
ನ್ಯೂ ಇಯರ್ ಪಾರ್ಟಿ (New Year party) ಎಂದಾಗ ಮದ್ಯ (alcohol) ಇರ್ಲೇಬೇಕು ಎನ್ನುವ ಕಲ್ಪನೆ ಅನೇಕರಿಗಿದೆ. ಪಬ್, ಬಾರ್ ಸೇರಿದಂತೆ ಹೊಟೇಲ್, ಮನೆಗಳಲ್ಲಿ ನಡೆಯುವ ನ್ಯೂ ಇಯರ್ ಪಾರ್ಟಿಯಲ್ಲಿ ಪಾಲ್ಗೊಳ್ಳುವ ಜನರು ಕುಡಿದು ಟೈಟ್ ಆಗ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಡಿಸೆಂಬರ್ 31ರ ಮಧ್ಯರಾತ್ರಿ ನಶೆ ಏರಿಸಿಕೊಂಡು, ನಡೆಯೋಕೆ ಆಗದೆ ಓಲಾಡ್ತಾ, ತೂರಾಡ್ತಾ ಹೈಡ್ರಾಮಾ ಮಾಡಿದ ಅನೇಕ ಜನರ ವಿಡಿಯೋ ವೈರಲ್ ಆಗ್ತಾನೆ ಇದೆ. ಸಿಲಿಕಾನ್ ಸಿಟಿ ಬೆಂಗಳೂರು ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಎಂಜಿ ರೋಡ್, ಬ್ರಿಗೇಡ್ ರೋಡ್ ಗಳಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ ಒಂದ್ಕಡೆ ಆದ್ರೆ ಇನ್ನೊಂದು ಕಡೆ, ಆಲ್ಕೋಹಾಲ್ ಸೇವನೆ ಮಾಡಿದ ಯುವಕ, ಯುವತಿಯರು ಸಾರ್ವಜನಿಕರ ಕಣ್ಣು ಕೆಂಪು ಮಾಡಿದ್ದಾರೆ. ಆದ್ರೆ ಜೈಪುರ (Jaipur)ದಲ್ಲಿ ಹೊಸ ವರ್ಷವನ್ನು ಭಿನ್ನವಾಗಿ ಸ್ವಾಗತಿಸಲಾಗಿದೆ. ಅಲ್ಲಿ ಆಲ್ಕೋಹಾಲ್ ಬದಲು ಹಾಲ (milk)ನ್ನು ಹಂಚಲಾಗಿದೆ.
22 ವರ್ಷಗಳ ಹಿಂದೆ ಇಂಡಿಯನ್ ಆಸ್ತಮಾ ಕೇರ್ ಸೊಸೈಟಿ ಮತ್ತು ರಾಜಸ್ಥಾನ ಯುವ ವಿದ್ಯಾರ್ಥಿಗಳ ಸಂಘವು ಹೊಸ ವರ್ಷವನ್ನು ಹಾಲಿನಿಂದ ಪ್ರಾರಂಭಿಸಿ, ಮದ್ಯದಿಂದಲ್ಲ ಎಂಬ ಅಭಿಯಾನವನ್ನು ನಡೆಸಿತ್ತು. ಆರೋಗ್ಯಕರ ಜೀವನ ನಡೆಸಲು ಜನರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಅಭಿಯಾನವನ್ನು ನಡೆಸಲಾಗ್ತಾ ಬಂದಿದೆ. ಈ ಅಭಿಯಾನವನ್ನು ಡಿಸೆಂಬರ್ 31 ರ ರಾತ್ರಿ ರಾಜಸ್ಥಾನ ವಿಶ್ವವಿದ್ಯಾಲಯದ ಮುಖ್ಯ ದ್ವಾರದಲ್ಲಿ ಪ್ರಾರಂಭಿಸಲಾಯಿತು. ಸಂಘಟಕರು, ಬಂದ ಜನರಿಗೆಲ್ಲ ಹಾಲನ್ನು ಉಚಿತವಾಗಿ ವಿತರಿಸಿದ್ರು. ಹೊಸ ವರ್ಷವನ್ನು ಮದ್ಯದ ಅಮಲಿನಲ್ಲಿ ಸ್ವಾಗತಿಸಬೇಡಿ, ಹಾಲಿನೊಂದಿಗೆ ಶುರು ಮಾಡಿ ಎಂದು ಜನರನ್ನು ಜಾಗೃತಗೊಳಿಸಿದರು. ಈ ಅಭಿಯಾನ ಎಷ್ಟು ಪ್ರಸಿದ್ಧಿಯಾಗಿದೆ ಅಂದ್ರೆ ಈಗ ಜೈಪುರದ ಮೂಲೆ ಮೂಲೆಯಲ್ಲಿ ಈ ಅಭಿಯಾನ ನಡೆಯುತ್ತಿದೆ. ಹೊಸ ವರ್ಷದ ಸಮಯದಲ್ಲಿ ಬಂದ ಪ್ರತಿಯೊಬ್ಬ ವ್ಯಕ್ತಿಗೆ ಹಾಲು ನೀಡಲಾಗುತ್ತದೆ.
ಡಿ.31ರ ರಾತ್ರಿ ಹೆಚ್ಚು ಆರ್ಡರ್ ಮಾಡಿದ್ದು ಊಟ, ತಿಂಡಿಯಲ್ಲ! ಈ ವಸ್ತು
ಸೋಶಿಯಲ್ ಮೀಡಿಯಾದಲ್ಲಿ ಇದ್ರ ವಿಡಿಯೋ ವೈರಲ್ ಆಗಿದೆ. ಜನರು ಬಿಸಿ ಬಿಸಿ ಹಾಲು ಕುಡಿಯುತ್ತಿರೋದನ್ನು ನೀವು ನೋಡ್ಬಹುದು. ಮಣ್ಣಿನ ಕಪ್ ನಲ್ಲಿ ಹಾಲನ್ನು ವಿತರಿಸಲಾಗುತ್ತಿದೆ. ಜೈಪುರದ ಪಾರಂಪರಿಕ ಸಂಪ್ರದಾಯವನ್ನು ಜನರು ಮೆಚ್ಚಿಕೊಂಡಿದ್ದಾರೆ. ಇದು ಸಕಾರಾತ್ಮಕ ನಡೆ ಎಂದು ಅಭಿಯಾನವನ್ನು ಶ್ಲಾಘಿಸಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿ ಜನರು ಹೊಸ ವರ್ಷವನ್ನು ತಮ್ಮಿಷ್ಟದಂತೆ ಆಚರಿಸುತ್ತಾರೆ. ಆದ್ರೆ ಜೈಪುರದ ಈ ಪದ್ಧತಿ ಎಲ್ಲರನ್ನು ಸೆಳೆದಿದೆ.
ಜೈಪುರದ ಈ ಹಾಲಿನ ಅಭಿಯಾನ ಸ್ಥಳೀಯರನ್ನು ಮಾತ್ರವಲ್ಲ ಪ್ರವಾಸಿಗರನ್ನು ಸೆಳೆಯುತ್ತದೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಾರೆ. ಜನರಿಗೆ ಉಚಿತವಾಗಿ ಹಾಲು ನೀಡುವುದು ಮಾತ್ರ ಇದ್ರ ಉದ್ದೇಶವಲ್ಲ, ಮದ್ಯದಿಂದ ಆಗುವ ನಷ್ಟವನ್ನು ಜನರಿಗೆ ಮನವರಿಕೆ ಮಾಡುವುದು ಎಂದು ಸಂಘಟಕರು ಹೇಳಿದ್ದಾರೆ.
ವಿಶೇಷ ರೀತಿ ಹೊಸ ವರ್ಷ ಸ್ವಾಗತಿಸಿದ ಭಾರತೀಯ ರೈಲ್ವೇ, ಪ್ರಯಾಣಿಕರಿಂದ ಭರ್ಜರಿ
ಪಪ್ಪು ಸಿಂಗ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಇದ್ರ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಇದು ಒಳ್ಳೆಯ ಸಂಪ್ರದಾಯ, ಇದನ್ನು ಪ್ರಚಾರ ಮಾಡಬೇಕು. ಜೈಪುರದಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದ್ದು ಮದ್ಯ ಸೇವಿಸಿ ಅಲ್ಲ, ಹಾಲು ಕುಡಿದು. ಸುಮಾರು 2 ದಶಕಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ನಗರದ ಹಲವೆಡೆ ಇಂತಹ ಮಳಿಗೆಗಳನ್ನು ಹಾಕಲಾಗಿದೆ. ಈ ಪ್ರವೃತ್ತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ದೊಡ್ಡ ಪ್ರಯತ್ನ ಎಂದು ಶೀರ್ಷಿಕೆ ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ