13 ವರ್ಷ ಆಗ್ತಿದ್ದಂತೆ ದತ್ತುಪುತ್ರನ ನಡವಳಿಕೆಯಲ್ಲಿ ಆ ಬದಲಾವಣೆ; ಮಗ ಬೇಡವೇ ಬೇಡ ಎಂದು ಹೈಕೋರ್ಟ್‌ ಮೆಟ್ಟಿಲೇರಿದ ಸಾಕು ತಾಯಿ

Published : Sep 23, 2026, 08:36 PM IST
Delhi adoption case

ಸಾರಾಂಶ

ಮಕ್ಕಳು ಇಲ್ಲ ಎಂದು ದತ್ತು ಪಡೆದು ಸಾಕಿದ್ದೇ ತಪ್ಪಾಗಿದೆ. ಮನೆಗೆ ಯಜಮಾನ, ಸಮಾಜಕ್ಕೆ ಹೀರೋ ಆಗ್ತಾನೆ ಅಂದ್ಕೊಂಡಿದ್ದ ತಾಯಿಗೆ ಬಿಗ್ ಶಾಕ್ ಆಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ..

ನವದೆಹಲಿ: ಆ ದಂಪತಿಗೆ ಮಕ್ಕಳು ಇರಲಿಲ್ಲ. ಇಬ್ಬರು ಕೂತು ಯೋಚಿಸಿ ಕಾನೂನು ಪ್ರಕಾರ ಗಂಡು ಮಗುವನ್ನು ದತ್ತು ಪಡೆದಿದ್ದರು. ಆಗ ಆ ಮಗುವಿಗೆ 6 ವರ್ಷವಿತ್ತು. ಈಗ ಆತನಿಗೆ 13 ವರ್ಷ. ಸಾಕು ಮಗನಿಗೆ 13 ವರ್ಷ ಪೂರೈಸುತ್ತಿದ್ದಂತೆಯೇ, ಆತನ ಸಹವಾಸವೇ ಬೇಡ ಎಂದು ಸಾಕು ತಾಯಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಏನಿದು ಪ್ರಕರಣ?

ಕೋರ್ಟ್‌ ಮೆಟ್ಟಿಲೇರಿರುವ ಮಹಿಳೆ ನೀಡಿರುವ ಮಾಹಿತಿ ಪ್ರಕಾರ.. ನಾನು ಮತ್ತು ನನ್ನ ಪತಿ 2018ರಲ್ಲಿ ಅಸ್ಸಾಂನಿಂದ ಆರು ವರ್ಷದ ಬಾಲಕನನ್ನು ಕಾನೂನುಬದ್ಧವಾಗಿ ದತ್ತು ಪಡೆದಿದ್ದೇವು. ದತ್ತು ಪಡೆದ ಕೆಲವು ವರ್ಷಗಳ ಬಳಿಕ ಆತನ ನಡವಳಿಕೆಯಲ್ಲಿ ಆಕ್ರಮಣಕಾರಿ ಬದಲಾವಣೆಗಳು ಕಾಣಿಸಿಕೊಂಡಿವೆ. ಶಾಲೆಯಲ್ಲಿ ಆರೇಳು ವರ್ಷದ ಬಾಲಕಿಗೆ ಮುತ್ತಿಡಲು ಪ್ರಯತ್ನಿಸಿದ್ದಾನೆ. ಅಲ್ಲದೇ ಆಕೆಯನ್ನು ಶೌಚಾಲಯಕ್ಕೆ ಎಳೆದೊಯ್ಯಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಇದರಿಂದ ಆತನನ್ನು ಶಾಲೆಯಿಂದ ಹೊರಹಾಕಲಾಗಿತ್ತು.

ಈ ನಡುವೆ ನನ್ನ ಪತಿ ನಿಧನರಾಗಿದ್ದಾರೆ. ನಮ್ಮ ಕುಟುಂಬ ಸಾಕಷ್ಟು ಆಘಾತಕ್ಕೆ ಒಳಗಾಗಿದೆ. ಪತಿ ನಿಧನದ ನಂತರ ನೋಯ್ಡಾದಿಂದ ವೃದ್ಧ ತಾಯಿ ಇರುವ ಅಲಿಗಢಕ್ಕೆ ಶಿಫ್ಟ್ ಆಗಿದ್ದೇನೆ. ಅಲ್ಲಿಯೂ ಬಾಲಕನ ವರ್ತನೆಯಲ್ಲಿ ಯಾವುದೇ ಸಕಾರಾತ್ಮಕ ಬದಲಾವಣೆ ಇಲ್ಲ. ಆತನ ದುರ್ವರ್ತನೆಯಿಂದ ಶಾಲೆಯಿಂದ ಡಿಬಾರ್ ಮಾಡಲಾಗಿದೆ. ಕಾಲಕ್ರಮೇಣ ಆತ ಮನೆಯಲ್ಲೇ ಕಳ್ಳತನ ಮಾಡುವುದು ಮತ್ತು ಯಾರಿಗೂ ಹೇಳದೆ ಮನೆಯಿಂದ ಓಡಿಹೋಗುವುದನ್ನು ಚಾಳಿ ಮಾಡಿಕೊಂಡಿದ್ದಾನೆ ಎಂದು ಕಣ್ಣೀರು ಇಟ್ಟಿದ್ದಾರೆ.

ವೈದ್ಯಕೀಯ ತಪಾಸಣೆಯಲ್ಲಿ ಸತ್ಯ ಬಯಲು

ದತ್ತುಪುತ್ರನ ವಿಚಿತ್ರ ಹಾಗೂ ಆತಂಕಕಾರಿ ನಡವಳಿಕೆಯಿಂದ ಮಹಿಳೆ ಕಂಗಾಲಾಗಿದ್ದಾಳೆ. ಅಲ್ಲದೇ ಆತನಿಗೆ ವೈದ್ಯಕೀಯ ತಪಾಸಣೆ ನಡೆಸಿದಾಗ ಅಚ್ಚರಿಯ ಸತ್ಯ ಗೊತ್ತಾಗಿದೆ. ಆತನಿಗೆ ಬುದ್ಧಿ ಮಾಂದ್ಯತೆ ಇರೋದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಅತಿಯಾದ ಲೈಂ*ಕ ನಡವಳಿಕೆ ಸಮಸ್ಯೆ ಇರೋದು ಗೊತ್ತಾಗಿದೆ. ಇದೀಗ ಬಾಲಕ ವಿಕೃತ ಮನಸ್ಥಿತಿಗೆ ತಲುಪಿದ್ದು, ನಿಯಂತ್ರಣಕ್ಕೆ ಸಿಗದೇ ಓಡಾಡುತ್ತಿದ್ದಾನೆ. ಮನೆಯಲ್ಲಿ ಕೇಳಿದಷ್ಟು ಹಣ ನೀಡದಿದ್ದರೆ ಕದಿಯಲು ಆರಂಭಿಸಿದ್ದಾನೆ ಎಂದು ಹೈಕೋರ್ಟ್‌ಗೆ ಮಹಿಳೆ ದೂರು ನೀಡಿದ್ದಾಳೆ. ಅಲ್ಲದೇ ಮನೆಯಲ್ಲಿ ನಾನು ಮತ್ತು ವೃದ್ಧ ತಾಯಿ ಇರೋದ್ರಿಂದ ನಮಗೆ ಆತನಿಂದ ಜೀವ ಬೆದರಿಕೆ ಇದೆ ಎಂದು ಕೋರ್ಟ್‌ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಕೂಡಲೇ ಬಾಲಕನನ್ನು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (CARA) ಅಥವಾ ಮಕ್ಕಳ ಕಲ್ಯಾಣ ಸಮಿತಿಗೆ (CWC) ಒಪ್ಪಿಸಲು ಅನುಮತಿ ನೀಡಿ ಎಂದು ಮನವಿ ಮಾಡಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರಿದ್ದ ಏಕಸದಸ್ಯ ಪೀಠವು, ಕಾರಾ (CARA) ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿದೆ.

ತಮಗೆ ಮಕ್ಕಳು ಆಗಲಿಲ್ಲ. ಹೋಗಲಿ, ದತ್ತು ಪಡೆದು ಮಗುವನ್ನ ಸಾಕೋಣ. ಮುಂದಿನ ಜೀವನ್ನಕ್ಕೆ ಅನೂಕು ಆಗಲಿದೆ ಎಂದು ಕನಸು ಕಂಡು ದತ್ತು ಪಡೆದಿದ್ದ ಮಹಿಳೆ ಈಗ ಆಘಾತಕ್ಕೆ ಒಳಗಾಗಿದ್ದಾಳೆ. ಆಕೆಯ ಕನಸು ನುಚ್ಚು ನೂರಾಗಿದ್ದು, ಆತನನ್ನ ಸರಿಪಡಿಸಲು ಸಾಧ್ಯವೇ ಇಲ್ಲ ಎಂದು ಗೊತ್ತಾಗ್ತಿದ್ದಂತೆಯೇ ಆತನಿಂದ ಮುಕ್ತಿ ಪಡೆಯಲು ಹೈಕೋರ್ಟ್ ಮೊರೆ ಹೋಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸರ್ಪ್ರೈಸ್: ದೋಸೆ ಮಾಡಿ, ಫಿಲ್ಟರ್‌ ಕಾಫಿ ಸವಿದ ಟೆಲಿಕಾಂ ಮಿನಿಸ್ಟರ್‌
3 ದಿನಗಳ ಮುಷ್ಕರ ಹಿನ್ನೆಲೆ- ಭಾನುವಾರ ಬ್ಯಾಂಕ್​ಗಳು ಓಪನ್​: ​ಗ್ರಾಹಕರಿಗೆ ಕೇಂದ್ರದ ಸೂಚನೆ