ಹೆಚ್ಚಿದ ಕೊರೋನಾ: ಭಾರತಕ್ಕೆ ಅಮೆರಿಕದಿಂದ ತುರ್ತು ಸ್ಟ್ರೈಕ್ ಟೀಮ್

By Suvarna NewsFirst Published Apr 27, 2021, 12:07 PM IST
Highlights

ಭಾರತದಲ್ಲಿ ಕೊರೋನಾ ಅಟ್ಟಹಾಸ | ಅಮೆರಿಕ ಕಳುಹಿಸಿ ಕೊಡೋ ಸ್ಟ್ರೈಕ್ ಟೀಂ ಭಾರತದಲ್ಲಿ ಹೇಗೆ ಕೆಲಸ ಮಾಡುತ್ತೆ ?

ದೆಹಲಿ(ಏ.27): COVID-19 ಬಿಕ್ಕಟ್ಟಿನ ಮಧ್ಯೆ ಸ್ಟ್ರೈಕ್ ತಂಡವನ್ನು ತುರ್ತಾಗಿ ಭಾರತಕ್ಕೆ ನಿಯೋಜಿಸುವುದಾಗಿ ಅಮೆರಿಕ ಹೇಳಿದೆ. ಈ ತಂಡ ರಾಯಭಾರ ಕಚೇರಿಯೊಂದಿಗೆ, ಭಾರತದ ಆರೋಗ್ಯ ಸಚಿವಾಲಯಗಳು ಮತ್ತು ತಜ್ಞರೊಂದಿಗೆ, ಸೇವಾ ಸಿಬ್ಬಂದಿಯೊಂದಿಗೆ ಕೆಲಸ ಮಾಡಲಿದೆ.

ಭಾರತ ತಜ್ಞರ ಜೊತೆ ಕೆಲಸ ಮಾಡುವ ಸಾರ್ವಜನಿಕ ಆರೋಗ್ಯ ತಜ್ಞರನ್ನು ಒಳಗೊಂಡಿರುವ ಸ್ಟ್ರೈಕ್ ತಂಡವನ್ನು ಭಾರತಕ್ಕೆ ತುರ್ತಾಗಿ ನಿಯೋಜಿಸುತ್ತದೆ ಎಂದು ಅಮೆರಿಕ ತಿಳಿಸಿದೆ.

ಕೊರೋನಾ ಅಬ್ಬರ: ಚುನಾವಣೆ ಫಲಿತಾಂಶದ ಬಳಿಕ ವಿಜಯೋತ್ಸವ ರದ್ದು!

ಪ್ರಯೋಗಾಲಯ ಸೇವೆಗಳು, ಕಣ್ಗಾವಲು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರ, ರೋಗದ ಅನುಕ್ರಮ ಮತ್ತು ಮಾದರಿಗಾಗಿ ಬಯೋಇನ್ಫರ್ಮ್ಯಾಟಿಕ್ಸ್, ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ, ಲಸಿಕೆಗಳ ರೋಲ್ ಔಟ್, ಮತ್ತು ಸೋಂಕಿನ ಹರಡುವಿಕೆಯ ಅಪಾಯ ತಡೆಯುವುದು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಈ ತಂಡವು ಭಾರತದ ತಜ್ಞರೊಂದಿಗೆ ಕೈ ಜೋಡಿಸಲಿದೆ ಎಂದು ಅಮೆರಿಕ ಹೇಳಿದೆ.

ಅಮೆರಿಕ ಅಧ್ಯಕ್ಷ ಬೈಡನ್ ಅವರೊಂದಿಗೆ ಮೋದಿ ಮಾತನಾಡಿದ್ದು,ಅಗತ್ಯ ಔಷಧಿಗಳು, ಚಿಕಿತ್ಸೆ ಮತ್ತು ಆರೋಗ್ಯ ಸಾಧನಗಳ ಪೂರೈಕೆಯನ್ನು ಸೇರಿ ಆಯಾ ದೇಶಗಳ ಕೊರೋನಾ ಪರಿಸ್ಥಿತಿಯ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ.

ಅಧ್ಯಕ್ಷ ಬೈಡನ್ ಭಾರತಕ್ಕೆ ವೆಂಟಿಲೇಟರ್‌ಗಳಂತಹ ಸಂಪನ್ಮೂಲಗಳನ್ನು ತ್ವರಿತವಾಗಿ ಒದಗಿಸುವ ಮೂಲಕ ಮತ್ತು ಕೋವಿಶೀಲ್ಡ್ ಲಸಿಕೆಗಳ ತಯಾರಿಕೆಗೆ ಲಭ್ಯವಾಗುವಂತೆ ಕಚ್ಚಾ ವಸ್ತುಗಳನ್ನು ಒದಗಿಸುವ ಮೂಲಕ ಭಾರತದ ಪ್ರಯತ್ನ ಬೆಂಬಲಿಸಲು ಅಮೆರಿಕ ನಿರ್ಧರಿಸಿದೆ ಎಂದು ಮೋದಿಗೆ ಹೇಳಿದ್ದಾರೆ.

click me!