ಪ್ರಶ್ನೆ ಪತ್ರಿಕೆಯಲ್ಲಿ ಮಕ್ಕಳು ಉತ್ತರ ಗೊತ್ತಿಲ್ಲದೇ ಇದ್ದಾಗ ಏನೇನೋ ಬರೆದು ಪೇಪರ್ ತುಂಬಿಸುವುದನ್ನು ನೀವು ಕೇಳಿರಬಹುದು. ಅದೇ ರೀತಿ ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಕೆಲವು ಮಕ್ಕಳು ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಬರೀ ಜೈ ಶ್ರೀರಾಮ್ ಹಾಗೂ ಭಾರತೀಯ ಕ್ರಿಕೆಟರ್‌ಗಳ ಹೆಸರು ಬರೆದು ಪುಟ ತುಂಬಿಸಿದ್ದಾರೆ,
ಲಕ್ನೋ: ಪ್ರಶ್ನೆ ಪತ್ರಿಕೆಯಲ್ಲಿ ಮಕ್ಕಳು ಉತ್ತರ ಗೊತ್ತಿಲ್ಲದೇ ಇದ್ದಾಗ ಏನೇನೋ ಬರೆದು ಪೇಪರ್ ತುಂಬಿಸುವುದನ್ನು ನೀವು ಕೇಳಿರಬಹುದು. ಅದೇ ರೀತಿ ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಕೆಲವು ಮಕ್ಕಳು ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಬರೀ ಜೈ ಶ್ರೀರಾಮ್ ಹಾಗೂ ಭಾರತೀಯ ಕ್ರಿಕೆಟರ್‌ಗಳ ಹೆಸರು ಬರೆದು ಪುಟ ತುಂಬಿಸಿದ್ದಾರೆ, ಆದರೆ ಇದಕ್ಕಿಂತಲೂ ವಿಚಿತ್ರ ಎಂದರೆ ಹೀಗೆ ಬರೆದ ನಾಲ್ವರು ಮಕ್ಕಳು ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ವಿಚಾರ ಈಗ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಈ ಮಕ್ಕಳ ಪೇಪರ್ ತಿದ್ದಿದ ಇಬ್ಬರು ಶಿಕ್ಷಕರನ್ನು ಉತ್ತರ ಪ್ರದೇಶ ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ.
ಹಳೆ ವಿದ್ಯಾರ್ತಿಯೋರ್ವ ಮಾಹಿತಿ ಹಕ್ಕಿನಡಿ ವಿಚಾರ ಕೆದಕಿದಾಗ, ಉತ್ತರ ಪ್ರದೇಶದ ರಾಜ್ಯಕ್ಕೆ ಸೇರಿದ ವಿಶ್ವವಿದ್ಯಾನಿಲಯವೊಂದರಲ್ಲಿ ಕೆಲವು ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳಲ್ಲಿ ಬರೀ ಜೈ ಶ್ರೀ ರಾಮ್ ಮತ್ತು ಕೆಲವು ಭಾರತೀಯ ಕ್ರಿಕೆಟಿಗರ ಹೆಸರನ್ನು ಬರೆದೇ ಶೇ.50 ಅಂಕ ಗಳಿಸಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.
undefined
ಉತ್ತರ ಪ್ರದೇಶದ ಜೌನ್‌ಪುರದಲ್ಲಿರುವ ರಾಜ್ಯ ವಿಶ್ವವಿದ್ಯಾಲಯವಾದ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ಅಂಗ್ಲ ಮಾಧ್ಯಮವೊಂದರಲ್ಲಿ ಉಲ್ಲೇಖಿಸಲಾದ ವರದಿ ಪ್ರಕಾರ, ಉತ್ತರ ಬರೆಯದೇ ಬರೀ ಈ ರೀತಿ ಬರೆದ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿದ ಇಬ್ಬರು ಶಿಕ್ಷಕರನ್ನು ಹೊರಹಾಕಲು ವಿಶ್ವವಿದ್ಯಾಲಯವು ಆದೇಶಿಸಿದೆ. ಮೊದಲ ವರ್ಷದ ಫಾರ್ಮಸಿ ಕೋರ್ಸ್‌ನ 18 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಒತ್ತಾಯಿಸಿ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ದಿವ್ಯಾಂಶು ಸಿಂಗ್ ಆರ್‌ಟಿಐ ಅರ್ಜಿ ಸಲ್ಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮುಖದಲ್ಲಿರೋ ಕೂದಲಿಗಿಂತ ಮಾರ್ಕ್ಸ್ ಮುಖ್ಯ..ನೆಟ್ಟಿಗರಿಗೆ ಉತ್ತರ ಪ್ರದೇಶ 10th ಟಾಪರ್ ಪ್ರಾಚಿ ತಿರುಗೇಟು
ಕಳೆದ ಆಗಸ್ಟ್‌ನಲ್ಲಿ ಘಟನೆ ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ, 4149113, 4149154, 4149158, ಮತ್ತು 4149217 ಬಾರ್‌ಕೋಡ್‌ಗಳನ್ನು ಹೊಂದಿರುವ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳಲ್ಲಿ, ಭಾರತದ ಕ್ರಿಕೆಟರ್‌ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ಇತರ ಕ್ರಿಕೆಟಿಗರ ಹೆಸರುಗಳೊಂದಿಗೆ 'ಜೈ ಶ್ರೀ ರಾಮ್ ಪಾಸ್ ಹೋ ಜಾಯೇನ್' ಎಂದು ಬರೆದಿದು ಶೇಕಡಾ 56 ಅಂಕಗಳನ್ನು ಗಳಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಈ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಮಾಡಿದಾಗ ಸೊನ್ನೆ ಅಂಕ ಗಳಿಸಿದ್ದಾರೆ ಎಂದೂ ವರದಿ ಆಗಿದೆ.
ಆರ್‌ಟಿಐ ಅರ್ಜಿ ಸಲ್ಲಿಸಿದ ವಿದ್ಯಾರ್ಥಿ ದಿವ್ಯಾಂಶು ಸಿಂಗ್ ಹೇಳುವಂತೆ , ವಿದ್ಯಾರ್ಥಿಗಳು ಸರಿಯಾದ ಉತ್ತರ ಬರೆಯದಿದ್ದರೂ ಶಿಕ್ಷಕರು ವಿದ್ಯಾರ್ಥಿಗಳಿಂದ ಹಣ ಪಡೆದು ವಿದ್ಯಾರ್ಥಿಗಳನ್ನು ಪಾಸು ಮಾಡಿದ್ದಾರೆ. ಈ ಸಂಬಂಧ 2023 ರ ಡಿಸೆಂಬರ್‌ನಲ್ಲಿ ರಾಜಭವನದಿಂದ ತನಿಖೆಗೆ ಆದೇಶಿಸಿದ ನಂತರ ಸಿಂಗ್ ಈ ಸಂಬಂಧ ರಾಜಭವನಕ್ಕೆ ಪತ್ರವನ್ನೂ ಕಳುಹಿಸಿದ್ದಾರೆ. ಘಟನೆ ನಡೆದು 8 ತಿಂಗಳ ನಂತರ ತನಿಖೆ ಪೂರ್ಣಗೊಂಡಿದ್ದು, ಇಬ್ಬರು ಶಿಕ್ಷಕರ ವಿರುದ್ಧದ ಆರೋಪ ನಿಜ ಎಂದು ಸಾಬೀತಾಗಿದ್ದು, ಇಬ್ಬರನ್ನು ಅಮಾನತು ಮಾಡಲಾಗಿದೆ.
ನಿರೀಕ್ಷೆಗೂ ಮೀರಿದ ಮಾರ್ಕ್ಸ್ ನೋಡಿ ಮೂರ್ಛೆ ಹೋದ 10ನೇ ಕ್ಲಾಸ್ ಬಾಲಕ