
ಲುಧಿಯಾನಾ(ಮೇ.25): ಲುಧಿಯಾನಾದ ಈ ಮೆಡಿಕಲ್ ಶಾಪ್ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ಈ ಫೋಟೋ ವೈರಲ್ ಆಗುವಂತಹ ವಿಶೇಷತೆ ಏನಿದೆ ಇದರಲ್ಲಿ ಎಂಬ ವಿಚಾರ ಎಲ್ಲರ ಮನದಲ್ಲಿ ಮೂಡುತ್ತದೆ. ಇಲ್ಲಿದೆ ನೋಡಿ ಈ ಫೋಟೋ ಹಿಂದಿನ ಸೀಕ್ರೆಟ್
ಸಾಮಾನ್ಯವಾಗಿ ಅಂಗಡಿ, ಶಾಪ್‌ಗಳ ಹೆಸರಲ್ಲಿ ತಂದೆಯ ಹೆಸರಿನ ಜೊತೆ ಮಗನ ಹೆಸರಿರುತ್ತದೆ. ಆದರೆ ಪಂಜಾಬ್‌ನ ಲುಧಿಯಾನಾ ನಗರದಲ್ಲಿರುವ ಈ ಮೆಡಿಕಲ್ ಶಾಪ್‌ಗೆ ಹಾಕಲಾದ ಬೋರ್ಡ್‌ನಲ್ಲಿ 'ಗುಪ್ತಾ ಆಂಡ್ ಡಾಟರ್ಸ್' ಎಂದು ಬರೆಯಲಾಗಿದೆ. ಅಂದರೆ ತಂದೆಯೊಂದಿಗೆ ಮಗಳ ಹೆಸರಿದೆ. ಶಾಪ್ ಹೊರಗೆ ಹಾಕಲಾದ ಬೋರ್ಡ್ ಸದ್ಯ ಎಲ್ಲರ ಗಮನ ಸೆಳೆದಿದೆ. ಸದ್ಯ ಈ ವಿಚಾರವಾಗಿ ಈ ಶಾಪ್ ಮಾಲೀಕರನ್ನು ಎಲ್ಲರೂ ಶ್ಲಾಘಿಸಲಾರಂಭಿಸಿದ್ದಾರೆ.
ಈ ಫೋಟೋವನ್ನು ಅಲ್ಲಿನ ಸ್ಥಳೀಯ ವೈದ್ಯ ಅಮನ್ ಕಶ್ಯಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಲಿಂಗ ತಾರತಮ್ಯದ ನಡುವೆ ಶಾಪಪ್ ಮಾಲೀಕ ಇಂತಹ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಎಂದು ಬರೆದಿದ್ದಾರೆ.
ಈ ಫೋಟೋಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು,ಇದು ಸ್ತ್ರೀಸಬಲೀಕರಣದೆಡೆ ಒಂದು ಮಹತ್ವದ ಹೆಜ್ಜೆ ಎಂದು ಕಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ