ಒಂದೇ ದಿನ 13,216 ಕೋವಿಡ್ ಕೇಸ್ ಪತ್ತೆ, ಓಮಿಕ್ರಾನ್ ಉಪತಳಿ ಸಂಖ್ಯೆ ಏರಿಕೆ!

By Suvarna NewsFirst Published Jun 18, 2022, 4:54 PM IST
Highlights
  • ದೇಶದಲ್ಲಿ ಗಣನೀಯ ಏರಿಕೆ ಕಂಡೆ ಕೋವಿಡ್ 
  • BA.2, BA.2.38 ವೈರಸ್ ಪ್ರಕರಣ ಸಂಖ್ಯೆ ಹೆಚ್ಚಳ
  • ಸಾಲು ಸಾಲು ರಾಜಕೀಯ ರ್ಯಾಲಿ ರಾಜ್ಯಕ್ಕೆ ಕಾದಿದೆಯಾ ಆತಂಕ?

ನವದೆಹಲಿ(ಜೂ.18): ದೇಶದಲ್ಲಿ ಕೊರೋನಾ ಪ್ರಕರಣ ಏರಿಕೆಯಿಂದ ಇದೀಗ ನಾಲ್ಕನೇ ಅಲೆ ಭೀತಿ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಯಲ್ಲಿ ದೇಶದ ಕೊರೋನಾ ಪ್ರಕರಣ 13,216ಕ್ಕೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಜೆನೋಮ್ ಸೀಕ್ರೆನ್ಸ್ ಕೇಂದ್ರ(INSACOG) ಬಿಡುಗಡೆ ಮಾಡಿದ ವರದಿ ಮತ್ತೂ ಆತಂಕ ತಂದಿದೆ. ಕಾರಣ ಈ ವರದಿಯಲ್ಲಿ ದೇಶದಲ್ಲಿ ಒಮಿಕ್ರಾನ್ ಉಪತಳಿಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದಿದೆ.

INSACOG ವರದಿ ಪ್ರಕಾರ ಮುಂಬೈ, ತಿರುವನಂತಪುರಂ, ಪುದುಚೇರಿ, ಮಿಜೋರಾಂ,ದೆಹಲಿ, ರಾಜಧಾನಿ ವಲಯಗಳಾದ ಗುರುಗ್ರಾಂ ಹಾಗೂ ಫರಿದಾಬಾದ್‌ನಲ್ಲಿ BA.2 ಹಾಗೂ  BA.2.38,  BA.2 ಹಾಗೂ BA.2.38 ಪ್ರಕರಣ ಹೆಚ್ಚಾಗುತ್ತಿದೆ. ಅದರಲ್ಲೂ ಕೇರಳದ ಒಟ್ಟಾರೆ ಪ್ರಕರಣಗಳಲ್ಲಿ ಓಮಿಕ್ರಾನ್ ಉಪತಳಿ ಕೂಡ ಹೆಚ್ಚಾಗಿದೆ.

ಕೋವ್ಯಾಕ್ಸಿನ್‌ ಬೂಸ್ಟರ್‌ ಡೋಸ್ ಪಡೆದವರಿಗೆ ನೆಮ್ಮದಿಯ ಸುದ್ದಿ, ಅಧ್ಯಯನದಲ್ಲಿ ಬಯಲಾಯ್ತು ಅಚ್ಚರಿಯ ವಿಚಾರ!

ಹೆಚ್ಚು ಪ್ರಕರಣಗಲ್ಲಿ ಮೈಲ್ಡ್ ಸಿಂಪ್ಟಮ್ಸ್ ಕಾಣಿಸಿಕೊಂಡಿದೆ. ಆಸ್ಪತ್ರೆ ದಾಖಲಾಗುವ ಪರಿಸ್ಥಿತಿ ಎದರಾಗಿಲ್ಲ. ಹೀಗಾಗಿ ಸಮಾಧಾನಕರ ವಿಚಾರ. ಆದರೆ ಪ್ರತಿ ದಿನ ಕೋವಿಡ್ ಪ್ರಕರಣಗಳ ಏರಿಕೆ ಪೋಷಕರ ಆತಂಕ ಹೆಚ್ಚಿಸಿದೆ. ಕಾರಣ ಶಾಲೆಗಳಲ್ಲಿ ಕೋವಿಡ್ ಪ್ರಕರಣ ಪತ್ತೆಯಾದರೆ ತಾತ್ಕಾಲಿಕವಾಗಿ ತರಗತಿಗಳಿಗೆ ಸಮಸ್ಯೆಯಾಗಲಿದೆ.

113 ದಿನಗಳ ಬಳಿಕ ದೇಶದಲ್ಲಿ 13,216 ಕೋವಿಡ್ ಕೇಸ್ ಪತ್ತೆಯಾಗಿದೆ. ವಾರದ ಪಾಸಿಟಿವಿಟಿ ದರ ಶೇಕಡಾ 2.47ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 23 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಸಕ್ರೀಯ ಪ್ರಕರಣ ಸಂಖ್ಯೆ ಶೇಕಡಾ 0.16ಕ್ಕೆ ಏರಿಕೆಯಾಗಿದೆ.

ಐದೇ ದಿನದಲ್ಲಿ 3428 ಕೋವಿಡ್‌ ಪ್ರಕರಣ; 21 ಸಾವು 
ಕಳೆದ ಐದು ದಿನದಲ್ಲಿ 3,428 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, 21 ಜನರು ಸೋಂಕಿನಿಂದ ಅಸುನೀಗಿದ್ದಾರೆ. ಮೇಲ್ನೋಟಕ್ಕೆ ಬಳ್ಳಾರಿ-ವಿಜಯನಗರ ಜಿಲ್ಲೆಯಲ್ಲಿ ಕೋವಿಡ್‌ ದಾಳಿಯ ತೀವ್ರತೆಯಿಲ್ಲ ಎಂದು ಕಂಡು ಬಂದರೂ ಸದ್ದಿಲ್ಲದೆ ಸೋಂಕಿತರನ್ನು ಸಾವಿನ ಮನೆಗೆ ದೂಡುತ್ತಿದೆ.

ಕೋವಿಡ್‌ ಪ್ರಕರಣಗಳು ಸಹ ಏರಿಕೆಯತ್ತ ಮುಖ ಮಾಡಿದ್ದು ನಿರ್ಲಕ್ಷ್ಯ ವಹಿಸಿದವರು ಸಾವಿನ ಮನೆಗೆ ಖಚಿತ ಎಂಬ ಸಂದೇಶ ಐದು ದಿನದಲ್ಲಾದ ಸಾವಿನ ಪ್ರಕರಣ ಬೆಳಕು ಚೆಲ್ಲುತ್ತದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಕೋವಿಡ್‌ ತಜ್ಞರು ಹೇಳುವಂತೆ ಕೋವಿಡ್‌ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅಪಾಯ ಇದ್ದೇ ಇದೆ. ಇನ್ನು ಕೋವಿಡ್‌ ಲಸಿಕೆ ಪಡೆಯದೆ ನಿರ್ಲಕ್ಷ್ಯ ವಹಿಸಿದವರು ಅಷ್ಟುಸುಲಭವಾಗಿ ಸೋಂಕಿನ ದಾಳಿಯಿಂದ ಪಾರಾಗಲಾರರು.

ಕರ್ನಾಟಕ ಸೇರಿ 5 ರಾಜ್ಯದಲ್ಲಿ ಕೋವಿಡ್ ಸ್ಫೋಟ, ಒಂದೇ ದಿನ 8,822 ಕೇಸ್ !

ಆರೋಗ್ಯ ಇಲಾಖೆಯ ಅಧಿಕಾರಿಗಳೇ ಹೇಳುವಂತೆ ಕೋವಿಡ್‌ ಮೂರನೇ ಅಲೆಯಲ್ಲಿ ಸಾವು ಕಂಡವರ ಪೈಕಿ ಶೇ. 90ರಷ್ಟುಜನರು ಲಸಿಕೆ ಪಡೆಯದವರು. ಕಳೆದ ಐದು ದಿನದಲ್ಲಾಗಿರುವ 21 ಸಾವುಗಳಲ್ಲಿ 16 ಜನರು ಕೋವಿಡ್‌ ಲಸಿಕೆ ಪಡೆಯದವರಾಗಿದ್ದಾರೆ ಎಂಬುದು ಗಮನಾರ್ಹ.

ಬೆಂಗಳೂರು ನಗರದಲ್ಲಿ ಕೊರೋನಾ ಸೋಂಕಿನಿಂದ ಮಂಗಳವಾರ 19 ಜನರು ಮೃತಪಟ್ಟಿದ್ದು, 209 ದಿನಗಳ ಗರಿಷ್ಠ ಪ್ರಕರಣ ಇದಾಗಿದೆ. ಈ ಮೂಲಕ ಸೋಂಕಿಗೆ ಬಲಿಯಾದವರ ಸಂಖ್ಯೆ 16,526ಕ್ಕೆ ಏರಿಕೆಯಾಗಿದೆ.

ಈ ಹಿಂದೆ ಜೂ.23ರಂದು 24 ಸೋಂಕಿತರು ಮತ್ತು ಜು.1ರಂದು 18 ಮಂದಿ ಮೃತಪಟ್ಟಿದ್ದು, ಈವರೆಗಿನ ಅತ್ಯಧಿಕ ಸಂಖ್ಯೆಯಾಗಿತ್ತು. ಮಂಗಳವಾರ 19,105 ಜನರಲ್ಲಿ ಕೊರೋನಾ ದೃಢಪಟ್ಟಿದೆ. ಹೊಸ ಪ್ರಕರಣದೊಂದಿಗೆ ನಗರದಲ್ಲಿ ಈವರೆಗಿನ ಸೋಂಕಿತರ ಸಂಖ್ಯೆ 16.26 ಲಕ್ಷಕ್ಕೆ ಏರಿಕೆಯಾಗಿದೆ. 33,011 ಮಂದಿ ಸೋಂಕಿತರು ಬಿಡುಗಡೆಯಾಗಿದ್ದು ಇದುವರೆಗೆ 13.97 ಲಕ್ಷ ಜನರು ಗುಣಮುಖರಾಗಿದ್ದಾರೆ. ಹೊಸ ಪ್ರಕರಣಗಳ ಪತ್ತೆಯಿಂದ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,12,460ಕ್ಕೆ ಹೆಚ್ಚಳವಾಗಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.

click me!