ಪತ್ನಿ ಮೇಲೆ ರೇಪ್: ಪತಿ ವಿಚಾರಣೆಗೆ ಅನುಮತಿ ನೀಡಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
ಪತ್ನಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪತಿಯ ವಿಚಾರಣೆ ನಡೆಸಲು ಅನುಮತಿ ನೀಡಿದ ಕರ್ನಾಟಕ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ನವದೆಹಲಿ: ಪತ್ನಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪತಿಯ ವಿಚಾರಣೆ ನಡೆಸಲು ಅನುಮತಿ ನೀಡಿದ ಕರ್ನಾಟಕ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಪತಿ ವಿರುದ್ಧ ಹೆಚ್ಚುವರಿ ನಗರ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಎಫ್‌ಐಆರ್‌ನಿಂದ ಉಂಟಾಗುವ ವಿಚಾರಣೆ ಹಾಗೂ ಕಾನೂನು ಪ್ರಕ್ರಿಯೆಗಳಿಗೆ ತಡೆ ನೀಡಿದೆ.
ತನ್ನ ಪತ್ನಿಯ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಗುಲಾಮಳಂತೆ ಇಟ್ಟುಕೊಂಡಿದ್ದ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376ರ ಅಡಿಯಲ್ಲಿ ದಾಖಲಿಸಲಾದ ಅತ್ಯಾಚಾರದ ಆರೋಪವನ್ನು ರದ್ದುಗೊಳಿಸಲು ನಿರಾಕರಿಸಿ ಮಾರ್ಚ್ 23 ರಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪಿಗೆ ಸುಪ್ರೀಂಕೋರ್ಟ್ ಮಂಗಳವಾರ ತಡೆ ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠವು ಈ ತೀರ್ಪು ನೀಡಿದೆ.
ಇಂಥ ವಿಷಯಕ್ಕೆಲ್ಲಾ ಡಿವೋರ್ಸ್ ಆಗುತ್ತಾ?
ಮುಂದಿನ ಆದೇಶಗಳವರೆಗೆ, ರಿಟ್ ಅರ್ಜಿ ಸಂಖ್ಯೆ 48367/2018 ಮತ್ತು 50089/2018 ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಮಾರ್ಚ್ 23, 2022 ರಂದು ನೀಡಿದ ಸಾಮಾನ್ಯ ದೋಷಾರೋಪಣೆಯ ತೀರ್ಪು ಮತ್ತು ಅಂತಿಮ ಆದೇಶಕ್ಕೆ ಮಧ್ಯಂತರ ತಡೆ ನೀಡಲಾಗಿದೆ. 2017 ರ ವಿಶೇಷ ಅಪರಾಧ ಪ್ರಕರಣ ಸಂಖ್ಯೆ 356 ಅಪರಾಧ ಸಂಖ್ಯೆ 19/2017 ರ ಅಡಿ ದಾಖಲಾದ ಎಫ್‌ಐಆರ್ ಹಾಗೂ ಬೆಂಗಳೂರಿನ ಹೆಚ್ಚುವರಿ ನಗರ ಮತ್ತು ಸೆಷನ್ಸ್ ಮತ್ತು ವಿಶೇಷ ನ್ಯಾಯಾಲಯದಲ್ಲಿ POCSO ಕಾಯಿದೆಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.
ಒಂದು ವಾರದ ನಂತರ ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ. ಕರ್ನಾಟಕ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ನೀಡಿರುವ ಹೈಕೋರ್ಟ್ ತೀರ್ಪಿನ ವಿರುದ್ಧ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.
ಮಗಳ ಮುಂದೆಯೇ ಅಸ್ವಾಭಾವಿಕ ಲೈಂಗಿಕ ಕ್ರಿಯೆ
ಪತ್ನಿ ಮತ್ತು ಮಗುವಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ ಹಲವು ನಿದರ್ಶನಗಳ ನಂತರ, ಭಾರತೀಯ ದಂಡ ಸಂಹಿತೆಯ (IPC) (ಅಸ್ವಾಭಾವಿಕ ಅಪರಾಧಗಳು) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, 2012 (POCSO) ಸೆಕ್ಷನ್ 10 (ಉಲ್ಭಣಗೊಂಡ ಲೈಂಗಿಕ ದೌರ್ಜನ್ಯ) ಪತ್ನಿಯು ಪತಿ ವಿರುದ್ಧ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) 498A (ಹೆಂಡತಿಗೆ ಕ್ರೌರ್ಯ) 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವ ಶಿಕ್ಷೆ) 377 ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ದೂರು ದಾಖಲಿಸಲಾಗಿತ್ತು. ವಿಶೇಷ ನ್ಯಾಯಾಲಯವು ಗಂಡನ ವಿರುದ್ಧ ಐಪಿಸಿಯ ಸೆಕ್ಷನ್ 376 (ಅತ್ಯಾಚಾರ), 498 ಎ ಮತ್ತು 506 ಮತ್ತು ಸೆಕ್ಷನ್ 5 (ಎಂ) ಮತ್ತು (ಎಲ್) ಪೋಕ್ಸೊ ಕಾಯಿದೆಯ ಸೆಕ್ಷನ್ 6 ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಕೆಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಸ್ತುತ ಪ್ರಕರಣದಲ್ಲಿ ಪತ್ನಿಯು ದೂರು ದಾಖಲಿಸಿಕೊಳ್ಳಲು ಪ್ರೇರೇಪಿಸಿದ್ದು ಆಕೆಯ ವಿರುದ್ಧ ಪತಿಯ ಕ್ರೂರ ಲೈಂಗಿಕ ಕ್ರಿಯೆಗಳು ಮತ್ತು ಮಗುವಿನ ವಿರುದ್ಧ ಲೈಂಗಿಕ ದೌರ್ಜನ್ಯ ಎಂಬುದನ್ನು ನ್ಯಾಯಾಲಯವು ಗಮನಿಸಿದೆ. ಆದ್ದರಿಂದ ಪುರುಷನು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಎಸಗಿದರೆ ಐಪಿಸಿಯ ಸೆಕ್ಷನ್ 376 ರ ಅಡಿಯಲ್ಲಿ ಶಿಕ್ಷೆಗೆ ಅರ್ಹ ಎಂದು ಹೈಕೋರ್ಟ್ ಹೇಳಿತ್ತು.
ಕೊರೊನಾ ಚಂಡಮಾರುತದಲ್ಲಿ ಕೊಚ್ಚಿ ಹೋದ ದಾಂಪತ್ಯ : ಹೆಚ್ಚಾಯ್ತು Divorce Case
ಹೈಕೋರ್ಟ್‌ನ ಈ ತೀರ್ಪಿನ ವಿರುದ್ಧ ಪತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಂದಾಗ, ಪುರುಷನು ಪತಿಯಾಗಿದ್ದರೆ, ಇನ್ನೊಬ್ಬ ಪುರುಷನಂತೆಯೇ ಅದೇ ಕೃತ್ಯಗಳನ್ನು ಮಾಡುತ್ತಿದ್ದರೆ, ಅವನಿಗೆ ವಿನಾಯಿತಿ ನೀಡಲಾಗುತ್ತದೆ ಎಂಬ ಹಿರಿಯ ವಕೀಲರ ವಾದವನ್ನು ಸುಪ್ರೀಂಕೋರ್ಟ್ ಒತ್ತಿ ಹೇಳಿತು.
ತನಿಖೆಯ ನಂತರ ಹೈಕೋರ್ಟ್‌ನಲ್ಲಿ ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಪತಿಯ ರಾಕ್ಷಸೀಯ ಕೃತ್ಯದ ಗ್ರಾಫಿಕ್ ವಿವರಗಳನ್ನು ಚಿತ್ರಿಸಲಾಗಿದೆ. ಅವನು ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಾನೆ ಹಾಗೂ ಇದಕ್ಕಾಗಿ ಆತ ಪತ್ನಿಗೆ ಚಿತ್ರಹಿಂಸೆ ಜೊತೆಗೆ ನಿಂದಿಸುವುದಲ್ಲದೇ ಪುತ್ರಿಗೆ ಹೊಡೆಯುವುದಾಗಿ ಬೆದರಿಕೆ ಹಾಕುತ್ತಿದ್ದ, ಜೊತೆಗೆ ಒಂಭತ್ತು ವರ್ಷದ ಪುತ್ರಿಯ ಮುಂದೆಯೇ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಇದೆಲ್ಲವನ್ನು ಗಮನಿಸಿ ಹೈಕೋರ್ಟ್ ಆತನಿಗೆ ಶಿಕ್ಷೆ ನೀಡುವ ತೀರ್ಪು ನೀಡಿತ್ತು. ಆದರೆ ಸುಪ್ರೀಂಕೋರ್ಟ್ ಈಗ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ.