ಕಾಶ್ಮೀರ ಎನ್‌ಕೌಂಟರ್‌: 2 ದಿನದಲ್ಲಿ ಐವರು ಉಗ್ರಗಾಮಿಗಳು ಹತ!

By Suvarna News  |  First Published Oct 21, 2020, 2:10 PM IST

ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಉಗ್ರರ ಸಂಹಾರ| ಕಾಶ್ಮೀರ ಎನ್‌ಕೌಂಟರ್‌: 2 ದಿನದಲ್ಲಿ ಐವರು ಉಗ್ರಗಾಮಿಗಳು ಹತ


ನವದೆಹಲಿ(ಅ.21): ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಉಗ್ರರ ಸಂಹಾರ ಮುಂದುವರೆದಿದ್ದು, ಮಂಗಳವಾರ ಪುಲ್ವಾಮಾ ಮತ್ತು ಶೋಪಿಯಾನ್‌ನಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ನಾಲ್ವರು ಭಯೋತ್ಪಾದಕರನ್ನು ಸೇನೆ ಸಂಹಾರ ಮಾಡಿದೆ.

ಉಗ್ರರು ಅಡಗಿ ಕುಳಿತ ಖಚಿತ ಮಾಹಿತಿ ಮೇರೆಗೆ ಸೇನೆ ಸೋಮವಾರ ಸಂಜೆ ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಲ್ಲಿ ಶೋಧಕಾರ‍್ಯ ಆರಂಭಿಸಿತ್ತು. ಈ ವೇಳೆ ಉಗ್ರರು ಮತ್ತು ಸೇನೆ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಸೋಮವಾರ ಒಬ್ಬ ಉಗ್ರ, ಮಂಗಳವಾರ ಮುಂಜಾನೆ ಮತ್ತೊಬ್ಬ ಉಗ್ರ ಎನ್‌ಕೌಂಟರ್‌ಗೆ ಬಲಿಯಾಗಿದ್ದ.

Tap to resize

Latest Videos

ಇತ್ತ ಪುಲ್ವಾಮಾದಲ್ಲಿ ನಡೆದ ಮತ್ತೊಂದು ಉಗ್ರ ಕಾರಾರ‍ಯಚರಣೆಯಲ್ಲಿ ಮಂಗಳವಾರ ಮೂವರು ಉಗ್ರರು ಹತರಾಗಿದ್ದಾರೆ. ಈ ಮೂಲಕ 2 ದಿನದಲ್ಲಿ ಸೇನೆ ಐವರು ಭಯೋತ್ಪಾದಕರನ್ನು ಸಂಹಾರ ಮಾಡಿದೆ. ಉಗ್ರರ ಬಳಿ ಇದ್ದ ಎಕೆ 47, ಪಿಸ್ತೂಲ್‌ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಸೇನೆ ವಶಕ್ಕೆ ಪಡೆದಿದೆ.

click me!