ಏಕರೂಪ ನಾಗರಿಕ ಸಂಹಿತೆಗೆ ಶೇ.67ರಷ್ಟು ಮುಸ್ಲಿಂ ಮಹಿಳೆಯರ ಬೆಂಬಲ, ಸರ್ವೇಯಲ್ಲಿ ಬಹಿರಂಗ

By Santosh NaikFirst Published Jul 10, 2023, 5:49 PM IST
Highlights


ಕೇಂದ್ರ ಸರ್ಕಾರ ಮುಂದಿನ ಚುನಾವಣೆಯ ವೇಳೆಗೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಮುಂದಾಗಿದೆ. ಇದರ ನಡುವೆ ನ್ಯೂಸ್‌ 18 ನೆಟ್‌ವರ್ಕ್‌ ಭಾರತದ ಅತಿದೊಡ್ಡ ಏಕರೂಪ ನಾಗರಿಕ ಸಂಹಿತೆಯ ಸರ್ವೆ ಮಾಡಿದ್ದಾಗಿ ಹೇಳಿಕೊಂಡಿದ್ದು, ಶೇ.67ರಷ್ಟು ಮಹಿಳೆಯರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದೆ.
 

ನವದೆಹಲಿ (ಜು.10): ಏಕರೂಪ ನಾಗರಿಕ ಸಂಹಿತೆ ಜಾರಿ ವಿಚಾರವಾಗಿ ಗೊಂದಲಗಳು ಹಾಗೂ ವಿವಾದಗಳು ಎದ್ದಿರುವಂತೆ, ಖಾಸಗಿ ನ್ಯೂಸ್‌ ಚಾನೆಲ್‌ ಈ ಕುರಿತಾಗಿ ಮೆಗಾ ಸರ್ವೇ ಮಾಡಿದೆ. ಇದರಲ್ಲಿ ಶೇ. 60ರಷ್ಟು ಮುಸ್ಲಿಂ ಮಹಿಳೆಯರು ಏಕರೂಪ ನಾಗರಿಕ ಸಂಹಿತೆಗೆ ಬೆಂಬಲ ಸೂಚಿಸಿದ್ದಾರೆ. ದೇಶದ 25 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ 8035 ಮುಸ್ಲಿಂ ಮಹಿಳೆಯರಿಂದ ಸರ್ವೇಗೆ ವಿವರ ಪಡೆಯಲಾಗಿದೆ. ಶೇ. 79ರಷ್ಟು ಮುಸ್ಲಿಂ ಮಹಿಳೆಯರು ಪುರುಷರಾಗಲಿ, ಮಹಿಳೆಯರಾಗಲಿ ಮದುವೆಯ ವಯಸ್ಸು 21 ಆಗಿರಬೇಕು ಎನ್ನುವ ವಿಚಾರದಲ್ಲಿ ಸಹಮತ ಹೊಂದಿದ್ದಾರೆ. ಮದುವೆ, ವಿಚ್ಛೇದನ ಹಾಗೂ ಉತ್ತರಾಧಿಕಾರಕ್ಕಾಗಿ ಹೆಚ್ಚಿನ ಮುಸ್ಲಿಂ ಮಹಿಳೆಯರು ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಅಂದಾಜು 8035 ನಹಿಳೆಯರ ಪೈಕಿ, 5403 ಮಹಿಳೆಯರು ಮದುವೆ, ವಿಚ್ಛೇದನ, ಉತ್ತರಾಧಿಕಾರ ಹಾಗೂ ದತ್ತು ಸ್ವೀಕಾರದ ಕುರಿತು ಸಮಾನ ಕಾನೂನಿನ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ಸಮೀಕ್ಷೆಯಲ್ಲಿ ಕೇಳಲಾದ ಏಳು ಪ್ರಮುಖ ಪ್ರಶ್ನೆಗಳು ಯುಸಿಸಿ ಕುರಿತು ಯಾವುದೇ ಉಲ್ಲೇಖವನ್ನು ಮಾಡಿಲ್ಲ ಆದರೆ, ಯುಸಿಸಿ ಒಳಗೊಂಡಿರುವ ವಿಷಯಗಳಿಗೆ ಕಟ್ಟುನಿಟ್ಟಾಗಿ ಸೀಮಿತವಾಗಿದ್ದವು.

ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು, ನಿರ್ವಹಣೆ, ಇತರ ವಿಷಯಗಳಲ್ಲಿ ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಅನ್ವಯವಾಗುವ ಒಂದು ಕಾನೂನು ಎನ್ನುವುದು ಯುಸಿಸಿಯ ಅರ್ಥವಾಗಿದೆ. "ಪ್ರತ್ಯೇಕ ಸಮುದಾಯಗಳಿಗೆ ಪ್ರತ್ಯೇಕ ಕಾನೂನು" ಎಂಬ ದ್ವಂದ್ವ ವ್ಯವಸ್ಥೆಯೊಂದಿಗೆ ದೇಶವು ನಡೆಯಲು ಸಾಧ್ಯವಿಲ್ಲದ ಕಾರಣ ಭಾರತಕ್ಕೆ ಯುಸಿಸಿ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಹೇಳಿದ್ದರು.

ಮುಂದಿನ ಸಂಸತ್‌ ಅಧಿವೇಶನದ ವೇಳೆ ಯುಸಿಸಿ ಬಗ್ಗೆಯೂ ಕೇಂದ್ರ ಚರ್ಚೆ ಮಾಡುವ ಸಾಧ್ಯತೆ ಇದೆ. ಇದರ ನಡುವೆ 18 ರಿಂದ 65 ವರ್ಷ ವಯಸ್ಸಿನ ಹೆಚ್ಚಿನ ಮುಸ್ಲಿಂ ಮಹಿಳೆಯರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಮದುವೆ, ವಿಚ್ಛೇದನ, ದತ್ತು ಸ್ವೀಕಾರ ಮತ್ತು ಉತ್ತರಾಧಿಕಾರದಂಥ ವೈಯಕ್ತಿಕ ವಿಷಯಗಳಿಗಾಗಿ ಎಲ್ಲಾ ಭಾರತೀಯರಿಗೂ ಸಮಾನ ಕಾನೂನು ಇರಬೇಕು ಎನ್ನುವ ವಿಚಾರವನ್ನು ನೀವು ಬೆಂಬಲಿಸುತ್ತೀರಾ ಎಂದು ಸಮೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ 5403 ಮಹಿಳೆಯರು ಹೌದು ಎಂದು ಹೇಳಿದ್ದರೆ, 2039 ಮಹಿಳೆಯರು ಇಲ್ಲ ಎಂದು ಹೇಳಿದ್ದಾರೆ.
ಇನ್ನು ಸ್ನಾತಕೋತ್ತರ ಪದವಿ ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಮಾಡಿದ ಮಹಿಳೆಯರಲ್ಲಿ ಶೇ. 68 ಮಂದಿ ಅಂದರೆ 2076 ಮಹಿಳೆಯರು ಸಾಮಾನ್ಯ ಕಾನೂನನ್ನು ಬೆಂಬಲಿಸಿದ್ದಾರೆ. ಇನ್ನು ಪ್ರತಿಶತ 27ರಷ್ಟು ಜನರು (820) ಮಂದಿ ಇಲ್ಲ ಎಂದಿದ್ದಾರೆ. ಇನ್ನು ಶೇ.7.4ರಷ್ಟು ಮಂದಿ ತಮಗೆ ಗೊತ್ತಿಲ್ಲ ಅಥವಾ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

 

ಏಕರೂಪ ನಾಗರಿಕ ಸಂಹಿತೆ ಬಗ್ಗೆ ನೆಹರೂ ಸಲಹೆ ಹಂಚಿಕೊಂಡ ಶಶಿ ತರೂರ್‌: ಕಾಂಗ್ರೆಸ್‌ ನಿಲುವು ಹೀಗಿದೆ..

ಇನ್ನು ವಯಸ್ಸಿನ ಪ್ರಕಾರವೂ ಸಮೀಕ್ಷೆಯನ್ನು ವಿವರಿಸಲಾಗಿದೆ. 18-44 ವರ್ಷ ವಯಸ್ಸಿನ 4366 (ಶೇ.69) ಏಕರೂಪ ನಾಗರಿಕ ಕಾನೂನು ಸಂಹಿತೆಯನ್ನು ಬೆಂಬಲಿಸಿದರೆ, ಶೇ. 24ರಷ್ಟು ಮಂದಿ ಬೆಂಬಲ ನೀಡಿಲ್ಲ. ಶೇ. 6 ರಷ್ಟು ಮಂದಿ ತಮಗೆ ಗೊತ್ತಿಲ್ಲ ಹಾಗೂ ಹೇಳಲು ಸಾಧ್ಯವಿಲ್ಲ ಎದು ಅಭಿಪ್ರಾಯಪಟ್ಟಿದ್ದಾರೆ. 44 ವರ್ಷಕ್ಕಿಂತ ಮೇಲಿನವರಲ್ಲಿ ಶೇ.60ರಷ್ಟು ಮಂದಿ ಕಾನೂನನ್ನು ಬೆಂಬಲಿಸಿದ್ದರೆ,  ಶೇ. 30ರಷ್ಟು ಮಂದಿ ಬೆಂಬಲ ನೀಡಿಲ್ಲ. ಶೇ.11 ರಷ್ಟು ಮಂದಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಕರೂಪ ಸಂಹಿತೆಗೆ ಬಿಜೆಪಿ ಮಿತ್ರ ಪಕ್ಷದಲ್ಲೇ ವಿರೋಧ: ಅಲ್ಪಸಂಖ್ಯಾತರ ಹೊರಗಿಡಿ ಎಂದ ಮುಸ್ಲಿಂ ಬೋರ್ಡ್‌

click me!