ಮರವಂತೆ ಬೀಚ್‌ನ್ನು ಕೊಂಡಾಡಿದ ಮಾಜಿ ರಾಜತಾಂತ್ರಿಕ ಅಧಿಕಾರಿ

By Anusha Kb  |  First Published May 18, 2022, 5:51 PM IST
  • ವಿಶ್ವದ ಅತ್ಯಂತ ಸುಂದರವಾದ ಸೈಕ್ಲಿಂಗ್ ಮಾರ್ಗ
  • ರಾಜ್ಯದ ಮರವಂತೆ ಬೀಚ್‌ನ್ನು ಕೊಂಡಾಡಿದ ಎರಿಕ್ ಸೋಲ್ಹೀಮ್
  • ಉಡುಪಿ ಜಿಲ್ಲೆಯ ಬೈಂದೂರು ಸಮೀಪದ ಮರವಂತೆ ಬೀಚ್

ಹೊಂಡ ಗುಂಡಿಯಿಂದ ತುಂಬಿದ ರಸ್ತೆಗಳು ಮತ್ತು ಅಸಮರ್ಪಕ ಸೈಕಲ್ ಟ್ರ್ಯಾಕ್‌ಗಳಿಂದಾಗಿ ಭಾರತದಲ್ಲಿ ಸೈಕ್ಲಿಂಗ್ ಅಷ್ಟೊಂದು ಫೇಮಸ್ ಅಲ್ಲ. ಆದಾಗ್ಯೂ ದೇಶದಲ್ಲಿ ಪ್ರಪಂಚದಲ್ಲೇ ಅತ್ಯಂತ ರಮಣೀಯವಾದ ಸೈಕ್ಲಿಂಗ್ ಮಾರ್ಗಗಳಿವೆ ಅಂತಿದ್ದಾರೆ ಓರ್ವ ವಿದೇಶಿ ಮಾಜಿ ರಾಜತಾಂತ್ರಿಕ ಅಧಿಕಾರಿ. ಹೌದು ನಾರ್ವೆಯ ಮಾಜಿ ರಾಜ ತಾಂತ್ರಿಕ ಅಧಿಕಾರಿಯೊಬ್ಬರು ಭಾರತದ ಅದರಲ್ಲೂ ನಮ್ಮ ಕರ್ನಾಟಕದ ಉಡುಪಿ ಜಿಲ್ಲೆಯ ಮರವಂತೆಯಲ್ಲಿರುವ ಬೀಚ್‌  ಫೋಟೋವನ್ನು ಶೇರ್ ಮಾಡಿ ವಿಶ್ವದ ಅತ್ಯಂತ ಸುಂದರವಾದ ಸೈಕ್ಲಿಂಗ್ ಮಾರ್ಗವಿದು ಎಂದು ಬರೆದು ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ ಇದಕ್ಕೆ ಭಾರತೀಯರು ಫುಲ್ ಖುಷಿಯಾಗಿದ್ದಾರೆ. 

ನಾರ್ವೇ ಮಾಜಿ ರಾಜತಾಂತ್ರಿಕ ಅಧಿಕಾರಿ ಎರಿಕ್ ಸೋಲ್ಹೀಮ್ ಅವರು ಮಂಗಳವಾರ ಬೀಚ್‌ಸೈಡ್ ರಸ್ತೆಯ ವೈಮಾನಿಕ ನೋಟವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು. ಈ ಈ ಪೋಸ್ಟ್‌ನ್ನು ಕೆಲವೇ ಗಂಟೆಗಳಲ್ಲಿ 47,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಆದರೆ ಸೋಲ್ಹೈಮ್ ಅವರು ಫೋಟೋದಲ್ಲಿ ನಿರ್ದಿಷ್ಟ ರಸ್ತೆ ಅಥವಾ ಮಾರ್ಗ ಇದು ಎಂಬುದನ್ನು ಹೆಸರಿಸಲಿಲ್ಲ ಆದರೆ ಇದು ಯಾವ ಸ್ಥಳ ಎಂಬುದನ್ನು ಜನ ಆಗಲೇ ಊಹಿಸಿ ಖುಷಿಯಿಂದ ಕಾಮೆಂಟ್ ಮಾಡಲು ಶುರು ಮಾಡಿದರು. ಇದು ರಾಷ್ಟ್ರೀಯ ಹೆದ್ದಾರಿ 66ರ ಸಮೀಪದಲ್ಲಿರುವ ಕರ್ನಾಟಕದ ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣದ ಸಮೀಪವಿರುವ ಮರವಂತೆ ಬೀಚ್ ಎಂದು ಹಲವರು ಸರಿಯಾಗಿ ಊಹಿಸಿದರು. 

World's Most Beautiful Cycling Route 🚴‍♀️ ?
Udupi, Karnataka, India 🇮🇳. pic.twitter.com/BNU5fVdMlA

— Erik Solheim (@ErikSolheim)

Tap to resize

Latest Videos

 

ಆದಾಗ್ಯೂ ಕೆಲವು ಬಳಕೆದಾರರು ಮಾಜಿ ರಾಜತಾಂತ್ರಿಕ ಅಧಿಕಾರಿಯ ಈ ಟ್ವೀಟ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಖಂಡಿತವಾಗಿಯೂ  ಇದು ಸೈಕ್ಲಿಂಗ್ ಸ್ನೇಹಿ ರಸ್ತೆ ಅಲ್ಲ. ನಾನು ಅನೇಕ ಬಾರಿ ಅಲ್ಲಿಗೆ ಹೋಗಿದ್ದೆ. ಕಾರುಗಳು ಮತ್ತು ಟ್ರಕ್‌ಗಳು ಗಂಟೆಗೆ 100 ಕಿಮೀ ವೇಗದಲ್ಲಿ ಇಲ್ಲಿ ಹೋಗುತ್ತವೆ. ಅಲ್ಲದೆ, ಸೈಕ್ಲಿಂಗ್‌ಗೆ ಮೀಸಲಾದ ಲೈನ್ ಇಲ್ಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ಫೋಟೋ ನೋಡಿ ಬೇರೆ ಸ್ಥಳಗಳ ಹೆಸರು ಹೇಳಲು ಶುರು ಮಾಡಿದರು.

ರಾಜ್ಯವನ್ನು ಪ್ರವಾಸಿಗರ ಸ್ವರ್ಗ ಮಾಡಲು 500 ಕೋಟಿ ರೂ. ನಿಗದಿ!

ಆದರೆ ಇದು ರಾಷ್ಟ್ರೀಯ ಹೆದ್ದಾರಿ ಇಲ್ಲಿ ಸೈಕ್ಲಿಂಗ್ ಮಾಡಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದವರಿಗೆ ಪ್ರತಿಕ್ರಿಯಿಸಿದ ಮತ್ತೊಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ಇದು ಬೈಂದೂರಿನಲ್ಲಿರುವ ಮರವಂತೆ ಬೀಚ್ ಇದು ಮಲ್ಪೆ ಮಟ್ಟು ಕಾಪು ರಸ್ತೆಯ ಪಕ್ಕದ ಭಾಗವಾಗಿದ್ದು, ನಿಜವಾಗಿಯೂ ಸೈಕ್ಲಿಂಗ್‌ಗೆ ಹೇಳಿ ಮಾಡಿಸಿದ ಮಾರ್ಗ ಎಂದು ಕಾಮೆಂಟ್ ಮಾಡಿದ್ದಾರೆ. 

ಮರವಂತೆ ಹೊರ ಬಂದರಿನಲ್ಲಿ ಕಡಲಲೆಗಳ ಆರ್ಭಟ: ಇಲ್ಲಿವೆ ಫೋಟೋಸ್

ಸೋಲ್ಹೈಮ್ ಹಂಚಿಕೊಂಡ ಚಿತ್ರವನ್ನು ಮೂಲತಃ ಛಾಯಾಗ್ರಾಹಕ ಧೇನೇಶ್ ಅಣ್ಣಾಮಲೈ ಅವರು ತಮ್ಮ Instagram ಖಾತೆ @aerial_holic ನಲ್ಲಿ ಪೋಸ್ಟ್ ಮಾಡಿದ್ದರು. 
ಮರವಂತೆ ಬೀಚ್ ಎಷ್ಟು ವಿಶಿಷ್ಟವಾಗಿದೆ ಎಂದರೆ ಅದು ಪಶ್ಚಿಮ ಭಾಗದಲ್ಲಿ ಅರಬ್ಬಿ ಸಮುದ್ರ, ಆದರೆ ಪೂರ್ವ ಭಾಗದಲ್ಲಿ ಶಾಂತ ಮತ್ತು ಅದ್ಭುತವಾದ ಸೌಪರ್ಣಿಕಾ ನದಿ ಈ ಎರಡು ಜಲಮೂಲಗಳಿಂದ ಆವೃತವಾಗಿದೆ ಎಂದು ಈ ಫೋಟೋವನ್ನು ಮೂಲತಃ ಹಂಚಿಕೊಂಡ ಧೇನೇಶ್ ಅಣ್ಣಾಮಲೈ ಹೇಳಿದ್ದಾರೆ. 

ಕರಾವಳಿ, ಗಿರಿಧಾಮ, ಅರಣ್ಯ ಪ್ರದೇಶ ಸಮೀಪದ ಪ್ರವಾಸಿ ತಾಣಗಳನ್ನು ಬಳಸಿಕೊಂಡು ರಾಜ್ಯವನ್ನು ಪ್ರವಾಸಿಗರ ಸ್ವರ್ಗ ಮಾಡುವ ಗುರಿಯಿಟ್ಟುಕೊಂಡು ಹಲವು ಮಹತ್ವದ ಯೋಜನೆಗಳನ್ನು 2021ರಲ್ಲಿ ಆಗಿನ ಸಿಎಂ ಬಿ.ಎಸ್‌. ಯಡಿಯೂರಪ್ಪ ಘೋಷಣೆ ಮಾಡಿದರು. ಪ್ರವಾಸಿ ತಾಣಗಳ ಮೂಲ ಸೌಕರ್ಯ ಅಭಿವೃದ್ಧಿ ಜತೆಗೆ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಲು 500 ಕೋಟಿ ರೂ.ಗಳನ್ನು ಪ್ರವಾಸೋದ್ಯಮ ಇಲಾಖೆಗೆ ರಾಜ್ಯ ಸರ್ಕಾರ ನೀಡುವುದಾಗಿ ಘೋಷಿಸಿದ್ದರು.

click me!