಳಿಸಿ ನೇರವಾಗಿ ಅವರ ಅತ್ತೆಯ ಬ್ಯಾಂಕ್ ಖಾತೆಗೆ ಜಮಾ ಮಾಡುವಂತೆ ಅಜ್ಮೀರ್ ವಿದ್ಯುತ್ ವಿತ್ರನ್ ನಿಗಮ್ ಲಿಮಿಟೆಡ್‌ಗೆ ನಿರ್ದೇಶನ ನೀಡಿದೆ.

ಏನಿದು ಘಟನೆ?

ಈ ಪ್ರಕರಣವು 2017 ರಲ್ಲಿ ಅಜ್ಮೀರ್ ವಿದ್ಯುತ್ ವಿತ್ರನ್ ನಿಗಮ್‌ನಲ್ಲಿ ತಾಂತ್ರಿಕ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು ನಿಧನರಾದಾಗಿನಿಂದ ಆರಂಭವಾಗಿದ್ದು. ಮಗನ ಮರಣದ ನಂತರ, ಆತನ ಕೆಲಸ ಮಹಿಳೆಗೆ ಅನುಕಂಪದ ಆಧಾರದ ಮೇಲೆ ಸಿಕ್ಕಿತು. ನೇಮಕಾತಿಯ ಸಮಯದಲ್ಲಿ, ಆಕೆ ಮೃತ ಉದ್ಯೋಗಿಯ ಕುಟುಂಬವನ್ನು ಬೆಂಬಲಿಸುವುದಾಗಿ ಹೇಳುವ ಅಫಿಡವಿಟ್ ನೀಡಿದ್ದಳು. ಆದಾಗ್ಯೂ, ಕೆಲಸ ಪಡೆದ ಸ್ವಲ್ಪ ಸಮಯದ ನಂತರ, ಸೊಸೆ ತನ್ನ ಅತ್ತೆಯ ಮನೆಯನ್ನು ತೊರೆದು, ಮರುಮದುವೆಯಾಗಿ, ಮಾಜಿ ಅತ್ತೆಯನ್ನು ನೋಡಿಕೊಳ್ಳುವುದನ್ನು ನಿಲ್ಲಿಸಿದಳು.

2018 ರಲ್ಲಿ, ಅತ್ತೆಯಂದಿರು ನ್ಯಾಯ ಕೋರಿ ಅರ್ಜಿ ಸಲ್ಲಿಸಿದರು, ಆದರೆ ವಿಚಾರಣೆಯ ಸಮಯದಲ್ಲಿ ಮಾವ ನಿಧನರಾದರು. ಅರ್ಜಿದಾರರ ವಕೀಲ ರಮಿತ್ ಪರೀಕ್ ಅವರ ವಾದಗಳನ್ನು ಸ್ವೀಕರಿಸಿದ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಪ್ರಮುಖವಾದ ಅವಲೋಕನವನ್ನು ಮಾಡಿತು. ಅನುಕಂಪದ ಆಧಾರದ ನೇಮಕಾತಿಯು ವೈಯಕ್ತಿಕ ಸವಲತ್ತು ಅಥವಾ ವೈಯಕ್ತಿಕ ಆಸ್ತಿಯಲ್ಲ. ಕುಟುಂಬಕ್ಕೆ ಒದಗಿಸುವ ಅಫಿಡವಿಟ್ ಈ ನೇಮಕಾತಿಗೆ ಮುಖ್ಯ ಆಧಾರವಾಗಿದೆ. ಆದ್ದರಿಂದ, ಕೆಲಸ ಪಡೆದ ನಂತರ ಈ ಜವಾಬ್ದಾರಿಯನ್ನು ನಿರಾಕರಿಸುವುದು ಅನುಕಂಪದ ಆಧಾರದ ನೇಮಕಾತಿ ಯೋಜನೆಯ ಮೂಲ ಆಶಯವನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಮಾನ್ಯವಾಗದ ಸೊಸೆ ವಾದ

ಸೊಸೆಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಅವರನ್ನು ಆಕೆನೋಡಿಕೊಳ್ಳಬೇಕು ಜೊತೆಗೆ ಈ ಸಂಬಳವು ಅವಳ ವೈಯಕ್ತಿಯ ಸಂಬಳ ಎಂದು ಸೊಸೆಯ ಪರ ವಕೀಲರು ವಾದಿಸಿದರು. ಆದರೆ ಈ ವಾದವನ್ನು ಕೋರ್ಟ್​ ಒಪ್ಪಲಿಲ್ಲ. ಮಾಜಿ ಸೊಸೆಯ ಮಾಸಿಕ ವೇತನದ ಶೇಕಡ 25 ರಷ್ಟು ಕಡಿತಗೊಳಿಸಿ ಆಕೆಯ ಜೀವನದುದ್ದಕ್ಕೂ ಅತ್ತೆಯ ಖಾತೆಗೆ ಜಮಾ ಮಾಡುವ ಪದ್ಧತಿಯನ್ನು AVVNL ಆಡಳಿತ ಮಂಡಳಿ ಮುಂದುವರಿಸಬೇಕೆಂದು ಹೈಕೋರ್ಟ್ ಆದೇಶಿಸಿದೆ. ಮೃತ ಉದ್ಯೋಗಿಯ ಎಲ್ಲಾ ನಿವೃತ್ತಿ ಮತ್ತು ಇತರ ಪ್ರಯೋಜನಗಳನ್ನು 30 ದಿನಗಳಲ್ಲಿ ಬಿಡುಗಡೆ ಮಾಡಲು ಮತ್ತು ಅತ್ತೆ ಮತ್ತು ಸೊಸೆಯ ನಡುವೆ ಸಮಾನವಾಗಿ ಹಂಚಿಕೊಳ್ಳಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

13 ವರ್ಷ ಆಗ್ತಿದ್ದಂತೆ ದತ್ತುಪುತ್ರನ ನಡವಳಿಕೆಯಲ್ಲಿ ಆ ಬದಲಾವಣೆ; ಮಗ ಬೇಡವೇ ಬೇಡ ಎಂದು ಹೈಕೋರ್ಟ್‌ ಮೆಟ್ಟಿಲೇರಿದ ಸಾಕು ತಾಯಿ
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸರ್ಪ್ರೈಸ್: ದೋಸೆ ಮಾಡಿ, ಫಿಲ್ಟರ್‌ ಕಾಫಿ ಸವಿದ ಟೆಲಿಕಾಂ ಮಿನಿಸ್ಟರ್‌