ದೇಶೀಯ ವಿಮಾನ ಸಂಚಾರ ಆರಂಭ: ಪ್ರಯಾಣಿಕರಿಗೆ ಹೊಸ ಆಘಾತ!

By Kannadaprabha News  |  First Published May 25, 2020, 11:07 AM IST

ಇಂದಿನಿಂದ ದೇಶೀಯ ವಿಮಾನ ಸಂಚಾರ ಆರಂಭ: ಹೊಸಾತಂಕ| ಸೀಮಿತ ಸಂಖ್ಯೆಯ ವಿಮಾನ ಸಂಚಾರಕ್ಕೂ ಕೆಲ ರಾಜ್ಯಗಳ ವಿರೋಧ| 14 ದಿನ ಕ್ವಾರಂಟೈನ್‌ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಹೊಸ ಆಘಾತ


 

ನವದೆಹಲಿ(ಮೇ.25): ಸೋಮವಾರದಿಂದ ದೇಶಾದ್ಯಂತ ಸೀಮಿತ ಸಂಖ್ಯೆಯಲ್ಲಿ ದೇಶೀಯ ವಿಮಾನಗಳ ಸಂಚಾರ ಆರಂಭವಾಗಲಿದೆ. ಆದರೆ ಈಗಾಗಲೇ ವಲಸಿಗರಿಂದ ಭಾರೀ ಪ್ರಮಾಣದಲ್ಲಿ ಸೋಂಕಿನ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳು, ಈ ವಿಮಾನಗಳ ಸಂಚಾರಕ್ಕೂ ವಿರೋಧ ವ್ಯಕ್ತಪಡಿಸಿವೆ.

Tap to resize

Latest Videos

ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳು ತಕ್ಷಣದಿಂದ ವಿಮಾನಗಳ ಸಂಚಾರಕ್ಕೆ ಅವಕಾಶ ನೀಡಿದ್ದನ್ನು ಪ್ರಶ್ನಿಸಿವೆ. ಜೊತೆಗೆ ರಾಜ್ಯದ ಕೆಲವೇ ನಿಲ್ದಾಣಗಳನ್ನು ಸೀಮಿತ ವಿಮಾನಗಳ ಸಂಚಾರಕ್ಕೆ ಮಾತ್ರ ಸೀಮಿತಗೊಳಿಸುವ ನಿರ್ಧಾರ ಕೈಗೊಂಡಿವೆ. ಹೀಗಾಗಿ ಈ ರಾಜ್ಯಗಳಿಗೆ ತೆರಳಲು ಉದ್ದೇಶಿಸಿದ್ದ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ಮತ್ತೊಂದೆಡೆ ಕರ್ನಾಟಕ, ಕೇರಳ, ಪಂಜಾಬ್‌, ಒಡಿಶಾ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಮ್ಮು-ಕಾಶ್ಮೀರ ರಾಜ್ಯಗಳು, ವಿಮಾನದಲ್ಲಿ ಆಗಮಿಸಿದವರಿಗೂ 14 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಲು ನಿರ್ಧರಿಸಿವೆ. ಈ ಪೈಕಿ 7 ದಿನ ಸಾಂಸ್ಥಿಕ ಮತ್ತು 7 ದಿನ ಹೋಮ್‌ ಕ್ವಾರಂಟೈನ್‌ಗೆ ಒಳಪಡುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ಪ್ರಯಾಣಿಕರು ಪ್ರಯಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಕೇಂದ್ರ ಆರೋಗ್ಯ ಸಚಿವಾಲಯ ಕೂಡಾ ಇಂಥ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸುವ ಕುರಿತು ವಿಸ್ತೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.

click me!