ಗಲ್ಲು ಶಿಕ್ಷೆ ತಪ್ಪಿಸಲು ಏನು ಮಾನದಂಡ: ಇಂದು ಸುಪ್ರೀಂ ತೀರ್ಪು

By Kannadaprabha NewsFirst Published Sep 19, 2022, 10:13 AM IST
Highlights

ಗರಿಷ್ಠ ಗಲ್ಲು ಶಿಕ್ಷೆ ನೀಡಬಹುದಾದ ಪ್ರಕರಣಗಳ ವಿಚಾರಣೆ ವೇಳೆ ದೋಷಿಯೊಬ್ಬನಿಗೆ ವಿನಾಯಿತಿ ನೀಡಲು ಪರಿಗಣಿಸಬಹುದಾದ ಅಂಶಗಳನ್ನು ಹೇಗೆ ಮತ್ತು ಯಾವಾಗ ಪರಿಗಣಿಸಬಹುದು ಎಂಬ ಮಹತ್ವದ ವಿಷಯದ ಕುರಿತು ಸುಪ್ರೀಂಕೋರ್ಟ್ (Supreme Court) ಇಂದು ಮಹತ್ವದ ತೀರ್ಪು ಪ್ರಕಟಿಸಲಿದೆ.

ನವದೆಹಲಿ: ಗರಿಷ್ಠ ಗಲ್ಲು ಶಿಕ್ಷೆ ನೀಡಬಹುದಾದ ಪ್ರಕರಣಗಳ ವಿಚಾರಣೆ ವೇಳೆ ದೋಷಿಯೊಬ್ಬನಿಗೆ ವಿನಾಯಿತಿ ನೀಡಲು ಪರಿಗಣಿಸಬಹುದಾದ ಅಂಶಗಳನ್ನು ಹೇಗೆ ಮತ್ತು ಯಾವಾಗ ಪರಿಗಣಿಸಬಹುದು ಎಂಬ ಮಹತ್ವದ ವಿಷಯದ ಕುರಿತು ಸುಪ್ರೀಂಕೋರ್ಟ್ (Supreme Court) ಇಂದು ಮಹತ್ವದ ತೀರ್ಪು ಪ್ರಕಟಿಸಲಿದೆ. ಈ ತೀರ್ಪು ಗಲ್ಲು ಶಿಕ್ಷೆ ನೀಡಬಹುದಾದ ಪ್ರಕರಣಗಳಿಗೆ ಹೊಸ ಮಾರ್ಗಸೂಚಿ ರಚಿಸಲಿರುವ ಕಾರಣ, ತೀರ್ಪು ಭಾರೀ ಕುತೂಹಲ ಕೆರಳಿಸಿದೆ.

ಈ ಬಗ್ಗೆ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದ ಹಾಲಿ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್‌ (U.U. Lalit) ಅವರನ್ನೊಳಗೊಂಡ ನ್ಯಾಯಪೀಠ ಸೋಮವಾರ ತನ್ನ ತೀರ್ಪು ಪ್ರಕಟಿಸಲಿದೆ. ಗಲ್ಲು ಶಿಕ್ಷೆ ಹಿಂದಕ್ಕೆ ಪಡೆಯಲಾಗದಂಥದ್ದು. ಹೀಗಾಗಿ ದೋಷಿಗೆ ವಿನಾಯಿತಿ ನೀಡಲು ಸಾಧ್ಯವಾಗುವಂಥ ಎಲ್ಲಾ ಅವಕಾಶಗಳನ್ನು ನ್ಯಾಯಾಲಯ ಕಲ್ಪಿಸಬೇಕು. ಈ ಮೂಲಕ ನ್ಯಾಯಾಲಯ ಗಲ್ಲು ಶಿಕ್ಷೆ (Death sentence) ನೀಡುವಂಥ ಪ್ರಮೇಯ ಬರುವುದನ್ನು ತಡೆಯಬಹುದು ಎಂದು ಆ.17ರಂದು ಪ್ರಕರಣದ ತೀರ್ಪು ಕಾಯ್ದಿಡುವ ವೇಳೆ ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಬೀದಿನಾಯಿ ದಾಳಿ ಮಾಡಿದರೆ ಆಹಾರ ನೀಡುವವರೇ ಹೊಣೆ: ಸುಪ್ರೀಂಕೋರ್ಟ್‌

ಗಲ್ಲು ಶಿಕ್ಷೆಗೆ (death penalty) ಕಾರಣವಾಗುವಂಥ ಪ್ರಕರಣಗಳಲ್ಲಿ, ಆರೋಪಿಯೊಬ್ಬನ ಮಾನಸಿಕ ಮತ್ತು ಮನೋ ವೈದ್ಯಕೀಯ ಅಂಶಗಳನ್ನು(psycho-medical aspects)  ಸರ್ಕಾರಗಳು ಸೂಕ್ತ ಹಂತದಲ್ಲೇ, ಮೊದಲೇ ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಈ ಮೂಲಕ ಆತನಿಗೆ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಬಹುದಾದ ಅಗತ್ಯ ಅವಕಾಶವನ್ನು ಕಲ್ಪಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

ಕ್ರಿಮಿನಲ್‌ ಕಾನೂನಿನಲ್ಲಿ(criminal law) ಮಿಟಿಗೇಟಿಂಗ್‌ ಸರ್ಕಸ್ಟಮ್‌ಸೆನ್ಸ್‌ ಅನ್ನು, ದೋಷಿಯೊಬ್ಬನ ಅಪರಾಧದ ಪ್ರಮಾಣವನ್ನು ಕಡಿಮೆ ಮಾಡುವ ಅಂಶಗಳೆಂದು ಪರಿಗಣಿಸಲಾಗುತ್ತದೆ. ಇಂಥ ಅಂಶಗಳು, ನ್ಯಾಯಾಲಯವು, ಶಿಕ್ಷೆ ವಿಧಿಸುವಾಗ ದೋಷಿ ಬಗ್ಗೆ ಮೃಧು ಧೋರಣೆ ತೋರಲು ಅವಕಾಶ ಮಾಡಿಕೊಡುತ್ತದೆ.

ಪತ್ನಿ ಮೇಲೆ ರೇಪ್‌: ಪತಿ ವಿಚಾರಣೆಗೆ ಅನುಮತಿ ನೀಡಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

700 ನಕ್ಸಲ್‌ ಬೆಂಬಲಿಗರು ಶರಣು

ಭುವನೇಶ್ವರ: ಒಡಿಶಾ ಮತ್ತು ಆಂಧ್ರಪ್ರದೇಶದ (Andhra Pradesh)  ಗಡಿ ಭಾಗದ ವಿವಿಧ ಜಿಲ್ಲೆಗಳ 700ಕ್ಕೂ ಹೆಚ್ಚು ನಕ್ಸಲ್‌ ಬೆಂಬಲಿಗ ಗ್ರಾಮಸ್ಥರು ಶನಿವಾರ ಮಲ್ಕಾನ್‌ಗಿರಿಯಲ್ಲಿ ಬಿಎಸ್‌ಎಫ್‌ ಯೋಧರಿಗೆ ಶರಣಾಗಿದ್ದಾರೆ. ನಕ್ಸಲರ ಬಲ ಹೆಚ್ಚಿರುವ ಸ್ಥಳದಲ್ಲಿ ನಡೆದ ಈ ಬೆಳವಣಿಗೆ ನಕ್ಸಲ್‌ ಹೋರಾಟಗಾರರಿಗೆ ದೊಡ್ಡ ಪೆಟ್ಟು ಎಂದು ಹೇಳಲಾಗಿದೆ. ಇವರೆಲ್ಲಾ ನಕ್ಸಲರಿಗೆ ಹಿಂಸಾಕೃತ್ಯಗಳಲ್ಲಿ, ಭದ್ರತಾ ಪಡೆಗಳು, ಪೊಲೀಸ್‌ ಮಾಹಿತಿದಾರರನ್ನು ಹತ್ಯೆ ಮಾಡಲು ನಾನಾ ರೀತಿಯಲ್ಲಿ ನೆರವಾಗುತ್ತಿದ್ದರು. ಅವರಿಗೆ ಹಣ, ಸರಕು ಸಾಗಣೆ ವ್ಯವಸ್ಥೆ ಮಾಡುತ್ತಿದ್ದರು. ಆದರೆ ಇವರೆಲ್ಲಾ ಇದೀಗ ನಕ್ಸಲ್‌ ವಾದದಿಂದ ಬೇಸತ್ತು ಸಮಾಜದ ಮುಖ್ಯವಾಹಿನಿಗೆ ಮರಳಲು ಮುಂದಾಗಿದ್ದಾರೆ ಎಂದು ಬಿಎಸ್‌ಎಫ್‌ ಹೇಳಿದೆ.
 

click me!