ಪ್ರಗ್ಯಾ ಸಿಂಗ್ ಠಾಕೂರ್‌ ಸೇರಿದಂತೆ ಮಾಲೇಗಾಂವ್ ಪ್ರಕರಣದ ಎಲ್ಲಾ 7 ಆರೋಪಿಗಳು ಖುಲಾಸೆ

Published : Jul 31, 2025, 11:30 AM ISTUpdated : Aug 01, 2025, 11:27 AM IST
malegav blast case accused

ಸಾರಾಂಶ

ಮಾಲೇಗಾಂವ್ ಪ್ರಕರಣದ ಎಲ್ಲಾ 7 ಆರೋಪಿಗಳು ಖುಲಾಸೆಗೊಳಿಸಿ ಮಹಾರಾಷ್ಟ್ರ ಎನ್‌ಐಎ ಕೋರ್ಟ್ ತೀರ್ಪು ನೀಡಿದೆ

ಮುಂಬೈ: ಮಾಲೇಗಾಂವ್ ಪ್ರಕರಣದ ಎಲ್ಲಾ 7 ಆರೋಪಿಗಳು ಖುಲಾಸೆಗೊಳಿಸಿ ಮಹಾರಾಷ್ಟ್ರ ಎನ್‌ಐಎ ಕೋರ್ಟ್ ತೀರ್ಪು ನೀಡಿದೆ. ಮಾಜಿ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್‌, ಸುಧಾಕರ್ ಚತುರ್ವೇದಿ ಸೇರಿದಂತೆ 7 ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿ ಮಹತ್ವದ ತೀರ್ಪು ನೀಡಿದೆ.

ಮಾಜಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್‌, ಸುಧಾಕರ್ ಚತುರ್ವೇದಿ, ಮೇಜರ್ ರಮೇಶ್ ಉಪಾಧ್ಯಾಯ, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ಸಮೀರ್ ಕುಲಕರ್ಣಿ ನಿರ್ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್‌ನ ಮಸೀದಿ ಸಮೀಪ ಬೈಕ್‌ ಸ್ಫೋಟದಲ್ಲಿ 6 ಮಂದಿ ಮೃತಪಟ್ಟಿದ್ದರು. 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. 2008ರ ಸೆಪ್ಟೆಂಬರ್ 29ರಂದು ಮುಂಬೈನಿಂದ 100 ಕಿ.ಮೀ ದೂರದಲ್ಲಿ ಈ ಕೃತ್ಯ ನಡೆದಿತ್ತು. ಈ ಸಂಬಂಧ 7 ಆರೋಪಿಗಳ ಮೇಲೆ ಯುಎಪಿಎ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ದೂರು ದಾಖಲಿಸಲಾಗಿತ್ತು. ಪ್ರಾಸಿಕ್ಯೂಷನ್‌ ಪರ 323 ಹಾಗೂ ಸಂತ್ರಸ್ತರ ಪರ 8 ಸಾಕ್ಷಿಗಳನ್ನು ವಿಚಾರಣೆ ನಡೆದಿದೆ. ಮಹಾರಾಷ್ಟ್ರದ ಉಗ್ರ ನಿಗ್ರಹ ದಳ ಆರಂಭದಲ್ಲಿ ವಿಚಾರಣೆ ನಡೆಸಿತ್ತು. ಬಳಿಕ 2011ರಲ್ಲಿ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು.

ಪುರೋಹಿತ್ ಮನೆಯಲ್ಲಿ ಆರ್ ಡಿ ಎಕ್ಸ್ ಇತ್ತು ಅನ್ನೋಕೆ ಸಾಕ್ಷ್ಯ ಇಲ್ಲ. ಎನ್‌ಐಎ ಬೈಕ್ ನಲ್ಲಿ ಬಾಂಬ್ ಇರಿಸಿದ್ದರು ಅನ್ನೋದು ಸಾಬೀತು ಮಾಡಲು ವಿಫಲವಾಗಿದೆ. ಖಾಲಿ ಶೆಲ್ ವಶಕ್ಕೆ ಪಡೆದಿಲ್ಲ. ಕೃತ್ಯಕ್ಕೆ ಬಳಕೆಯಾಗಿದೆ ಎನ್ನುವ ಬೈಕ್ ಪ್ರಗ್ಯಾ ಅವರಿಗೆ ಸೇರಿದ್ದ ಅನ್ನೋ ಕೆ ಸಾಕ್ಷ್ಯ ಇಲ್ಲ. ಯಾವುದೇ ಪಿತೂರಿ ಸಭೆಗಳ ಬಗ್ಗೆ ಸಾಕ್ಷ್ಯ ಇಲ್ಲ. ಯಾವುದೇ ಫಿಂಗರ್ ಪ್ರಿಂಟ್, ಡಿಎನ್ ಎ ಸಂಗ್ರಹ ಮಾಡಿಲ್ಲ. ಕೃತ್ಯದಲ್ಲಿ ಬಳಕೆಯಾಗಿರುವ ಬೈಕ್ ಚಾರ್ಸಿ ನಾಶವಾಗಿದೆ. ಸ್ಪೋಟದ ಕಥೆ ಚನ್ನಾಗಿ ಕಟ್ಟಲಾಗಿದೆ ಆದ್ರೆ ಯಾವುದೇ ಸಾಕ್ಷ್ಯವಿಲ್ಲ ಎಂದು ಎನ್ಐಎ ನ್ಯಾಯಾಲಯ ಹೇಳಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ದುಡ್ಡು ಅನ್ಯ ಕೆಲಸಕ್ಕೆ ಬಳಸಕೂಡದು : ಸುಪ್ರೀಂ
ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ