Modi in USA; ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮೋದಿ ಭಾಷಣ; ಪ್ರಧಾನಿ ಮಾತಿನ ಹೈಲೈಟ್ಸ್!

Published : Sep 25, 2021, 08:32 PM ISTUpdated : Sep 25, 2021, 08:41 PM IST
Modi in USA; ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮೋದಿ ಭಾಷಣ; ಪ್ರಧಾನಿ ಮಾತಿನ ಹೈಲೈಟ್ಸ್!

ಸಾರಾಂಶ

75ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮೋದಿ ಭಾಷಣ ವಿಶ್ವಸಂಸ್ಥೆ ಸಭೆಯಲ್ಲಿ ಮೋದಿ ನಾಲ್ಕನೇ ಭಾರಿ ಭಾಷಣ ಪ್ರಧಾನಿ ಮೋದಿ ಮಾತಿನ ಪ್ರಮುಖಾಂಶ ಇಲ್ಲಿದೆ

ವಾಷಿಂಗ್ಟನ್(ಸೆ.25): ಭಾರತಕ್ಕೆ (India) ಸ್ವಾತಂತ್ರ್ಯ ಬಂದು 75 ವರ್ಷಗಳು ಉರುಳಿದೆ. ನಾನು ಪ್ರಜಾಪ್ರಭುತ್ವದ ತಾಯಿ ಎಂದು ಕರೆಸಿಕೊಳ್ಳುವ ಭಾರತ ದೇಶವನ್ನು ಪ್ರತಿನಿಧಿಸುತ್ತಿದ್ದೇನೆ ಅನ್ನೋದು ಹೆಮ್ಮೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ವಿಶ್ವಸಂಸ್ಥೆಯ 75ನೇ ಸಮಾನ್ಯ ಸಭೆಯನ್ನುದ್ದೇಶಿ(General Assembly) ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. 

ಮೋದಿ-ಕಮಲಾ ಭೇಟಿ: ಇಡೀ ಜಗತ್ತಿನ ಮೇಲೆ ಮಾತುಕತೆ ಪರಿಣಾಮ

ಪ್ರಧಾನಿ ನರೇಂದ್ರ ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ:
ಭಾರತದ ಪ್ರಜಾಪ್ರಭುತ್ವದ ಮಹತ್ವವನ್ನು ಹೇಳುತ್ತಾ ಪ್ರಧಾನಿ ಮೋದಿ ಭಾಷಣ ಆರಂಭಿಸಿದ್ದಾರೆ.  ತಂದೆಗೆ ಚಹಾ ಮಾರಲು ಸಹಾಯ ಮಾಡಿದ ಹುಡುಗ ಇದೀಗ ದೇಶದ ಪ್ರಧಾನಿ. ಇದು ಪ್ರಜಾಪ್ರಭುತ್ವದ ಬಲ ಎತ್ತಿತೋರಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಅಮೆರಿಕದಲ್ಲಿ ಉಳಿದುಕೊಳ್ಳಲು 204 ವರ್ಷ ಹಳೇ ಹೋಟೆಲ್‌ ಆಯ್ಕೆ ಮಾಡಿದ್ದೇಕೆ ಪಿಎಂ?

ವಿಶ್ವವೇ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ. ಕಳೆದ 100 ವರ್ಷಗಳಲ್ಲಿ ಎದುರಿಸುದ ಅತ್ಯಂತ ಕ್ಲಿಷ್ಟ ಸಾಂಕ್ರಾಮಿಕ (Coronavirus)ಸಂದರ್ಭವಾಗಿದೆ. ಈ ಸಂದರ್ಭದಲ್ಲಿ ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾದ ಎಲ್ಲರಿಗೂ ಗೌರವ ನಮನ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು.

 

ಭಾರತ ವಿಶ್ವದ ಮೊದಲ DNA ಲಸಿಕೆ ಅಭಿವೃದ್ಧಿಪಡಿಸಲಾಗಿದೆ. 12 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಕ್ಕಳಿಗೆ ಲಸಿಕೆ(vaccine) ನೀಡುವ ಪ್ರಕ್ರಿಯೆ ಆರಂಭಗೊಂಡಿದೆ. ಇದೇ ವೇಳೆ ಜಾಗತಿಕ ಕಂಪನಿಗಳಿಗೆ ಮೋದಿ ವಿಶೇಶ ಮನವಿ ಮಾಡಿದ್ದಾರೆ. ಭಾರತಕ್ಕೆ ಬಂದು ಲಸಿಕೆ ಉತ್ಪಾದನೆಯಲ್ಲಿ ತೊಡಗಿ ವಿಶ್ವವನ್ನೇ ಸುರಕ್ಷಿತ ತಾಣವಾಗಿ ಬದಲಾಯಿಸಿ ಎಂದಿದ್ದಾರೆ.

Modi In US: ಅಮೆರಿಕ ಉಪಾಧ್ಯಕ್ಷೆ ಕಮಲಾ ಭೇಟಿಯಾದ ಪ್ರಧಾನಿ ಮೋದಿ

ದೀನದಯಾಳ್ ಉಪಾಧ್ಯಾರ ತತ್ವವಾದ ಅಂತ್ಯೋದಯದಿಂದ ಸ್ಪೂರ್ತಿ ಪಡೆದ ಭಾರತ ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗುತ್ತಿದೆ. ಎಲ್ಲರಿಗೂ ಸಮಗ್ರ ಮತ್ತು ಸಮಾನ ಅಭಿವೃದ್ಧಿಯನ್ನು ಭಾರತ ಖಾತ್ರಿ ಪಡಿಸುತ್ತದೆ. ಅಭಿವೃದ್ಧಿ ಎಲ್ಲರನ್ನು ಒಳಗೊಂಡಿರಬೇಕು, ಎಲ್ಲರನ್ನೂ ಪೋಷಿಸುವಂತಿರಬೇಕು ಎಂದು ಮೋದಿ ಹೇಳಿದ್ದಾರೆ.

ಭಯೋತ್ಪಾದನೆ(Terrorism) ಭಾರತಕ್ಕೆ ಮಾತ್ರವಲ್ಲ ಎಲ್ಲಾ ದೇಶಕ್ಕೂ ಅಪಾಯ. ಆದರೆ ಕೆಲ ದೇಶಗಳು ಭಯೋತ್ಪಾದನೆಯನ್ನು ದಾಳವಾಗಿ ಬಳಸಿಕೊಳ್ಳುತ್ತಿದೆ. ಅಫ್ಘಾನಿಸ್ತಾನ(Afghanistan) ನೆಲವನ್ನು ಭಯೋತ್ಪಾದನೆಗೆ ಬಳಸಲಾಗುತ್ತಿದೆ. ಈ ಪರಿಸ್ಥಿತಿಯ ಲಾಭ ಪಡೆಯಲು ಕೆಲ ದೇಶಗಳು ಹವಣಿಸುತ್ತಿದೆ. ಆಫ್ಘಾನಿಸ್ತಾನದ ಅಲ್ಪಸಂಖ್ಯಾತರಿಗೆ ನೆರವಿನ ಅಗತ್ಯವನ್ನು ವಿಶ್ವ ಮನಗಾಣಬೇಕು ಎಂದು ಮೋದಿ ಪರೋಕ್ಷವಾಗಿ ಪಾಕಿಸ್ತಾನ ಹಾಗೂ ಚೀನಾಗೆ ಟಾಂಗ್ ನೀಡಿದ್ದಾರೆ.

ಭಯೋತ್ಪಾದನೆಯನ್ನು ರಾಜಕೀಯ ಸಾಧನವಾಗಿ ಬಳಸಿಕೊಳ್ಳುವ ದೇಶಗಳು ಅರ್ಥಮಾಡಿಕೊಳ್ಳಬೇಕಾದ ಪ್ರಮುಖ ಅಂಶವೆಂದರೆ ಉಗ್ರವಾದ ಯಾವತ್ತೂ ಅಪಾಯ ತಂದೊಡ್ಡಲಿದೆ ಎಂದು ಮೋದಿ ಹೇಳಿದ್ದಾರೆ. 

ಸಾಗರ ಸಂಪನ್ಮೂಲಗಳನ್ನು ನಾವು ಬಳಸುತ್ತೇವೆ. ಸಾಗರ ನಮ್ಮ ಹಂಚಿಕೆಯ ಭಾಗ ಹಾೂ ಪರಂಪರೆಯಾಗಿದೆ. ಆದರೆ ಅವುಗಳನ್ನು ದುರುಪಯೋಗಪಡಿಸಿಕೊಳ್ಳಬಾರದು. 75 ವರ್ಷಗಳ ಸ್ವಾತಂತ್ರ್ಯದ ಸಂದರ್ಭದಲ್ಲಿ, ಭಾರತವು ಭಾರತೀಯ ವಿದ್ಯಾರ್ಥಿಗಳು ತಯಾರಿಸಿದ 75 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸಲಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್