
ನವದೆಹಲಿ(ಅ. 21) ಭಾರತ ಕೊರೋನಾ ವಿರುದ್ಧ ಹೋರಾಟ ಮಾಡುತ್ತಲೇ ಇದೆ. ಅರ್ಥ ವ್ಯವಸ್ಥೆ ಸಹ ಕುಸಿದಿದೆ. ಆದರೆ ಇದೆಲ್ಲದರ ನಡುವೆಯೂ ಮೋದಿ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ.
ಬಿಹಾರ ಚುನಾವಣೆ ಎದುರಿನಲ್ಲಿ ಇದ್ದು ಸಮೀಕ್ಷೆಗಳು ಮೋದಿ ಮತ್ತು ಎನ್‌ಡಿಎಗೆ ಬಹುಪರಾಕ್ ಎಂದಿವೆ. ಕಳೆದ ವರ್ಷ ನೀಡಿದ್ದ ಶೇ. 71 ನ್ನು ಮೀರಿ ಈ ವರ್ಷ ಶೇ. 78 ಮೋದಿ ಮತ್ತು ಎನ್ ಡಿಗೆ ಜನರ ಒಲವಿದೆ ಎಂದು ಹೇಳಿದೆ.
22 ವರ್ಷದ ಸಂಜಯ್ ಕುಮಾರ್ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದವರು. ಕೊರೋನಾ ಮತ್ತು ಲಾಕ್ ಡೌನ್ ಪರಿಣಾಂ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಆದರೆ ಮೋದಿ ಬೆಂಬಲಿಸುವುದರಿಂದ ಹಿಂದೆ ಸರಿದಿಲ್ಲ.
ದೇಶದ ಮುಂದೆ ಬಂದು ಮೋದಿ ಕೊಟ್ಟ ಎಚ್ಚರಿಕೆ ಮರೆಯುವ ಹಾಗಿಲ್ಲ
ಮೋದಿ ವೈರಸ್ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯಿಂದ ಭ್ರಷ್ಟಾಚಾರ ಸಂಪೂರ್ಣ ಹೊಗಲಾಡಿಸಲು ಸಾಧ್ಯವಿಲ್ಲ. ಮಾಸ್ಕ್ ಧರಿಸದೆ ನಾವು ತಪ್ಪು ಮಾಡಿ ಅದನ್ನು ಬೇರೆಯವರ ಮೇಲೆ ಹಾಕುವುದು ಸರಿ ಅಲ್ಲ ಎಂದು ಹೇಳಿದ್ದಾರೆ.
ಮೋದಿ ವಿರುದ್ಧ ಅನೇಕರು ಮಾತನಾಡುತ್ತಾರೆ. ಅದಕ್ಕೆ ದಾಖಲೆ ನೀಡುತ್ತಾರೆ. ಆದರೆ ವಾಸ್ತವ ಬೇರೆಯದ್ದೇ ಇದೆ ಎಂಬುದು ಕುಮಾರ್ ಅಭಿಪ್ರಾಯ.
ಪ್ರಧಾನಿ ಬಡವರಿಗೆ ನೆರವು ನೀಡುವಂತಹ ಕೆಲಸ ಮಾಡುತ್ತಲೇ ಬಂದಿದ್ದಾರೆ ಎನ್ನುವುದು ಇನ್ನೊಂದು ಮಾತು. ಸೌಥ್ ಏಷಿಯಾ ಪ್ರೋಗ್ರಾಮ್ ಆಟ್ ಕರ್ನೆಜ್ ಎಂಡೋವ್ ಮೆಂಟ್ ನ ನಿರ್ದೇಶಕ ಮಿಲನ್ ವೈಷ್ಣವ್, ದೇಶದಲ್ಲಿ ಪ್ರಬಲ ಪ್ರತಿಪಕ್ಷ ಇಲ್ಲದಿರುವುದು ಮೋದಿ ಜನಪ್ರಿಯತೆ ಹಾಗೆ ಉಳಿಯಲು ಕಾರಣ ಎನ್ನುತ್ತಾರೆ.
ಯಾವುದೋ ಒಂದು ಕ್ಷಣಿಕ ಕಾರಣದಿಂದ ಇಂಥ ಅಧಿಕಾರ ಸ್ಥಾಪನೆ ಆಗಿಲ್ಲ. ಜನರು 2024 ನ್ನು ಗುರಿಯಾಗಿರಿಸಿಕೊಂಡು ನೋಡುತ್ತಿದ್ದಾರೆ. ಬದಲಾವಣೆಗೆ ಅವಕಾಶ ಇದೆ ಎಂದು ಮಿಲನ್ ಅಭಿಪ್ರಾಯ ಪಡುತ್ತಾರೆ.
ಪ್ರಧಾನಿಯಾಗಿ ಮೋದಿ ಗ್ಲೋಬಲ್ ಹೂಡಿಕೆದಾರರನ್ನು ದೇಶಕ್ಕೆ ಕರೆದು ತಂದಿದ್ದಾರೆ. ಅವರ ರಾಷ್ಟ್ರೀಯವಾದಿ ಅಜೆಂಡಾಗಳಿಗೆ ಮಾನ್ಯತೆ ಸಿಕ್ಕುತ್ತಲೆ ಇದೆ. ಹಿಂದು ತತ್ವಗಳ ಪರಿಪಾಲಕರಾಗಿ ನಿಂತಿದ್ದು ಅನೇಕರ ಮೆಚ್ಚುಗೆ ಗಳಿಸಿಕೊಂಡಿದೆ ಎಂದು ವಿವರಿಸುತ್ತಾರೆ.
ಕೊರೋನಾ ಕಾರಣಕ್ಕೆ ಚಾಲಕ ವೃತ್ತಿ ಕಳೆದುಕೊಂಡ ಅರವತ್ತು ವರ್ಷದ ಚಾಲಕ ಮಹಾರಾಷ್ಟ್ರದ ಸಹೆಬಾರ್ನೋ ರಾವ್ ಮೋದಿ ಯಾವ ತಪ್ಪು ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪ್ರತಿಪಾದನೆ ಮಾಡುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ