ಭಾರತವು ಉಕ್ರೇನ್ ಯುದ್ಧದಲ್ಲಿ ಅಮೆರಿಕ ಪರವಾಗಿರದಿದ್ದರೂ ಹಾಗೂ ರಷ್ಯಾದಿಂದ ತೈಲ ಖರೀದಿಯ ಸಮಯದಲ್ಲಿ ಬೈಡೆನ್ - ಮೋದಿ ಹಸ್ತಲಾಘವ ಹಾಗೂ ಅಪ್ಪುಗೆಯಾಗಿರುವುದು ಪ್ರಾಮುಖ್ಯತೆ ಪಡೆದುಕೊಂಡಿದೆ.
ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ - 20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದು, ಈ ವೇಳೆ ಜೋ ಬೈಡೆನ್ ಅವರೇ ಪ್ರಧಾನಿ ಮೋದಿ ಅವರ ಬಳಿ ಹಸ್ತಲಾಘವ ಮಾಡಿರುವುದು ವಿಶೇಷ. ಇದು, ಭಾರತ - ಅಮೆರಿಕ ನಡುವಿನ ಸಂಬಂಧದ ಗಾಢತನವನ್ನು ಸೂಚಿಸುತ್ತದೆ. ಅಲ್ಲದೆ, ಜಿ - 20 ಶೃಂಗಸಭೆಯಲ್ಲಿ ಅಮೆರಿಕ ಅದ್ಯಕ್ಷರು - ಪ್ರಧಾನಿ ಮೋದಿ ಅಕ್ಕಪಕ್ಕ ಕುಳಿತುಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಮ್ಮ ಬಳಿ ಬರುತ್ತಿರುವುದನ್ನು ಮೊದಲು ಗಮನಿಸಿಲ್ಲ. ಆದರೆ, ನಂತರ ಕೆಲವೇ ಕ್ಷಣಗಳಲ್ಲಿ ಪುನ: ಹಿಂದಕ್ಕೆ ತಿರುಗಿ ಬೈಡೆನ್ ಜತೆ ಹಸ್ತಲಾಘವ ಮಾಡಿದ್ದಾರೆ ಹಾಗೂ ಇಬ್ಬರೂ ಪರಸ್ಪರ ಅಪ್ಪುಗೆಯನ್ನೂ ಮಾಡಿಕೊಂಡಿದ್ದಾರೆ.
ಇನ್ನು, ಅಮೆರಿಕ ಅಧ್ಯಕ್ಷರು ತಮ್ಮ ಸೀಟ್ ಬಳಿ ಕುಳಿತುಕೊಳ್ಳಲು ಹೋಗುತ್ತಿದ್ದಾಗ, ಪ್ರಧಾನಿ ಮೋದಿ ಮತ್ತೆ ಬೈಡೆನ್ ಅವರಿಗೆ ತಮಾಷೆಯಾಗಿ ಏನೋ ಹೇಳಿದ್ದಾರೆ. ಇದರಿಂದ ಇಬ್ಬರೂ ಕೆಲ ಕಾಲ ನಕ್ಕಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಸಹ ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಪ್ರಧಾನಿ ಮೋದಿ ಹಿಂದೆಯೇ ಅವರಿಬ್ಬರೂ ನಾಯಕರು ಕುಳಿತಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪ್ರಧಾನಿ ಮೋದಿ ಮಾತ್ರವಲ್ಲದೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹಾಗೂ ಇತರೆ ವಿಶ್ವ ನಾಯಕರ ಜತೆಯೂ ಮಾತುಕತೆ ನಡೆಸಿದ್ದಾರೆ.
ಇದನ್ನು ಓದಿ: G20 Summit : ಮೋದಿ ಇಂಡೋನೇಷ್ಯಾಕ್ಕೆ: ಇಂದು, ನಾಳೆ ಜಿ20 ಶೃಂಗ
| US President Joe Biden walks over to PM Narendra Modi before the start of in Bali, Indonesia.
(Source: DD) pic.twitter.com/2ULTveCaqh
ಭಾರತವು ಉಕ್ರೇನ್ ಯುದ್ಧದಲ್ಲಿ ಅಮೆರಿಕ ಪರವಾಗಿರದಿದ್ದರೂ ಹಾಗೂ ರಷ್ಯಾದಿಂದ ತೈಲ ಖರೀದಿಯ ಸಮಯದಲ್ಲಿ ಬೈಡೆನ್ - ಮೋದಿ ಹಸ್ತಲಾಘವ ಹಾಗೂ ಅಪ್ಪುಗೆಯಾಗಿರುವುದು ಪ್ರಾಮುಖ್ಯತೆ ಪಡೆದುಕೊಂಡಿದೆ.ಸಂಘರ್ಷಕ್ಕೆ ಪರಿಹಾರವಾಗಿ ಕದನ ವಿರಾಮ ಮತ್ತು ಮಾತುಕತೆಯೇ ಇದಕ್ಕೆ ಪರಿಹಾರ ಎಂದು ಸದಾ ಹೇಳುತ್ತಿದ್ದ ಭಾರತವು, ರಷ್ಯಾ-ಉಕ್ರೇನ್ ವಿಚಾರವಾಗಿ ಯುಎನ್‌ನಲ್ಲಿ ನಡೆದ ಮತದಾನದಿಂದ ದೂರವಿತ್ತು.
ಅಲ್ಲದೆ, ರಷ್ಯಾದಿಂದ ತೈಲ ಹಾಗೂ ಇತರೆ ವಸ್ತುಗಳನ್ನು ಖರೀದಿಸುವ ವಿಷಯದಲ್ಲಿ ಯಾವುದೇ ನೈತಿಕ ಸಂಘರ್ಷವಿಲ್ಲ ಎಂದು ಭಾರತ ವಾದ ಮಾಡುತ್ತಿದೆ. ಅಮೆರಿಕ ಹಾಗೂ ಇತರರು ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ರಷ್ಯಾವನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ಸಮಯದಲ್ಲಿ ಈ ರೀತಿ ಕಚ್ಚಾ ತೈಲ ರಫ್ತು ಮಾಡುತ್ತಿರುವುದು ನೈತಿಕ ಸಂಘರ್ಷವಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಡಿಸೆಂಬರ್ 1 ರಿಂದ ಭಾರತಕ್ಕೆ ಜಿ 20 ಅಧ್ಯಕ್ಷತೆ; ಮುಂದಿನ ವರ್ಷ ದೆಹಲಿಯಲ್ಲಿ ಶೃಂಗಸಭೆ: ಪ್ರಧಾನಿ ಮೋದಿ
ಉಕ್ರೇನ್ ವಿಚಾರವಾಗಿ ರಾಜತಾಂತ್ರಿಕತೆಯ ಹಾದಿಗೆ ಮರಳಲು ಜಗತ್ತು ಒಂದು ಮಾರ್ಗವನ್ನು ಕಂಡುಕೊಳ್ಳಲು ಪ್ರಧಾನಿ ಮೋದಿ ಎರಡನೇ ಮಹಾಯುದ್ಧದದ ಉದಾಹರಣೆಯನ್ನು ಜಿ - 20 ಶೃಂಗಸಭೆಯ ವೇಳೆ ನೀಡಿದ್ದಾರೆ. "ಕಳೆದ ಶತಮಾನದಲ್ಲಿ, ಎರಡನೇ ಮಹಾಯುದ್ಧವು ಜಗತ್ತಿನಲ್ಲಿ ವಿನಾಶವನ್ನುಂಟುಮಾಡಿತು. ಅದರ ನಂತರ, ಅಂದಿನ ನಾಯಕರು ಶಾಂತಿಯ ಹಾದಿಯನ್ನು ಹಿಡಿಯಲು ಗಂಭೀರ ಪ್ರಯತ್ನ ಮಾಡಿದರು. ಈಗ ಅದು ನಮ್ಮ ಸರದಿ," ಎಂದು ಮೋದಿ ಹೇಳಿದ್ದಾರೆ.
ಜಾಗತಿಕ ಜಿಡಿಪಿಯ ಶೇ. 85 ರಷ್ಟು ಮತ್ತು ಜಾಗತಿಕ ವ್ಯಾಪಾರದ ಶೇ. 75 ರಷ್ಟನ್ನು ಪ್ರತಿನಿಧಿಸುವ ಪ್ರಬಲ ಒಕ್ಕೂಟವಾದ G20 ಅಧ್ಯಕ್ಷ ಸ್ಥಾನವನ್ನು ಈ ವರ್ಷ ಡಿಸೆಂಬರ್‌ನಿಂದ ಭಾರತವು ವಹಿಸಿಕೊಳ್ಳಲಿದೆ ಮತ್ತು ಮುಂದಿನ ವರ್ಷ ಶೃಂಗಸಭೆಯನ್ನು ಆಯೋಜಿಸಲಿದೆ. ಬುದ್ಧ ಮತ್ತು ಗಾಂಧೀಜಿಯವರ ಪುಣ್ಯಭೂಮಿಯಲ್ಲಿ ಜಿ 20 ಸಭೆ ಮುಂದಿನ ವರ್ಷ ನಡೆಯುವಾಗ, ಜಗತ್ತಿಗೆ ಶಾಂತಿಯ ಬಲವಾದ ಸಂದೇಶವನ್ನು ಸಾರಲು ನಾವೆಲ್ಲರೂ ಒಪ್ಪುತ್ತೇವೆ ಎಂದು ನನಗೆ ವಿಶ್ವಾಸವಿದೆ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: 45 ಗಂಟೆ, 20 ಸಭೆ, 10 ವಿಶ್ವನಾಯಕರ ಭೇಟಿ; ಜಿ20ಯಲ್ಲಿ ಇದು ಪ್ರಧಾನಿ ಮೋದಿ ವೇಳಾಪಟ್ಟಿ!