
ಛತ್ತೀಸ್‌ಗಡದ ಬಲರಾಮ್‌ಪುರದಲ್ಲಿ ಕೇಂದ್ರ ಸಚಿವೆ ರೇಣುಕಾ ಸಿಂಗ್ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಇಬ್ಬರು ಅಧಿಕಾರಿಗಳಿಗೆ ಧಮ್ಕಿ ಹಾಕಿರುವ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕೇಂದ್ರ ಸಚಿವೆ ಅಧಿಕಾರಿಗಳಿಗೆ ನಿಮ್ಮನ್ನು ಕತ್ತಲೆ ಕೋಣೆಗೆ ಹಾಕಿ ಬೆಲ್ಟ್‌ನಿಂದ ಹೊಡೆಯುವುದು ನನಗೆ ಗೊತ್ತು ಎಂದಿರುವುದು ಸದ್ಯ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಬಲರಾಮ್‌ಪುರ ನಿವಾಸಿ ದಿಲೀಪ್ ಗುಪ್ತಾ ಕ್ವಾರಂಟೈನ್ ಕೇಂದ್ರದಲ್ಲಿ ಸೌಲಭ್ಯಗಳಿಲ್ಲ ಎಂದು ಸೋಶಿಯಲ್ ಮಿಡಿಯಾದಲ್ಲಿ ದೂರಿದ್ದರು. ಈ ವೇಳೆ ಛೀಫ್ ಎಕ್ಸಿಕ್ಯೂಟಿವ್ ಹಾಗೂ ತಹಶೀಲ್ದಾರ್ ವಿಡಿಯೋ ಅಪ್ಲೋಡ್ ಮಾಡಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದರೆಂದೂ ಹೇಳಲಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣೀಸಿದ ರೇಣುಕಾ ಸಿಂಗ್ ಪರಿಶೀಲನೆಗೆ ಕ್ವಾರಂಟೈನ್ ಸೆಂಟರ್‌ಗೆ ತಲುಪಿದ್ದರು.
ಇಲ್ಲಿ ಪರಿಶೀಲನೆಗೆ ಬಂದ ಕೇಂದ್ರ ಸಚಿವೆ ಅಧಿಕಾರಿಗಳಿಗೆ ಕ್ಲಾಸ್ ಧಮ್ಕಿ ಹಾಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ಳುತ್ತಾ 'ದಾದಾಗಿರಿ ಇಲ್ಲಿ ನಡೆಯುವುದಿಲ್ಲ. ನಮ್ಮ ಸರ್ಕಾರವಿಲ್ಲ ಎಂಬ ಯೋಚನೆಯಲ್ಲಿರಬೇಡಿ. ನಾವು ಹದಿನೈದು ವರ್ಷ ಸರ್ಕಾರ ನಡೆಸಿದ್ದೇವೆ. ರಾಜ್ಯದಲ್ಲಿ ಹಸಿದವರಿಗೆ ಆಹಾರ ನೀಡಿದ್ದೇವೆ. ನಕ್ಸಲರನ್ನು ಮಟ್ಟ ಹಾಕಿದ್ದಲ್ಲದೇ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಿದ್ದೇವೆ ಹಾಗೂ ಅಭಿವೃದ್ಧಿ ಪಡಿಸಿದ್ದೇವೆ. 2745 ಕೋಟಿ ರೂಪಾಯಿ ನೀಡಿದ್ದೇವೆ. ಕೊರೋನಾ ನಿವಾರಿಸಲು ಭಾರತ ಸರ್ಕಾರದ ಬಳಿ ಹಣದ ಕೊರತೆ ಇಲ್ಲ. ಬಿಜೆಪಿ ಕಾರ್ಯಕರ್ತರನ್ನು ಸಾಮಾಣ್ಯರೆಂದು ಪರಿಗಣಿಸಬೇಕಡಿ. ನೀವು ಬಿಜೆಪಿ ಕಾರ್ಯಕರ್ತರೊಂದಿಗೆ ಬೇಧ ಭಾವ ಮಾಡುತ್ತಿರುವುದನ್ನು ಮರೆತು ಬಿಡಿ. ಕತ್ತಲ ಕೋಣೆಗೊಯ್ದು ಬೆಲ್ಟ್‌ನಿಂದ ಥಳಿಸುವುದು ನನಗೆ ಗೊತ್ತು' ಎಂದಿದ್ದಾರೆ.
ಛತ್ತೀಸ್‌ಗಡದಲ್ಲಿ ಸದ್ಯ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಎಂಬುವುದು ಉಲ್ಲೇಖನೀಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ