US-Pakistan Oil Deal: ಯಾರಿಗೊತ್ತು ಭವಿಷ್ಯದಲ್ಲಿ ಪಾಕಿಸ್ತಾನವೇ ಭಾರತಕ್ಕೆ ತೈಲ ಮಾರಾಟ ಮಾಡಬಹುದು: ಟ್ರಂಪ್ ಹೀಗೆ ಹೇಳಿದ್ದು ಏಕೆ?

Published : Jul 31, 2025, 01:04 PM ISTUpdated : Jul 31, 2025, 01:16 PM IST
US-Pakistan Oil Deal

ಸಾರಾಂಶ

ಅಮೆರಿಕಾ ಅಧ್ಯಕ್ಷ ಟ್ರಂಪ್ ಪಾಕಿಸ್ತಾನದ ತೈಲ ನಿಕ್ಷೇಪ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಘೋಷಿಸಿದ್ದಾರೆ. ಭಾರತಕ್ಕೆ ತೈಲ ಮಾರಾಟದ ಸುಳಿವು ನೀಡಿದ್ದಾರೆ. ಈ ಘೋಷಣೆ ಭಾರತ-ಪಾಕ್ ಸಂಬಂಧ ಮತ್ತು ಯುಎಸ್ ನ Geopolitical game ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ನವದೆಹಲಿ(ಜುಲೈ.31): ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಘೋಷಣೆಯು ದಕ್ಷಿಣ ಏಷ್ಯಾದ ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನದ ಕರಾಚಿ ಕರಾವಳಿಯಲ್ಲಿ ಕಂಡುಬಂದಿರುವ ಬೃಹತ್ ತೈಲ ಮತ್ತು ಅನಿಲ ನಿಕ್ಷೇಪಗಳ ಅಭಿವೃದ್ಧಿಗೆ ಯುಎಸ್ ಸಹಕಾರ ನೀಡಲಿದೆ ಎಂದು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಆಶ್ಚರ್ಯಕರವಾಗಿ, ಭವಿಷ್ಯದಲ್ಲಿ ಪಾಕಿಸ್ತಾನವು ಭಾರತಕ್ಕೆ ತೈಲ ಮಾರಾಟ ಮಾಡಬಹುದು ಎಂಬ ಸೂಚನೆಯನ್ನೂ ಅವರು ನೀಡಿದ್ದಾರೆ. ಈ ಹೇಳಿಕೆಯು ಭಾರತದೊಂದಿಗಿನ ಟ್ರಂಪ್‌ರವರ ಇತ್ತೀಚಿನ ಸುಂಕ ಘೋಷಣೆಯ ಹಿನ್ನೆಲೆಯಲ್ಲಿ ಬಂದಿರುವುದು ಈ ವಿಷಯಕ್ಕೆ ಹೆಚ್ಚಿನ ಆಯಾಮವನ್ನು ನೀಡಿದೆ.

ತೈಲ ನಿಕ್ಷೇಪ: ಪಾಕಿಸ್ತಾನದ 'ಅಲ್ಲಾದೀನ್‌ನ ದೀಪ: 2024ರಲ್ಲಿ ಪಾಕಿಸ್ತಾನದ ಕಡಲ ಗಡಿಯಲ್ಲಿ ಕಂಡುಬಂದ ತೈಲ ಮತ್ತು ಅನಿಲ ನಿಕ್ಷೇಪವು ವಿಶ್ವದ ನಾಲ್ಕನೇ ಅತಿದೊಡ್ಡ ನಿಕ್ಷೇಪವೆಂದು ವರದಿಯಾಗಿದೆ. ಈ ಸಂಶೋಧನೆಗೆ 42 ಸಾವಿರ ಕೋಟಿ ರೂಪಾಯಿಗಳಷ್ಟು ಖರ್ಚಾಗಲಿದ್ದು, ಸಮುದ್ರದಿಂದ ತೈಲ ಹೊರತೆಗೆಯಲು 4-5 ವರ್ಷಗಳ ಕಾಲಾವಕಾಶ ಬೇಕಾಗಬಹುದು ಎಂದು ಪಾಕಿಸ್ತಾನಿ ಮಾಧ್ಯಮಗಳು ತಿಳಿಸಿವೆ.

ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಪಾಕ್‌ಗೆ ವರದಾನ:

ಈ ನಿಕ್ಷೇಪವು ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಒಂದು 'ವರದಾನ'ವಾಗಬಹುದು, ಏಕೆಂದರೆ ಇದರಿಂದ ದುಬಾರಿ ಎಲ್‌ಎನ್‌ಜಿ ಆಮದು ಮತ್ತು ತೈಲದ ಅವಲಂಬನೆ ಕಡಿಮೆಯಾಗಬಹುದು. ಆದರೆ, ಈ ಯೋಜನೆಯ ಯಶಸ್ಸು ಯುಎಸ್‌ನ ತಾಂತ್ರಿಕ ಮತ್ತು ಆರ್ಥಿಕ ಬೆಂಬಲವನ್ನು ಅವಲಂಬಿಸಿದೆ.

ಭಾರತಕ್ಕೆ ಭವಿಷ್ಯದ ಸವಾಲುಗಳೇನು?

ಟ್ರಂಪ್‌ರವರ ಹೇಳಿಕೆಯು ಭಾರತಕ್ಕೆ ತೈಲ ಮಾರಾಟದ ಸಾಧ್ಯತೆಯನ್ನು ಸೂಚಿಸಿದ್ದರೂ, ಇದು ಭಾರತ-ಪಾಕಿಸ್ತಾನ ಸಂಬಂಧದ ಜಟಿಲತೆಯನ್ನು ಗಮನದಲ್ಲಿಟ್ಟುಕೊಂಡಾಗ ಸುಲಭವಾಗಿ ಜಾರಿಗೆ ಬರಲಿಕ್ಕಿಲ್ಲ. ಭಾರತವು ತನ್ನ ತೈಲ ಆಮದಿಗೆ ಸೌದಿ ಅರೇಬಿಯಾ, ಇರಾಕ್ ಮತ್ತು ಯುಎಇನಂತಹ ರಾಷ್ಟ್ರಗಳನ್ನು ಅವಲಂಬಿಸಿದೆ. ಪಾಕಿಸ್ತಾನದೊಂದಿಗಿನ ರಾಜಕೀಯ ಒತ್ತಡ ಮತ್ತು ಗಡಿ ವಿವಾದಗಳು ಈ ಒಪ್ಪಂದವನ್ನು ಕಾರ್ಯಗತಗೊಳಿಸುವಲ್ಲಿ ಪ್ರಮುಖ ಅಡಚಣೆಯಾಗಬಹುದು. ಅದೇ ಸಮಯದಲ್ಲಿ, ಭಾರತಕ್ಕೆ ತೈಲದ ಬೆಲೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.

ಯುಎಸ್‌ನ Geopolitical game?

ಈ ಒಪ್ಪಂದವು ಯುಎಸ್‌ನ Geopolitical game ಎಂಬ ಶಂಕೆಯೂ ಇದೆ, ವಿಶೇಷವಾಗಿ ಭಾರತದ ಮೇಲಿನ ಸುಂಕ ಘೋಷಣೆಯ ಹಿನ್ನೆಲೆಯಲ್ಲಿ. ಪಾಕಿಸ್ತಾನದ 'ನೀಲಿ ಆರ್ಥಿಕತೆ'ಗೆ ಈ ತೈಲ ನಿಕ್ಷೇಪವು ಒಂದು ದೊಡ್ಡ ಉತ್ತೇಜನವಾಗಿದೆ. ಹೊಸ ಬಂದರುಗಳು, ಸಮುದ್ರ ಮಾರ್ಗಗಳು ಮತ್ತು ಕಡಲ ನೀತಿಗಳ ಮೂಲಕ ಆರ್ಥಿಕತೆಯನ್ನು ಬಲಪಡಿಸುವ ಯೋಜನೆಯಿದೆ. ಆದರೆ, ಈ ಯೋಜನೆಯ ಯಶಸ್ಸು ಸರಿಯಾದ ಆಡಳಿತ, ಭ್ರಷ್ಟಾಚಾರ ನಿಯಂತ್ರಣ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಅವಲಂಬಿಸಿದೆ. ಈಗಿನ ಆರ್ಥಿಕ ಬಿಕ್ಕಟ್ಟಿನಲ್ಲಿ, ಈ ತೈಲ ನಿಕ್ಷೇಪವು ಪಾಕಿಸ್ತಾನಕ್ಕೆ ಒಂದು ದೀರ್ಘಕಾಲೀನ ಆರ್ಥಿಕ ಸ್ಥಿರತೆಯ ಭರವಸೆಯನ್ನು ನೀಡಬಹುದು.

ಯುಎಸ್‌ನ ಉದ್ದೇಶ ಏನು?

ಯುಎಸ್‌ನ ಈ ಒಪ್ಪಂದದ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಒಂದೆಡೆ, ಇದು ಯುಎಸ್‌ನ ತೈಲ ಕಂಪನಿಗಳಿಗೆ ಲಾಭದಾಯಕ ಒಪ್ಪಂದವಾಗಿದೆ. ಮತ್ತೊಂದೆಡೆ, ಇದು ದಕ್ಷಿಣ ಏಷ್ಯಾದಲ್ಲಿ ಚೀನಾ, ಭಾರತದ ಪ್ರಭಾವವನ್ನು ಕಡಿಮೆ ಮಾಡುವ ಒಂದು ಕಾರ್ಯತಂತ್ರವೂ ಆಗಿರಬಹುದು, ವಿಶೇಷವಾಗಿ ಪಾಕಿಸ್ತಾನದಲ್ಲಿ ಚೀನಾದ ಚೈನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಯ ಹಿನ್ನೆಲೆಯಲ್ಲಿ. ಭಾರತದೊಂದಿಗಿನ ಸಂಬಂಧವನ್ನು ಈ ಒಪ್ಪಂದದ ಮೂಲಕ ಮತ್ತಷ್ಟು ಒತ್ತಡಕ್ಕೆ ಒಡ್ಡುವ ಸಾಧ್ಯತೆಯೂ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..