ಹೊಸ ವರ್ಷದ ಪಾರ್ಟಿ ಮೂಡ್‌ನಲ್ಲೂ ದ್ರಾಕ್ಷಿ ಸೇಲ್‌ ಜಾಸ್ತಿ ಆಗಿದ್ದೇಕೆ?

Published : Jan 01, 2025, 05:45 PM IST
ಹೊಸ ವರ್ಷದ ಪಾರ್ಟಿ ಮೂಡ್‌ನಲ್ಲೂ ದ್ರಾಕ್ಷಿ ಸೇಲ್‌ ಜಾಸ್ತಿ ಆಗಿದ್ದೇಕೆ?

ಸಾರಾಂಶ

ಹೊಸ ವರ್ಷದ ಪಾರ್ಟಿಗಳಲ್ಲಿ ದ್ರಾಕ್ಷಿ ಹಣ್ಣುಗಳ ಮಾರಾಟವು ಗಣನೀಯವಾಗಿ ಏರಿಕೆಯಾಗಿದೆ. ಬ್ಲಿಂಕಿಟ್ ಮತ್ತು ಸ್ವಿಗ್ಗಿಯ ಇನ್‌ಸ್ಟಮಾರ್ಟ್‌ನಂತಹ ಆನ್‌ಲೈನ್ ವಿತರಣಾ ವೇದಿಕೆಗಳು ಡಿಸೆಂಬರ್ 31 ರಂದು ದ್ರಾಕ್ಷಿ ಮಾರಾಟದಲ್ಲಿ ಹೆಚ್ಚಳವನ್ನು ವರದಿ ಮಾಡಿವೆ. ಹನ್ನೆರಡು ದ್ರಾಕ್ಷಿ ತಿನ್ನುವ ಸಂಪ್ರದಾಯವು ಸಾಮಾಜಿಕ ಮಾಧ್ಯಮದ ಮೂಲಕ ಜನಪ್ರಿಯತೆ ಗಳಿಸಿದೆ.

ಬೆಂಗಳೂರು (ಜ.1): ಜೊಮೋಟೋ ಮಾಲೀಕತ್ವದ ಬ್ಲಿಂಕಿಟ್‌ ಹಾಗೂ ಸ್ವಿಗ್ಗಿಯ ಇನ್ಸ್‌ಟಾಮಾರ್ಟ್‌, ಹೊಸ ವರ್ಷದ ಪಾರ್ಟಿಯಂದು ಗ್ರಾಹಕರು ಆರ್ಡರ್‌ ಮಾಡಿದ ಟಾಪ್‌ ಟ್ರೆಂಡ್‌ಗಳ ವಿವರಗಳನ್ನು ನೀಡುತ್ತಿವೆ. ಈ ಎಲ್ಲದರ ನಡುವೆ ದ್ರಾಕ್ಷಿ ಹಣ್ಣುಗಳ ಮಾರಾಟ ಕೂಡ ಏರಿಕೆ ಕಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಡಿಸೆಂಬರ್‌ 31ರ ಸಂಜೆ ನ್ಯೂ ಇಯರ್‌ ಪಾರ್ಟಿ ಮಾಡುವ ಜನರಿಗೆ ಸಡನ್‌ ಆಗಿ ದ್ರಾಕ್ಷಿ ನೆನಪಾಗಿ ಬಿಟ್ಟಿದೆ. ಈ ಬಗ್ಗೆ ಬ್ಲಿಂಕಿಟ್‌ ಸಿಇಒ ಆಲ್ಬಿಂದರ್‌ ದಿಂಡ್ಸಾ ಕೂಡ ಬರೆದುಕೊಂಡಿದ್ದಾರೆ. ಡಿಸೆಂಬರ್‌ 31 ರಂದು ಬ್ಲಿಂಕಿಟ್‌ಅನ್ನು ಆರ್ಡರ್‌ ಮಾಡಲಾದ ವಸ್ತುಗಳ ಪೈಕಿ ದ್ರಾಕ್ಷಿ ಕೂಡ ಸ್ಥಾನ ಪಡೆದುಕೊಂಡಿದೆ. ಸಾಮಾನ್ಯ ದಿನಕ್ಕೆ ಹೋಲಿಸಿದರೆ, ಮಂಗಳವಾರ 7 ಪಟ್ಟು ಹೆಚ್ಚು ದ್ರಾಕ್ಷಿ ಮಾರಾಟ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
Swiggy Instamart ಕೂಡ ಹೊಸ ವರ್ಷದ ಮುನ್ನಾದಿನದಂದು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ದ್ರಾಕ್ಷಿಯನ್ನು ಹೆಚ್ಚು ಹುಡುಕಲಾದ ಐಟಂಗಳಲ್ಲಿ ಒಂದಾಗಿದೆ ಎಂದು ತಿಳಿಸಿದೆ. ಕೇವಕ ಕ್ವಿಕ್‌ ಕಾಮರ್ಸ್‌ ಅಪ್ಲಿಕೇಶನ್‌ಗಳಲ್ಲಿ ಮಾತ್ರವಲ್ಲ, ಸೋಶಿಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್‌ಗಳಲ್ಲೂ ಹೊಸ ವರ್ಷದ ಮುನ್ನಾದಿನ 'twelve grape' ಅಂದರೆ ಹನ್ನೆರಡು ದ್ರಾಕ್ಷಿ ಟ್ರೆಂಡಿಂಗ್‌ ಹ್ಯಾಶ್‌ಟ್ಯಾಗ್‌ ಆಗಿತ್ತು.

'ಅದೃಷ್ಟಕ್ಕಾಗಿ ಹನ್ನೆರಡು ದ್ರಾಕ್ಷಿಗಳು' ಅಥವಾ 'ಲಾಸ್ ಡೋಸ್ ಉವಾಸ್ ಡೆ ಲಾ ಸೂರ್ಟೆ (ಸ್ಪ್ಯಾನಿಷ್ ಭಾಷೆಯಲ್ಲಿ)' ಅದೃಷ್ಟಕ್ಕಾಗಿ ಗಡಿಯಾರವು ಡಿಸೆಂಬರ್ 31 ರ ಮಧ್ಯರಾತ್ರಿ 12 ಗಂಟೆಗೆ ಹೊಡೆದಾಗ 12 ದ್ರಾಕ್ಷಿಯನ್ನು ತಿನ್ನುವ ಸಂಪ್ರದಾಯವೆಂದು ನಂಬಲಾಗಿದೆ. ಪ್ರತಿ ದ್ರಾಕ್ಷಿಯು ವರ್ಷದ ಒಂದು ತಿಂಗಳನ್ನು ಪ್ರತಿನಿಧಿಸುತ್ತದೆ. ಮೇಜಿನ ಕೆಳಗೆ ದ್ರಾಕ್ಷಿಯನ್ನು ತಿನ್ನುವ ಮೂಲಕ ಅನೇಕರು ಈ ಸಂಪ್ರದಾಯವನ್ನು ಅನುಸರಿಸುತ್ತಾರೆ.

ಇದರ ಮೂಲದ ಬಗ್ಗೆ ಹಲವಾರು ಕಥೆಗಳಿದ್ದರೂ "ಲಾಸ್ ಡೋಸ್ ಉವಾಸ್ ಡೆ ಲಾ ಸುರ್ಟೆ ಸಂಪ್ರದಾಯ" ಪೂರ್ವ ಸ್ಪೇನ್‌ನ ಅಲಿಕಾಂಟೆಯಲ್ಲಿ 1985 ರ ಹಿಂದಿನದು ಎಂದು ನಂಬಲಾಗಿದೆ, ಅಲ್ಲಿ ಅಲಿಕಾಂಟೆಸ್ ದ್ರಾಕ್ಷಿ ಬೆಳೆಗಾರರು ಡಿಸೆಂಬರ್‌ ವೇಳೆ ದ್ರಾಕ್ಷಿ ಅಧಿಕ ಉತ್ಪಾದನೆಯಾದಾಗ ದ್ರಾಕ್ಷಿ ಮಾರಾಟವನ್ನು ಹೆಚ್ಚಿಸಲು ಈ ಸಂಪ್ರದಾಯವನ್ನು ಪ್ರಾರಂಭಿಸಿದರು ಎನ್ನಲಾಗಿದೆ.
ಸ್ಪ್ಯಾನಿಷ್ ಲೇಖಕ ಮತ್ತು ಪ್ರೊಫೆಸರ್ ಮಾರ್ಸೆಲಿನೊ ಲೊಮಿಂಚಾರ್ ಬ್ಲಾಗ್ ಪೋಸ್ಟ್‌ನಲ್ಲಿ ಈ ಬಗ್ಗೆ ಬರೆದಿದ್ದಾರೆ. ಇದು ವಾಸ್ತವವಾಗಿ 1909 ರಲ್ಲಿ ಅಲಿಕಾಂಟೆಯಲ್ಲಿ ಮಾರ್ಕೆಟಿಂಗ್ ಅಭಿಯಾನವಾಗಿ ಪ್ರಾರಂಭವಾಯಿತು, ಡೊಮಿಂಗಾ ದ್ರಾಕ್ಷಿಗಳ ಇಳುವರಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಾದಾಗ ಅವರು, 12 ಅದೃಷ್ಟ ದ್ರಾಕ್ಷಿಗಳನ್ನು ನೀಡುವ ಮೂಲಕ ಸಂಪ್ರದಾಯ ಆರಂಭಿಸಿದರು ಎನ್ನಲಾಗಿದೆ.

ನ್ಯೂ ಇಯರ್‌ ಪಾರ್ಟಿಗೆ ಈ ಫ್ಲೇವರ್‌ ಕಾಂಡಮ್‌ಗೆ ಬೇಡಿಕೆ ಜಾಸ್ತಿ ಇತ್ತಂತೆ!

ಮ್ಯಾಡ್ರಿಡ್‌ನ ಪೋರ್ಟಾ ಡೆಲ್ ಸೋಲ್ ಸ್ಕ್ವೇರ್‌ನಲ್ಲಿ ಈ ಸಂಪ್ರದಾಯವು ಮತ್ತಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿತು, ಅಲ್ಲಿ ಗಡಿಯಾರದ ಪ್ರತಿ ಚೈಮ್‌ಗೆ ಒಂದು ದ್ರಾಕ್ಷಿಯನ್ನು ತಿನ್ನಲಾಗುತ್ತದೆ. 

ಎಂ.ಜಿ.ರೋಡ್, ಬ್ರಿಗೇಡ್ ರೋಡಲ್ಲಿ ಒಂದೇ ರಾತ್ರಿಗೆ 15 ಮೆಟ್ರಿಕ್ ಟನ್ ಕಸ; ರಸ್ತೆ ತುಂಬೆಲ್ಲಾ ಖಾಲಿ ಬಾಟ್ಲು!

ಸಾಮಾಜಿಕ ಮಾಧ್ಯಮ ಮತ್ತು ಅಮೇರಿಕನ್ ಸಿಟ್‌ಕಾಮ್ ಮಾಡರ್ನ್ ಫ್ಯಾಮಿಲಿಗೆ ಧನ್ಯವಾದಗಳು, ಅಲ್ಲಿ ಹಾಗೂ ಜಾಗತಿಕವಾಗಿ ಕಾಣುತ್ತಿದ್ದ ದ್ರಾಕ್ಷಿ ಸಂಪ್ರದಾಯ ಈ ಬಾರಿ ಭಾರತಕ್ಕೆ ಬಂದಿದೆ. ಅಲ್ಲಿ 2025 ರ ಪ್ರತಿ ತಿಂಗಳು ಅದೃಷ್ಟಕ್ಕಾಗಿ ಹಲವಾರು ಜನರು ಮಧ್ಯರಾತ್ರಿ 12 ದ್ರಾಕ್ಷಿಯನ್ನು ತಿಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ