
ಲೇಖಕರು: ಸಯ್ಯದ್ ತಲೀಫ್ ಹೈದರ್
ನವದೆಹಲಿ: ಮುಸ್ಲಿಂ ಧರ್ಮಗ್ರಂಥ ಕುರಾನ್ ಹಾಗೂ ಹದೀಸ್ ನಂತರ ಕಳೆದೊಂದು ಶತಮಾನದಲ್ಲಿ ಭಾರತೀಯ ಮುಸ್ಲಿಮರಲ್ಲಿ ಅತೀಹೆಚ್ಚು ಜನಪ್ರಿಯವಾಗಿರುವ ಗ್ರಂಥ ಯಾವುದು ಗೊತ್ತಾ? ಅದೇ ಬಹಿಷ್ಟಿ ಜೆವಾರ್ (Behishti Zewar) ಹೌದು ಇಂದಿಗೂ ಕೂಡ ಭಾರತೀಯ ಮುಸಲ್ಮಾನರ ಮನೆಯ ಸೆಲ್ಪ್‌ಗಳಲ್ಲಿ ಕಪಾಟುಗಳ ಮೇಲೆ ಈ ಈ ಧರ್ಮಗ್ರಂಥವನ್ನು ಕಾಣಬಹುದಾಗಿದೆ. ಈ ಧಾರ್ಮಿಕ ಗ್ರಂಥವೂ ಒಂದು ಕಾಲದಲ್ಲಿ ಮದುವೆಯ ಸಮಯದಲ್ಲಿ ನೀಡುವ ವರದಕ್ಷಿಣೆಯ ಭಾಗವೂ ಆಗಿತ್ತು. ತಮ್ಮ ಮಗಳ ಮದುವೆಗೆ ಹೆಚ್ಚೇನು ಕೊಡಲು ಸಾಧ್ಯವಾಗದ ಮುಸ್ಲಿಂ ಹೆಣ್ಣು ಮಕ್ಕಳ ಪೋಷಕರು ಈ ಪುಸ್ತಕವನ್ನು ಮಾತ್ರ ಕೊಡಲು ಮರೆಯುವುತ್ತಿರಲಿಲ್ಲ. ಇದೇ ಈಗ ಭಾರತದಲ್ಲಿ ಕುರಾನ್ ನಂತರ ಅತೀ ಹೆಚ್ಚು ಮಾರಾಟವಾಗುವ ಪುಸ್ತಕ ಎನಿಸಿದೆ.
ಈ ಪುಸ್ತಕವನ್ನು ಭಾರತೀಯ ಮುಸ್ಲಿಂ ವಿದ್ವಾಂಸ ಅಶ್ರಫ್ ಅಲಿ ಥಾನ್ವಿ (Ashraf Ali Thanvi) ಅವರು ಬರೆದಿದ್ದು, ಇದು ಮಹಿಳೆಯರು ಹಾಗೂ ಪುರುಷರ ನಡುವೆ ಬರುವ ಸಮಸ್ಯೆ ಮತ್ತುಅವರ ಜೀವನವು ಹೆಣೆದುಕೊಂಡಿರುವ ರೀತಿಯ ಬಗ್ಗೆ ತಿಳಿಸುತ್ತದೆ. ಕಳೆದ 50 ವರ್ಷಗಳಲ್ಲಿ, ಈ ಪುಸ್ತಕವು ಗಮನಾರ್ಹವಾದ ಟೀಕೆಗಳಿಗೆ ಗುರಿಯಾಗಿದೆ. ಈ ಪುಸ್ತಕಕ್ಕೆ ಕೆಲವು ಭಾರತೀಯ ಮುಸ್ಲಿಮರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಅದು ಒಳಗೊಂಡಿರುವ ಕೆಲ ವಿಚಾರಗಳು ವಿವಾದಾಸ್ಪದ ಎಂದು ಅವರು ಹೇಳುತ್ತಿದ್ದು,ಇದುವೇ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲೂ ಮತ್ತೊಂದು ಸಾಮಾನ್ಯ ಟೀಕೆ ಎಂದರೆ ಈ ಪುಸ್ತಕವನ್ನು ಮುಸ್ಲಿಂ ಸಮುದಾಯದ ದೇವಬಂದಿ ಪಂಥಕ್ಕಾಗಿ ಮಾತ್ರ ಬರೆಯಲಾಗಿದೆ. ಆದರೆ ಆಶ್ಚರ್ಯಕರ ವಿಚಾರವೆಂದರೆ ಇದು ಇಡೀ ಮುಸ್ಲಿಂ ಸಮುದಾಯದಲ್ಲಿ ವ್ಯಾಪಕ ಜನಪ್ರಿಯತೆಯನ್ನು ಗಳಿಸಿದೆ. ಆದರೂ ಬರೇಲ್ವಿಸ್, ಅಹ್ಲ್ ಅಲ್-ಹದಿತ್, ಶಿಯಾ ಮತ್ತು ಸಲಫಿಗಳು ಸಮುದಾಯದ ಕೆಲವರು ಇದಕ್ಕೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.
ಮುಸ್ಲಿಮರ ಆರ್ಥಿಕ, ಸಾಮಾಜಿಕ, ರಾಷ್ಟ್ರೀಯ, ಧಾರ್ಮಿಕ, ಸಾಂಸ್ಕೃತಿಕ, ವೈಯಕ್ತಿಕ, ಚಿಕಿತ್ಸಕ, ವೈದ್ಯಕೀಯ, ಲೈಂಗಿಕ, ಧಾರ್ಮಿಕ ಮತ್ತು ಭಾಷಾ ಸಮಸ್ಯೆಗಳಿಂದ ಶುರುವಾಗಿ ಪ್ರತಿಯೊಂದರ ಬಗ್ಗೆಯೂ ಒಂದು ತಿಳಿಸುವ ಈ ಕೃತಿಯಾಗಿದ್ದು, ಈ ರೀತಿಯ ಕೃತಿ ಭಾರತೀಯ ಮುಸ್ಲಿಂ ಸಮುದಾಯಕ್ಕೆ ಇದೇ ಮೊದಲು. ಇಲ್ಲಿಯವರೆಗೆ, ಭಾರತದಲ್ಲಿ ಯಾವುದೇ ಪುಸ್ತಕವು ಇದಕ್ಕೆ ಸವಾಲು ಹಾಕಿಲ್ಲ. ಆದರೆ ಇವು ದೇಶದ ಮುಸ್ಲಿಂ ಸಮುದಾಯದಲ್ಲಿ ಅಸ್ತಿತ್ವದಲ್ಲಿದ್ದರೂ ಜನಪ್ರಿಯವಾಗಿಲ್ಲ. ಕೆಲವು ಲೈಂಗಿಕ ಸಮಸ್ಯೆಗಳ ಬಗ್ಗೆ ಇದರಲ್ಲಿ ಹೇಳಿರುವ ವಿಚಾರ ಸತ್ಯವಾಗಿದೆ. ಅಲ್ಲಿ ಅಲ್ಲಿ ಪುರುಷರ ಮತ್ತು ಮಹಿಳೆಯರ ಅನುಭವಗಳ ಸ್ಪಷ್ಟ ವಿವರಣೆಗಳನ್ನು ಪ್ರಸ್ತುತಪಡಿಸಲಾಗಿದೆ.
ಧಾರ್ಮಿಕ ವಿದ್ವಾಂಸರನ್ನು ಒಳಗೊಂಡಂತೆ ಒಬ್ಬ ವ್ಯಕ್ತಿಯು ಹಲವು ರೋಲ್‌ಗಳ ಬಗ್ಗೆ ಊಹಿಸಿ ಬರೆದಾಗ ಅದರಲ್ಲಿ ದೋಷಗಳ ಸಾಧ್ಯತೆ ಹೆಚ್ಚಾಗುತ್ತದೆ. ಈ ಪುಸ್ತಕದಲ್ಲಿರುವ ದೋಷಗಳನ್ನು ಈ ಪುಸ್ತಕದ ಕಾಲದಲ್ಲಿದ್ದ ಸಮಾಜವೂ ಗುರುತಿಸಬೇಕು. ಆ ಸಂದರ್ಭದಲ್ಲಿ ಭಾರತ ಅಭಿವೃದ್ಧಿಶೀಲ ದೇಶವಾಗಿತ್ತು, ಶಿಕ್ಷಣ ಪಡೆದ ಮುಸ್ಲಿಂ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇತ್ತು. ಇಂದಿನ ಸಂದರ್ಭಕ್ಕೆ ಹೋಲಿಸಿದರೆ ಈ ಪುಸ್ತಕ ನಿಜವಾಗಿಯೂ ದೋಷಗಳನ್ನು ಒಳಗೊಂಡಿದೆ. ಝಕಾತ್ (ಕಡ್ಡಾಯ ದಾಣ) ಈ ಪುಸ್ತಕದಲ್ಲಿ ಮೌಲಾನಾ ಅವರ ಕೆಲವು ಹೇಳಿಕೆಗಳು ತಪ್ಪಾಗಿದೆ. ಕೆಲವು ಇಸ್ಲಾಮಿಗೆ ಅಪ್ರಸ್ತುತವಾಗಿವೆ. ಹದೀಸ್ ಹೊರತಾಗಿಯೂ ಮಹಿಳೆಯರು ತಮ್ಮ ತಲೆಯನ್ನು ಬೋಳಿಸಿಕೊಳ್ಳುವುದನ್ನು ಅಥವಾ ಕೂದಲನ್ನು ಚಿಕ್ಕದಾಗಿ ಕತ್ತರಿಸುವುದನ್ನು ನಿಷೇದಿಸುವುದನ್ನು ಉದಾಹರಣೆಗಳಲ್ಲಿ ಒಳಗೊಂಡಿರುತ್ತದೆ.
'ಇಸ್ಲಾಂನಲ್ಲಿ ಜನ್ಮ ಜನ್ಮದ ಅನುಬಂಧವಿಲ್ಲ, ದಾಂಪತ್ಯದಲ್ಲಿ ವಿರಸ ಬಂದ್ರೆ ತಲಾಕ್ ಅಷ್ಟೇ'..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ