1975ರ ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ್ದವರಿಗೆ ತಿಂಗಳಿಗೆ ₹10,000 ಪಿಂಚಣಿ! ಬಂಗಾಳದಲ್ಲಿ 'ಲೋಕತಂತ್ರ ಸೇನಾನಿ' ಯೋಜನೆ ಜಾರಿ

Published : Aug 09, 2026, 08:30 PM IST
suvendu adhikari announces 10000 allowance for 325 emergency prisoners loktantra senani

ಸಾರಾಂಶ

1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲು ಶಿಕ್ಷೆ ಅನುಭವಿಸಿದ ಹೋರಾಟಗಾರರಿಗಾಗಿ 'ಪಶ್ಚಿಮ ಬಂಗ ಲೋಕತಂತ್ರ ಸೇನಾನಿ ಸಮ್ಮಾನ್' ಎಂಬ ಹೊಸ ಮಾಸಿಕ ಪಿಂಚಣಿ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿ, ಅರ್ಹ ಹೋರಾಟಗಾರರಿಗೆ ಪ್ರತಿ ತಿಂಗಳು ₹10,000 ಪಿಂಚಣಿ ನೀಡಲಾಗುವುದು, ಇದರಿಂದ ರಾಜ್ಯದ ಸುಮಾರು 325 ಜನರಿಗೆ ಅನುಕೂಲವಾಗಲಿದೆ.

ದೇಶದಲ್ಲಿ 1975ರಲ್ಲಿ ಜಾರಿಯಾದ ತುರ್ತು ಪರಿಸ್ಥಿತಿಯ (Emergency) ಕರಾಳ ದಿನಗಳಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಡಿ ಜೈಲು ಶಿಕ್ಷೆ ಅನುಭವಿಸಿದವರಿಗೆ ಪಶ್ಚಿಮ ಬಂಗಾಳ ಸರ್ಕಾರವು (West Bengal Government) ಭಾರಿ ಸಿಹಿ ಸುದ್ದಿ ನೀಡಿದೆ. ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದ್ದ ಹೋರಾಟಗಾರರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸರ್ಕಾರವು ಹೊಸ ಮಾಸಿಕ ಪಿಂಚಣಿ ಯೋಜನೆಯನ್ನು (Monthly Pension Scheme) ಘೋಷಿಸಿದೆ.

ಈ ನೂತನ ಯೋಜನೆಗೆ 'ಪಶ್ಚಿಮ ಬಂಗ ಲೋಕತಂತ್ರ ಸೇನಾನಿ ಸಮ್ಮಾನ್' (Paschim Banga Loktantra Senani Samman) ಎಂದು ಹೆಸರಿಡಲಾಗಿದೆ. ಈ ಯೋಜನೆಯ ಅಡಿಯಲ್ಲಿ, ತುರ್ತು ಪರಿಸ್ಥಿತಿ ಸಮಯದಲ್ಲಿ ಜೈಲು ಶಿಕ್ಷೆ ಅನುಭವಿಸಿದ ಪ್ರತಿಯೊಬ್ಬ ಹೋರಾಟಗಾರರಿಗೂ ಪ್ರತಿ ತಿಂಗಳು ₹10,000 ಪಿಂಚಣಿ ನೀಡಲಾಗುವುದು.

325 ಜನರಿಗೆ ಸಿಗಲಿದೆ ನೆರವು:

ಈ ಯೋಜನೆಯ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari), "ದೇಶದಲ್ಲಿ ಪ್ರಜಾಪ್ರಭುತ್ವವನ್ನು (Democracy) ರಕ್ಷಿಸಲು ಕಠಿಣ ಹಿಂಸೆ ಹಾಗೂ ಜೈಲುವಾಸ ಅನುಭವಿಸಿದ ಧೈರ್ಯಶಾಲಿ ಹೋರಾಟಗಾರರನ್ನು ಈ ಪಿಂಚಣಿ ಯೋಜನೆಯ ಮೂಲಕ ಗೌರವಿಸಲಾಗುತ್ತಿದೆ. ಇಂತಹ ಧೀರರ ತತ್ತ್ವ ಮತ್ತು ಆದರ್ಶಗಳ ಮೇಲೆಯೇ ನಮ್ಮ ಹೊಸ ಸರ್ಕಾರ ನಿಂತಿದೆ. ಈ ಯೋಜನೆಯಿಂದ ರಾಜ್ಯದ ಸುಮಾರು 325 ಜೈಲುವಾಸಿಗಳಿಗೆ ಅನುಕೂಲವಾಗಲಿದೆ" ಎಂದು ತಿಳಿಸಿದರು.

'ಸಂವಿಧಾನ್ ಹತ್ಯಾ ದಿವಸ್' ಮತ್ತು ಬಿಜೆಪಿ ಮಾದರಿ:

ಕೇಂದ್ರ ಸರ್ಕಾರವು ತುರ್ತು ಪರಿಸ್ಥಿತಿ ಘೋಷಣೆಯಾದ ಜೂನ್ 25 ರ ದಿನವನ್ನು 'ಸಂವಿಧಾನ್ ಹತ್ಯಾ ದಿವಸ್' (Samvidhan Hatya Divas) ಅಂದರೆ ಸಂವಿಧಾನ ಹತ್ಯೆಯ ದಿನ ಎಂದು ಆಚರಿಸುತ್ತಿದೆ. ಈ ಹಿಂದೆ ದೇಶದ ಹಲವು ಬಿಜೆಪಿ (BJP) ಆಡಳಿತವಿರುವ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿಯ ಸಂತ್ರಸ್ತರಿಗೆ ಪಿಂಚಣಿ ಹಾಗೂ ಸನ್ಮಾನ ನೀಡುವ ಯೋಜನೆ ಜಾರಿಯಲ್ಲಿದ್ದವು. ಇದೀಗ ಬಂಗಾಳದ ಬಿಜೆಪಿ ಸರ್ಕಾರವೂ ಸಹ ಅದೇ ಮಾದರಿಯನ್ನು ಅನುಸರಿಸಿ, ಪ್ರಜಾಪ್ರಭುತ್ವ ಹೋರಾಟಗಾರರಿಗೆ ಆರ್ಥಿಕ ಭದ್ರತೆ ಹಾಗೂ ಗೌರವ ನೀಡಲು ಮುಂದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೋಗಿನಿ ಮಾತಾ ಮಂದಿರದಲ್ಲಿ ಪವಾಡ, ಪ್ರತಿ ದಿನ ದರ್ಶನ ನೀಡಿ ಮಾಯವಾಗುವ ಮೇಕೆ ವಿಡಿಯೋ ಸೆರೆ
ಕೆಲಸಕ್ಕೆ ಸೇರಿದ ಮರುದಿನವೇ ರಿಸೈನ್, ಆಫೀಸ್ ಲ್ಯಾಪ್‌ಟಾಪ್ ಕುರಿತು ಯುವತಿ ಮಾತಿಗೆ ಸಿಇಒ ದಂಗು