ನಾಲ್ಕೇ ವರ್ಷದಲ್ಲಿ ನಿವೃತ್ತಿಯಾದ್ರೆ, ಅವರನ್ನ ಯಾರು ಮದ್ವೆ ಆಗ್ತಾರೆ ಎಂದ ಕನ್ಹಯ್ಯ ಕುಮಾರ್!

Published : Jun 18, 2022, 05:18 PM IST
ನಾಲ್ಕೇ ವರ್ಷದಲ್ಲಿ ನಿವೃತ್ತಿಯಾದ್ರೆ, ಅವರನ್ನ ಯಾರು ಮದ್ವೆ ಆಗ್ತಾರೆ ಎಂದ ಕನ್ಹಯ್ಯ ಕುಮಾರ್!

ಸಾರಾಂಶ

ಕುಟುಂಬದ ಒಬ್ಬರಿಗೆ ಸೇನೆಯಲ್ಲಿ ಕೆಲಸ ಸಿಕ್ಕಾಗ ಅವರ ಇಡೀ ಕುಟುಂಬಕ್ಕೆ ಅವರು ವಾಸ ಮಾಡುತ್ತಿದ್ದ ಇಡೀ ಪ್ರದೇಶದವರು ಗೌರವ ನೀಡುತ್ತಿದ್ದರು. ದೇಶದ ಸೇನೆ ಕುರಿತಾಗಿ ಪ್ರಶ್ನೆ ಬರುತ್ತಿದೆ ಎಂದಾದಲ್ಲಿ ಅದು ದೇಶದ ಭದ್ರತೆಯ ಕುರಿತಾಗಿನ ಪ್ರಶ್ನೆಯೂ ಹೌದು. ಇಡೀ ಸೇನಾ ನೇಮಕಾತಿಯನ್ನು ಅಪಹಾಸ್ಯ ಮಾಡಬೇಡಿ. ಬಡ ರೈತರ ಮಕ್ಕಳು, ಬಡ ಕಾರ್ಮಿಕರು ಮಕ್ಕಳು ಸೇನೆಗೆ ಸೇರುತ್ತಾರೆ. ಇಡೀ ದೇಶದ ಯುವ ಜನತೆಯನ್ನು ಬೆಂಕಿಗೆ ಹಾಕುವ ಯೋಜನೆ ಅಗ್ನಿಪಥ್ ಎಂದು ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಹೇಳಿದ್ದಾರೆ.  

ನವದೆಹಲಿ (ಜೂನ್ 18): ಅಗ್ನಿಪಥ್ ಯೋಜನೆಯ (Agnipath scheme) ಕುರಿತಾಗಿ ಕೇಂದ್ರ ಸರ್ಕಾರ, ವಿರೋಧ ಪಕ್ಷಗಳಿಂದ ತೀವ್ರ ಟೀಕೆ ಎದುರಿಸುತ್ತಿದೆ. ದೇಶದ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ (Congress), ನಿರಂತರವಾಗಿ ಈ ಯೋಜನೆಯನ್ನು ಹಿಂಪಡೆಯುವಂತೆ ಆಗ್ರಹ ಮಾಡುತ್ತಿದೆ. ಇದರ ನಡುವೆ ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ (Congress leader Kanhaiya Kumar) ಈ ಯೋಜನೆಯ ಬಗ್ಗೆ ತಮ್ಮ ಪ್ರಶ್ನೆಗಳನ್ನು ಎತ್ತಿದ್ದಾರೆ.

ಸರ್ಕಾರದ ಪ್ರತಿಯೊಬ್ಬ ಸಚಿವರು ಅಗ್ನಿಪಥ ಯೋಜನೆಯ ಲಾಭವನ್ನು ಲೆಕ್ಕ ಹಾಕುತ್ತಿರುವ ರೀತಿ ನೋಡಿದರೆ ಅವರು ಏನನ್ನೋ ಮಾರಿಕೊಳ್ಳುತ್ತಿದ್ದಾರೆ ಎಂದು ಅನಿಸುತ್ತಿದೆ ಎಂದರು. ಈ ಭಾಷೆಯ ಮನಸ್ಥಿತಿಯನ್ನು ಗುರುತಿಸಲು ಪ್ರಯತ್ನಿಸಿ. ಈ ಯೋಜನೆಯ ಅಗತ್ಯವೇನಿದೆ ಎಂಬುದನ್ನು ಸಚಿವರು ಮೊದಲು ಹೇಳಬೇಕು ಎಂದು ಪ್ರಶ್ನಿಸಿದರು. ಪ್ರಧಾನಿ ಮೋದಿ (PM Modi) ಹಾಕಿದ್ದ 15 ಲಕ್ಷ ರೂಪಾಯಿ ಬರುವ ಅಕೌಂಟ್ ಗೆ ಅಗ್ನಿಪಥ್ ಯೋಜನೆಯ 20 ಲಕ್ಷವೂ ಹೋಗಲಿದೆ ಎಂದು ಕನ್ಹಯ್ಯ  ಕುಮಾರ್ ವ್ಯಂಗ್ಯವಾಡಿದ್ದಾರೆ. ಅಗ್ನಿಪಥ ಯೋಜನೆಯು ಈ ದೇಶದ ಯುವಜನತೆಯು ಬೆಂಕಿಗೆ ನೂಕುವ ಯೋಜನೆ ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.

ಬಿಹಾರದ ನಿರುದ್ಯೋಗ ದರವು ರಾಷ್ಟ್ರೀಯ ನಿರುದ್ಯೋಗ ದರಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಅಗ್ನಿಪಥ್ ಕುರಿತಾಗಿ ಕನ್ಹಯ್ಯಾ ಕುಮಾರ್ ಹೇಳಿದ್ದಾರೆ. ಅಲ್ಲಿ ಕೆಲಸಕ್ಕಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗುವುದು ದಶಕಗಳಿಂದ ನಡೆದುಕೊಂಡು ಬಂದಿದೆ. ಇದಕ್ಕೆ ಈಗಿನ ಸರ್ಕಾರ ಕಾರಣವಲ್ಲ. ಈ ನಡೆಯಿಂದ ಏನಾಗಿದೆ ಎಂದರೆ ಯುವಕರು ಸೇನೆಗೆ ಸೇರುವ ಅವಕಾಶಕ್ಕಾಗಿ ಚಿಂತಿಸುತ್ತಿದ್ದಾರೆ. ಇಲ್ಲಿ ವಿಚಾರ ಏನೆಂದರೆ, ಬಿಹಾರದ ಯುವಕರು ಸೈನ್ಯದಲ್ಲಿ ನೇಮಕವಾಗದೇ ಹೋದರೆ ಅವರನ್ನು ಯಾರೂ ಮದುವೆಯಾಗುವುದಿಲ್ಲ.

ಇನ್ನು ಸೇನೆಗೆ ಸೇರಿ ನಾಲ್ಕು ವರ್ಷಕ್ಕೆ ನಿವೃತ್ತಿಯಾದ್ರೆ ಇವರನ್ನು ಯಾರು ಮದುವೆಯಾಗ್ತಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವು ಡಾ.ಡಾಂಗ್ ಎಂದು ಪರಿಗಣಿಸುತ್ತಾರೆ. ಜನರನ್ನು ಪಂಜರದ ಒಳಗೆ ಇರುವ ಇಲಿ ಎಂದುಕೊಂಡಿದ್ದಾರೆ. ಇಲಿ ಎಷ್ಟು ಮೇಲೆ ಜಿಗಿಯುತ್ತದೆ ಎನ್ನುವುದನ್ನು ಪರೀಕ್ಷೆ ಮಾಡಲು ಬೇಕೆಂದಾಗ ಇಂಜೆಕ್ಷನ್ ನೀಡಲು ಆರಂಭಿಸುತ್ತಾರೆ ಎಂದರು.

ಪೊಲೀಸ್ ಕ್ಲಿಯರೆನ್ಸ್ ಸಿಗೋದಿಲ್ಲ, ಪ್ರತಿಭಟನಾಕಾರರಿಗೆ ಏರ್ ಚೀಫ್ ಮಾರ್ಷಲ್ ಎಚ್ಚರಿಕೆ!

ನಾನು ಬಿಹಾರ (Bihar) ಮೂಲದವನು, 15-16 ಜನರು ಸಶಸ್ತ್ರ ಪಡೆಗಳಲ್ಲಿ ಇರುವ ಕುಟುಂಬದಿಂದ ಬಂದವನು ಎಂದು ಕನ್ಹಯ್ಯಾ ಕುಮಾರ್ ಹೇಳಿದ್ದಾರೆ. ಮಿಲಿಟರಿ ಹೋರಾಟದ ವೇಳೆ ನಮ್ಮ ಸಹೋದರರು ಮತ್ತು ಸಂಬಂಧಿಕರು ಹುತಾತ್ಮರೆನಿಸಿಕೊಂಡರು. ದೇಶದಲ್ಲಿ ನಿಯಮಿತವಾಗಿ ಸೇನಾ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವಾಗ, ಆ ಪ್ರಕ್ರಿಯೆಯನ್ನು ಕೈಬಿಡಲು ಕಾರಣವೇನು?ಈ ಬಗ್ಗೆ ಸರ್ಕಾರ ಉತ್ತರಿಸಬೇಕು. ಯುವಕರಿಗೆ ಉದ್ಯೋಗ ಸಿಗಬೇಕು ಎಂದು ಸರ್ಕಾರ ಹೇಳುತ್ತಿದೆ. ಪ್ರಧಾನಮಂತ್ರಿ ಕಚೇತಿ ಇತ್ತೀಚೆಗೆ 1.5 ಲಕ್ಷ ಉದ್ಯೋಗಗಳನ್ನು ನೀಡುವುದಾಗಿ ಟ್ವೀಟ್ ಮಾಡಿದೆ. ನೋಟು ಅಮಾನ್ಯೀಕರಣವಾದಾಗ ಭಯೋತ್ಪಾದನೆ, ನಕ್ಸಲಿಸಂ ಕೊನೆಗೊಳ್ಳುತ್ತದೆ ಎಂದು ಹೇಳಲಾಗಿತ್ತು. ಹೀಗಿದ್ದರೂ ನಕ್ಸಲ್ ಘಟನೆಗಳು ಮತ್ತು ಭಯೋತ್ಪಾದಕ ಘಟನೆಗಳು ನಡೆಯುತ್ತಿವೆ. ನೋಟು ಅಮಾನ್ಯೀಕರಣದ ನಂತರ ಭಯೋತ್ಪಾದನೆ ಕೊನೆಗೊಳ್ಳುತ್ತಿತ್ತು ಎಂದಾದರೆ, ಪುಲ್ವಾಮಾ ಘಟನೆ ಹೇಗೆ ಸಂಭವಿಸಿತು? ಎಂದು ಪ್ರಶ್ನೆ ಮಾಡಿದ್ದಾರೆ.

ಗೃಹ ಸಚಿವಾಲಯದ ಬೆನ್ನಲ್ಲೇ ಅಗ್ನಿಪಥಕ್ಕೆ ಶೇ. 10ರಷ್ಟು ಮೀಸಲಾತಿ ನೀಡಿದ ರಕ್ಷಣಾ ಸಚಿವ!

ಅಗ್ನಿಪಥ್ ವಿಚಾರವಾಗಿ ಕನ್ಹಯ್ಯ ಕುಮಾರ್ ಕೇಂದ್ರ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರತಿಪಕ್ಷಗಳು ಹೇಳಿದನ್ನು ಜನರು ಕೇಳಿದ್ದರೆ, ಇಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಇರುತ್ತಲೇ ಇರಲಿಲ್ಲ. ಹಿಂಸಾಚಾರದ ಘಟನೆಗಳ ಕುರಿತು ಮಾತನಾಡಿದ ಕನ್ಹಯ್ಯ ಕುಮಾರ್,  ತಮ್ಮ ಪೋಷಕರು ಕೋವಿಡ್ ಸಮಯದಲ್ಲಿ ಸಾವಿರಾರು ಕಿಲೋಮೀಟರ್ ನಡೆದಾಗ  ಈ ಯುವಕರು ಹಿಂಸಾಚಾರ ಮಾಡಿರಲಿಲ್ಲ. ಇದೇ ಯುವಕರು ಕೋವಿಡ್ ಸಮಯದಲ್ಲಿ ತನ್ನ ಕುಟುಂಬಕ್ಕೆ ಆಮ್ಲಜನಕ ಸಿಗದಿದ್ದಾಗ ಹಿಂಸೆ ಮಾಡಲಿಲ್ಲ. ಎರಡು ಕೋಟಿ ಕೊಡದಿದ್ದರೂ ಹಿಂಸೆ ಮಾಡಲಿಲ್ಲ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ