ವಿಧಾನಸಭಾ ಚುನಾವಣೆ: ಮುರ್ಶಿದಾಬಾದ್‌ನಲ್ಲಿ 14 ಬಾಂಬ್ ಪತ್ತೆ

By Suvarna NewsFirst Published Apr 13, 2021, 1:44 PM IST
Highlights

ಪಂಚರಾಜ್ಯ ಚುನಾವಣೆ ಹವಾ | ಪಶ್ಚಿಮ ಬಂಗಾಳದಲ್ಲಿ 14 ಬಾಂಬ್ ಪತ್ತೆ

ವಿಧಾನಸಭಾ ಚುನಾವಣೆಗೆ 8 ಹಂತದಲ್ಲಿ ಮತದಾನ ಎದುರಿಸುತ್ತಿರುವ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಶಂಶರ್‌ಗಂಜ್ ಪ್ರದೇಶದಲ್ಲಿ 14 ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ಬಾಂಬ್ ನಿಗ್ರಹ ದಳ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿದೆ. ಏಪ್ರಿಲ್ 17 ರಂದು ರಾಜ್ಯದಲ್ಲಿ ಐದನೇ ಹಂತದ ವಿಧಾನಸಭಾ ಚುನಾವಣೆಗೆ ಮುನ್ನ ಈ ಘಟನೆ ನಡೆದಿವುದು ಆತಂಕ ಸೃಷ್ಟಿಸಿದೆ.

ಇದಕ್ಕೂ ಮುನ್ನ ಏಪ್ರಿಲ್ 10 ರಂದು ನಾಲ್ಕನೇ ಸುತ್ತಿನ ಮತದಾನದ ವೇಳೆ ಕೂಚ್ ಬೆಹಾರ್‌ನ ಮತದಾನ ಕೇಂದ್ರದಲ್ಲಿ ಹಿಂಸಾಚಾರ ನಡೆದಿತ್ತು. ಕೂಚ್ ಬೆಹಾರ್‌ನ ಮತದಾನ ಕೇಂದ್ರಗಳಿಗೆ ಕೇಂದ್ರ ಪಡೆಗಳು ಎರಡು ಬಾರಿ ಗುಂಡು ಹಾರಿಸಿದ್ದು, ನಾಲ್ವರು ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಆಡಳಿತಾರೂಢ ಟಿಎಂಸಿ ಆರೋಪಿಸಿದೆ.

ಮತದಾನದ ವೇಳೆ ಹಿಂಸಾಚಾರ: ಟಿಎಂಸಿ, ಬಿಜೆಪಿಗರ ಸಂಘರ್ಷ, ಗುಂಡಿನ ದಾಳಿಗೆ 4 ಬಲಿ!

ಕೂಚ್ ಬೆಹಾರ್‌ನ ಅಧಿಕೃತ ಮೂಲಗಳು ಜಿಲ್ಲೆಯಲ್ಲಿ ನಾಲ್ಕು ಜನರ ಸಾವನ್ನು ದೃಢಪಡಿಸಿದೆ. ವಿಶೇಷ ನೀರಿಕ್ಷಕ ಮಧ್ಯಂತರ ವರದಿಯ ಆಧಾರದ ಮೇಲೆ ಕೂಚ್ ಬೆಹಾರ್‌ನ ಸಿಟಲ್‌ಕುರ್ಚಿಯ ಎಸಿಯ ಪಿಎಸ್ 126 ರಲ್ಲಿ ಮತದಾನವನ್ನು ಮುಂದೂಡಲು ಚುನಾವಣಾ ಆಯೋಗ ಆದೇಶಿಸಿದೆ.

ಘಟನೆಯ ನಂತರ, ಕೂಚ್ ಬೆಹಾರ್ ಜಿಲ್ಲೆಯ ಯಾವುದೇ ರಾಜಕೀಯ ಮುಖಂಡರನ್ನು ಮುಂದಿನ 72 ಗಂಟೆಗಳ ಕಾಲ ಪ್ರದೇಶಕ್ಕೆ ಪ್ರವೇಶಿಸಲು ಚುನಾವಣಾ ಆಯೋಗವು ನಿರ್ಬಂಧಿಸಿದೆ.

ಪಶ್ಚಿಮ ಬಂಗಾಳ ಚುನಾವಣೆ: ಹಿಂಸಾಚಾರದ ನಡುವೆ ದಾಖಲೆ ಪ್ರಮಾಣದ ಮತದಾನ!

ಪಶ್ಚಿಮ ಬಂಗಾಳದಲ್ಲಿ ಮೊದಲ ನಾಲ್ಕು ಹಂತಗಳ ಮತದಾನ ಮುಕ್ತಾಯವಾಗಿದೆ. ನಡೆಯುತ್ತಿರುವ ಚುನಾವಣೆಯ ಐದನೇ ಮತ್ತು ಆರನೇ ಹಂತಗಳು ಏಪ್ರಿಲ್ 17 ಮತ್ತು ಏಪ್ರಿಲ್ 22 ರಂದು ನಡೆಯಲಿವೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ.

click me!