
ಅಯೋಧ್ಯೆ(ಅ.21): ಬಿಜೆಪಿ ಸಂಸದ ಹಾಗೂ ನಟ ರವಿ ಕಿಶನ್ ಸಾಮಾನ್ಯವಾಗಿ ಸುದ್ದಿಯಲ್ಲಿರುತ್ತಾರೆ. ರವಿ ಕಿಶನ್ ತಮ್ಮ ವರ್ತನೆ ಹಾಗೂ ಹೇಳಿಕೆಗಳಿಂದಲೇ ಫೇಮಸ್ ಆಗಿದ್ದಾರೆ. ಅವರು ಟ್ವಿಟರ್‌ನಲ್ಲೂ ಭಾರೀ ಆಕ್ಟಿವ್ ಆಗಿದ್ದಾರೆ, ಅಲ್ಲದೇ ಪ್ರಸ್ತುತ ಸಮಸ್ಯೆಗಳ ಬಗ್ಗೆ ತಮ್ಮ ಅಭಿಪ್ರಾಯ ಜನರೆದುರು ಇಡುತ್ತಾರೆ. ಸದ್ಯ ಅವರು ಇತ್ತೀಚೆಗೆ ಅಯೋಧ್ಯೆಯಲ್ಲಿ ನಡೆದ ರಾಮಲೀಲಾದಲ್ಲಿ ನಟಿಸಿದ ಪಾತ್ರದ ಬಗ್ಗೆ ಭಾರೀ ಚರ್ಚೆ ಮೂಡಿಸಿದ್ದಾರೆ. ಇವರು ಅಯೋಧ್ಯೆಯ ವರ್ಚುವಲ್ ರಾಮಲೀಲಾದಲ್ಲಿ ಪ್ರಭು ಶ್ರೀರಾಮನ ಸಹೋದರ ಭರತನ ಪಾತ್ರ ನಿರ್ವಹಿಸಿದ್ದರು. ಭೋಜ್‌ಪುರಿ ಸಿನಿಮಾದಲ್ಲಿ ತಮ್ಮ ಭರ್ಜರಿ ನಟನೆಯಿಂದ ಎಲ್ಲರನ್ನೂ ರಂಜಿಸುವ ರವಿ ಕಿಶನ್ ಭರತನ ಪಾತ್ರದಲ್ಲಿ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾರೆ.
ಭರತನ ಪಾತ್ರ ನಿರ್ವಹಿಸಿದ ರವಿ ಕಿಶನ್ ನಟನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಿರವಾಗಲೇ ಸಂಸದ ಹಾಗೂ ನಟ ರವಿ ಕಿಶನ್ ತಮ್ಮ ಟ್ವಿಟರ್ ಖಾತೆಯಿಂದ ರಾಮ್ ಲೀಲಾದ ಕೆಲ ಫೋಟೋಗಳನ್ನು ಶೇರ್ ಮಾಡಿಕೊಂಡು ರಾಮನಾಮ ಜಪಿಸಿದ್ದಾರೆ.
ಅಯೋಧ್ಯರೆಯಲ್ಲಿ ನಡೆದಿದ್ದ ರಾಮ್‌ಲೀಲಾ ಉರ್ದು ಸೇರಿ ಹದಿನಾಲ್ಕು ಭಾಷೆಗಳಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಿದೆ. ಇಲ್ಲಿ ನಟ ವಿಂದು ದಾರಾ ಸಿಂಗ್ ಹನುಮಂತನ ಪಾತ್ರದಲ್ಲಿ ನಟಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ