ಪಾರ್ಕ್, ಪಾರ್ಕಿಂಗ್ ಸ್ಲಾಟ್ ಎಲ್ಲವೂ ಈಗ ಸ್ಮಶಾನ..!

By Suvarna NewsFirst Published Apr 27, 2021, 10:54 AM IST
Highlights

ನಗು ನಗುತ್ತಾ ವಾಕಿಂಗ್ ಮಾಡ್ತಿದ್ದ ಪಾರ್ಕ್‌ಗಳಲ್ಲಿ ಮೃತದೇಹ ಸಂಸ್ಕಾರ | ಪಾರ್ಕ್, ಪಾರ್ಕಿಂಗ್ ಸ್ಲಾಟ್‌ಗಳೇ ಈಗ ಸ್ಮಶಾನ

ನವದೆಹಲಿ(ಏ.27): ಕೊರೋನಾ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಪಾರ್ಕ್, ಪಾರ್ಕಿಂಗ್ ಸ್ಲಾಟ್‌ಗಳಲ್ಲಿ ಮೃತದೇಹ ಅಂತ್ಯಸಂಸ್ಕಾರಕ್ಕೆ ತಯಾರಿ ಮಾಡಲಾಗಿದೆ. ವಾಹನ ನಿಲುಗಡೆ ಪ್ರದೇಶಗಳಲ್ಲಿ ಮತ್ತು ಖಾಲಿ ಮೈದಾನಗಳಲ್ಲಿ ಕೊರೋನಾ ಸೋಂಕಿತರ ಮೃತದೇಹದ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ದೆಹಲಿಯಲ್ಲಿ ಮೂರು ನಗರಪಾಲಿಕೆಗಳು ಈಗ ಹೆಚ್ಚಿನ ಸ್ಥಳಾವಕಾಶಕ್ಕಾಗಿ ಹುಡುಕಾಟ ನಡೆಸುತ್ತಿವೆ. ನಗರದಲ್ಲಿ ಹಲವು ಮೃತದೇಹ ಸಂಸ್ಕರಿಸುವ ಸ್ಥಳಗಳಲ್ಲಿ ರಾತ್ರಿ ಮತ್ತು ಹಗಲೂ ಕೊರೋನಾ ಸೋಂಕಿತರ ಮೃತದೇಹ ಸಂಸ್ಕಾರ ಮಾಡಲಾಗುತ್ತಿದ್ದು, ಇದೀಗ ಮತ್ತಷ್ಟು ಸ್ಥಳದ ಅಭಾವ ಕಂಡುಬಂದಿದೆ.

ಕೇಂದ್ರದಿಂದ ಮಾರ್ಗಸೂಚಿ: ಸೋಂಕು ಹೆಚ್ಚಿರುವೆಡೆ 14 ದಿನ ಸೀಮಿತ ಲಾಕ್‌ಡೌನ್‌!

ಸರೈ ಕಲೆ ಖಾನ್ ಕ್ರಿಮೇಷನ್ ವ್ಯವಸ್ಥೆ ಸಮೀಪವೇ ಮತ್ತಷ್ಟು 50 ಮೃತದೇಹ ಅಂತ್ಯಸಂಸ್ಕಾರ ಮಾಡಬಹುದಾದ ವ್ಯವಸ್ಥೆ ಮಾಡಲಾಗಿದೆ. ಅಂತ್ಯಸಂಸ್ಕಾರ ನಡೆಸಲು ಬೇಕಾದಷ್ಟು ಸ್ಥಳದ ವ್ಯವಸ್ಥೆ ಮಾಡುತ್ತಿದ್ದೇವೆ. ದೆಹಲಿಯ ಇನ್ನೊಂದು ಪ್ರಮುಖ ಸ್ಥಳ ಪಂಜಾಬಿ ಭಾಗ್‌ನ್ನು ಕೊರೋನಾ ಸೋಂಕಿತರ ಅಂತ್ಯಸಂಸ್ಕಾರಕ್ಕಾಗಿ ಮಾತ್ರ ಮೀಸಲಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಝಿಪುರ್ ಅಂತ್ಯಸಂಸ್ಕಾರ ವ್ಯವಸ್ಥೆಯಲ್ಲಿ  ಪಾರ್ಕಿಂಗ್ ಸ್ಲಾಟ್‌ನ್ನೂ ಸೇರಿಸಿ 20 ಹೆಚ್ಚಿಗೆ ಅವಕಾಶ ಮಾಡಲಾಗಿದೆ. ಕೊರೋನಾ ಸಾವಿನ ಸಂಖ್ಯೆ ಹೆಚ್ಚಾಗಿದ್ದು ಈಗ ಕ್ರಿಮೇಷನ್ ವ್ಯವಸ್ಥೆಯ ಒತ್ತಡ ತೀವ್ರವಾಗಿದೆ. ಹಾಗಾಗಿ ಅಂತ್ಯಸಂಸ್ಕಾರ ನಡೆಸಲು ಹೆಚ್ಚಿನ ವ್ಯವಸ್ಥೆ ಮಾಡಲಾಗಿದೆ ಎಂದು ದೆಹಲಿ ಈಶಾನ್ಯ ಮೇಯರ್ ನಿರ್ಮಲ್ ಜೈನ್ ಹೇಳಿದ್ದಾರೆ.

click me!