ತಪ್ಪಾಗಿದೆ ಕ್ಷಮಿಸಿ, ಬಹಿರಂಗ ಕ್ಷಮೆ ಯಾಚಿಸಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ!

By Suvarna NewsFirst Published Nov 14, 2022, 7:03 PM IST
Highlights

ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ವಿಡಿಯೋ ಮೂಲಕ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತು ಟಿಎಂಸಿ ನಾಯಕನ ಹೇಳಿಕೆಯನ್ನು ಖಂಡಿಸಿ, ಈ ಕ್ಷಮಾಪಣೆ ಕೇಳಿದ್ದಾರೆ.

ಕೋಲ್ಕತಾ(ನ.14):  ರಾಷ್ಟ್ರಪತಿ ದ್ರೌಪದಿ ಮುರ್ಮರ ಸೌಂದರ್ಯದ ಕುರಿತು ಕೀಳು ಮಾತುಗಳನ್ನು ಆಡಿದ್ದ ತಮ್ಮ ಸರ್ಕಾರದಲ್ಲಿನ ಸಚಿವ ಅಖಿಲ್‌ ಗಿರಿ ಹೇಳಿಕೆ ಕುರಿತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆ ಯಾಚಿಸಿದ್ದಾರೆ. ಬಾಹ್ಯ ಸೌಂದರ್ಯ ನೋಡಿ ಯಾರನ್ನೂ ಅಳೆಯಲು ಸಾಧ್ಯವಿಲ್ಲ. ಆಂತರಿಕ ಸೌಂದರ್ಯ ಮುಖ್ಯ. ನನಗೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಬಗ್ಗೆ ಅಪಾರ ಗೌರವವಿದೆ. ಅವರ ಜೊತೆ ಹಲವು ಸ್ಮರಣೀಯ ನೆನಪುಗಳಿವೆ. ನನ್ನ ಪಕ್ಷದ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನಮ್ಮ ಪಕ್ಷದ ನಾಯಕರು ತಪ್ಪು ಮಾಡಿದ್ದಾರೆ. ಇದನ್ನು ಪಕ್ಷ ಸಮರ್ಥಿಸಿಕೊಳ್ಳುವುದಿಲ್ಲ. ಈ ಹೇಳೆಕೆಯನ್ನುಪಕ್ಷ ಖಂಡಿಸುತ್ತದೆ. ವಿವಾದಾತ್ಮಕ ಹೇಳಿಕೆ ನೀಡಿ ಬಳಿಕ ಜಾರಿಕೊಳ್ಳುವುದು ಆಗಬಾರದು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮಾತನಾಡುವಾಗ ಕೆಟ್ಟ ಪದಗಳನ್ನು ಬಳಸಬಾರದು. ಒಂದು ವೇಳೆ ಬಾಯಿತಪ್ಪಿನಿಂದ ಏನಾದರು ಹೇಳಿದರೆ ತಕ್ಷಣವೇ ಕ್ಷಮೆ ಯಾಚಿಸಿ ವಿವಾದಕ್ಕೆ ಅಂತ್ಯಹಾಡಬೇಕು ಎಂದು ಮಮತಾ ಬ್ಯಾನರ್ಜಿ ಪರೋಕ್ಷವಾಗಿ ಅಖಿಲ್ ಗಿರಿಗೆ ವಾರ್ನಿಂಗ್ ನೀಡಿದ್ದಾರೆ.  ಇತ್ತ ಸ್ವತಃ ಗಿರಿ, ಮುರ್ಮು ಅವರಿಗೆ ಪತ್ರ ಬರೆದು ಕ್ಷಮೆ ಕೇಳಲಿದ್ದಾರೆ ಎಂದು ಟಿಎಂಸಿ ಪ್ರಕಟಣೆಯಲ್ಲಿ ಹೇಳಿದೆ. ‘ನಾನು ಚೆನ್ನಾಗಿ ಕಾಣಲ್ಲ ಎಂದು ಬಿಜೆಪಿಗರು ಹೇಳುತ್ತಾರೆ. ನಾವು ಮುಖ ನೋಡಿ ಯಾರ ಬಗ್ಗೆಯೂ ನಿರ್ಧಾರ ಮಾಡಲ್ಲ. ಆದರೆ ಅವರಿಗೆ ರಾಷ್ಟ್ರಪತಿ ಹೇಗೆ ಕಾಣ್ತಾರೆ?’ ಎಂದು ಗಿರಿ, ಶುಕ್ರವಾರ ನಂದಿಗ್ರಾಮದಲ್ಲಿ ನಡೆದ ರಾರ‍ಯಲಿಯಲ್ಲಿ ಹೇಳಿದ್ದರು. ಈ ನಡುವೆ ಅಖಿಲ್‌ ವಿರುದ್ಧ ಬಂಗಾಳದ ಬಿಜೆಪಿ ದೂರು ನೀಡಿದೆ. ರಾಷ್ಟ್ರಪತಿ ಅವರನ್ನು ಅವಮಾನ ಮಾಡಿದ ಗಿರಿ ಅವರ ವಿರುದ್ಧ ದೂರು ನೀಡಲಾಗಿದೆ.

 

TMC ನಾಯಕರ ಜೊತೆ ಸುವೇಂದು ಅಧಿಕಾರಿ ಚರ್ಚೆ: ಬಿಜೆಪಿ ತೊರೆವ ಬಗ್ಗೆ ಗುಸುಗುಸು

ರಾಷ್ಟ್ರಪತಿ ಅವರಂತೆ ಬುಡಕಟ್ಟು ಸಮುದಾಯಕ್ಕೆ ಸೇರಿದ ಕೇಂದ್ರ ಬುಡಕಟ್ಟು ವ್ಯವಹಾರ ಸಚಿವ ಅರ್ಜುನ್‌ ಮುಂಡಾ ಅವರು ಕೂಡಾ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡಾ ಸಚಿವರ ಪರವಾಗಿ ಸಾರ್ವಜನಿಕ ಕ್ಷಮಾಪಣೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಟೀಕೆ ಬೆನ್ನಲ್ಲೇ ಕ್ಷಮೆಯಾಚನೆ:
ಇದರ ನಡುವೆಯೇ ಸಚಿವ ಗಿರಿ ಶನಿವಾರ ತಮ್ಮ ಹೇಳಿಕೆಗೆ ಕ್ಷಮಾಪಣೆ ಕೋರಿದ್ದಾರೆ. ‘ನಾನು ರಾಷ್ಟ್ರಪತಿಯವರನ್ನು ಅಪಮಾನಿಸುವ ಉದ್ದೇಶ ಹೊಂದಿರಲಿಲ್ಲ. ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿ ನಾಯಕರಿಗೆ ನಾನು ಪ್ರತಿಕ್ರಿಯೆ ನೀಡುತ್ತಿದ್ದೆ. ಆದರೂ ನಾನು ನನ್ನ ಹೇಳಿಕೆಗೆ ಕ್ಷಮೆ ಕೋರುತ್ತೇನೆ. ದೇಶದ ರಾಷ್ಟ್ರಪತಿಯವನ್ನು ನಾನು ಬಹಳ ಗೌರವಿಸುತ್ತೇನೆ’ ಎಂದಿದ್ದಾರೆ.

 

ಬಂಗಾಳದಿಂದ ಟಾಟಾ ಓಡಿಸಿದ್ದು ಸಿಪಿಎಂ, ನಾನಲ್ಲ : ಮಮತಾ ಬ್ಯಾನರ್ಜಿ

 ಬಂಗಾಳದಲ್ಲಿ ಸಿಎಎ ಅನುಷ್ಠಾನಕ್ಕೆ ಅವಕಾಶ ನೀಡಲ್ಲ: ಮಮತಾ
ಮುಂಬರುವ ಗುಜರಾತ್‌ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯು ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಜಾರಿಗೊಳಿಸಲು ಮುಂದಾಗಿದೆ’ ಎಂದು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಅಲ್ಲದೆ, ‘ಬಂಗಾಳದಲ್ಲಿ ಸಿಎಎ ಜಾರಿಗೆ ತೃಣಮೂಲ ಕಾಂಗ್ರೆಸ್‌ ಅವಕಾಶ ನೀಡುವುದಿಲ್ಲ. ಪ್ರತ್ಯೇಕತ ವಾದವನ್ನು ಹೊಂದಿರುವ ಬಿಜೆಪಿಯು ರಾಜ್ಯ ವಿಭಜನೆ ಮಾಡಲು ನಾವು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.
 

click me!