
ಸತಿರುಮಲದಲ್ಲಿ ಶ್ರೀನಿವಾಸ ಬ್ರಹ್ಮೋತ್ಸವಗಳು 10ನೇ ಶತಮಾನದಿಂದಲೇ ಆರಂಭವಾಗಿದೆ ಎಂದು ಚರಿತ್ರೆ ಹೇಳುತ್ತಿದೆ. ಪಲ್ಲವ ರಾಜವಂಶದ ರಾಣಿ 'ಸಮವೈ ಪೆರುಂದೇವಿ' ಎಂಬವರು ಶ್ರೀ ವೆಂಕಟೇಶ್ವರ ಸ್ವಾಮಿಗೆ ಬೆಳ್ಳಿಯ ಭೋಗ ಶ್ರೀನಿವಾಸಮೂರ್ತಿಯನ್ನು ಆರ್ಪಿಸಿದ್ದರು. ಉತ್ಸವದ ಆಯೋಜನೆಗಾಗಿ ಹಲವು ಆಭರಣಗಳನ್ನು ನೀಡಿದ್ದರು. ಭೂಮಿಯನ್ನು ದಾನ ಮಾಡಿದ್ದರು. ಈ ಎಲ್ಲಾ ದಾನ ವಿವರಗಳನ್ನು ದೇವಾಲಯದ ಉತ್ತರ ಗೋಡೆಯ ಮೇಲೆ ನಮೂದಿಸಲಾಗಿದೆ. 10ನೇ ಶತಮನಾದಲ್ಲಿಯೇ (ಸುಮಾರು 966ರಲ್ಲಿ) ಸ್ವಾಮಿಯ ಬ್ರಹ್ಮೋತ್ಸವ ಆಯೋಜಿಸಿದನು ಎಂಬ ಮಾಹಿತಿ ಈ ಶಾಸನಗಳ ಮೂಲಕ ಲಭ್ಯವಿದೆ.
ಪುರಾಣಗಳ ಪ್ರಕಾರ ಮೊದಲ ಬ್ರಹ್ಮೋತ್ಸವವನ್ನು ಬ್ರಹ್ಮ ದೇವರು ಆಯೋಜಿಸಿದ್ದರಂತೆ. ದಂತಕಥೆಯ ಪ್ರಕಾರ, ವೆಂಕಟ್ರಾದ್ರಿ ಪವರ್ತದ ಮೇಲೆ ಶ್ರೀನಿವಾಸ ಅವತಾರದ ಸಂದರ್ಭದಲ್ಲಿ ಈ ಉತ್ಸವವನ್ನು ನಡೆಸಿದ್ದರಂತೆ. ಆದ್ದರಿಂದ ಇದನ್ನು ಬ್ರಹ್ಮೋತ್ಸವ ಎಂದು ಕರೆಯಲಾಗುತ್ತದೆ. 1209-1263ರಲ್ಲಿ ವೀರ ನರಸಿಂಹ ಯಾದವ ರಾಯರ ಆಳ್ವಿಕೆಯಲ್ಲಿ ಪಂಗುಣಿ ಬ್ರಹ್ಮೋತ್ಸವ ಆಯೋಜಿಸಲಾಗಿತ್ತು. 1254ರಲ್ಲಿ ವಿಜಯ ಗಂಡಗೋಪಾಲದೇವರ ಆಳ್ವಿಕೆಯಲ್ಲಿ ಚಿತ್ತಿರೈ ಬ್ರಹ್ಮೋತ್ಸವ. 1300-1330ರ ಅವಧಿಯಲ್ಲಿ ಯಾದವ ರಾಯರ ಕಾಲದಲ್ಲಿ ಆದಿ ಬ್ರಹ್ಮೋತ್ಸವ. 1339ರಲ್ಲಿ ಮಲಯಪ್ಪ ಸ್ವಾಮಿ ಉತ್ಸವ ದೇವತೆಯಾಗಿ ಜನಪ್ರಿಯನಾದನು.
14 ಮತ್ತು 15ನೇ ಶತಮಾನದಲ್ಲಿ ವಿಜಯ ನಗರ ಕಾಲದಲ್ಲಿ ಬ್ರಹ್ಮೋತ್ಸವಗಳ ಸಂಖ್ಯೆ ಮತ್ತು ಉತ್ಸವಗಳ ವೈಭವ ವಿಸ್ತರಿಸಿತು. 1513ರಲ್ಲಿ ಶ್ರೀಕೃಷ್ಣದೇವರಾಯ ತೈಮಾಸದಲ್ಲಿ ಹೊಸ ಬ್ರಹ್ಮೋತ್ಸವಕ್ಕೆ ಶಾಸನದ್ಧ ಪುರಾವೆಗಳು ಸಿಕ್ಕಿದೆ. 1539ರಲ್ಲಿ ತಾಲ್ಲಪಾಕ ಪೇದ ತಿರುಮಲಯ್ಯಂಗಾರ್ ಅವರ ಆಶ್ರಯದಲ್ಲಿ ಅಣಿ ಬ್ರಹ್ಮೋತ್ಸವ. 1803ರಲ್ಲಿ ಮೆಕೆಂಜಿಯವರ ಸಮೀಕ್ಷೆಯಲ್ಲಿ ತಿರುಮಲದಲ್ಲಿ 28 ಉತ್ಸವಗಳು ನಡೆಯುತ್ತಿದ್ದವು ಎಂದು ಉಲ್ಲೇಖಿಸಲಾಗಿದೆ.
1843ರಲ್ಲಿ ದೇವಾಲಯದ ಆಡಳಿತವೂ ಹಥಿರಂಜಿ ಮಠದ ಮಹಂತರ ಕೈಗೆ ಸೇರುತ್ತದೆ. 1933ರಲ್ಲಿ ತಿರುಮಲ ಮತ್ತು ತಿರುಪತಿ ದೇವಾಲಯಗಳ ಸ್ಥಾಪನೆ, ಮಹಂತರ ಆಳ್ವಿಕೆಯ ಅಂತ್ಯ.
ಟಿಟಿಡಿ ಮಾಹಿತಿ ಅನ್ವಯ, ಬ್ರಹ್ಮೋತ್ಸವಗಳ ವಿನ್ಯಾಸ ಮತ್ತು ಸಂಘಟನೆ ಒಂದೇ ದಿನದಲ್ಲಿ ಹೊರಹೊಮ್ಮಲಿಲ್ಲ. ಶತಮಾನಗಳಿಂದ, ರಾಜರು, ರಾಣಿಯರು, ಊಳಿಗಮಾನ್ಯ ಪ್ರಭುಗಳು, ಭಕ್ತರು ಮತ್ತು ದೇವಾಲಯ ಆಡಳಿತವು ವಿಕಸನಗೊಂಡಂತೆ ಕಾಲಾನಂತರದಲ್ಲಿ ಬದಲಾವಣೆಗಳು ಸಂಭವಿಸಿದೆ.
ಉಳಿದಂತೆ ಸಂಗಮ, ಸಾಳುವ, ತುಳುವ ಮತ್ತು ಅರವಿಟಿ ರಾಜವಂಶಗಳ ಆಳ್ವಿಕೆಯಲ್ಲಿ, ದೇವಾಲಯದಲ್ಲಿ ಉತ್ಸವಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು. ವಿಜಯನಗರ ಅವಧಿಯ ಅಂತ್ಯದ ವೇಳೆಗೆ ವಾರ್ಷಿಕವಾಗಿ ಹತ್ತು ಬ್ರಹ್ಮೋತ್ಸವಗಳು ನಡೆಯುತ್ತಿದ್ದವು ಎಂದು ಶಾಸನಗಳು ದಾಖಲಿಸುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ