
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ( Mamata Banerjee ) ತಮ್ಮ ಸ್ವಕ್ಷೇತ್ರವಾದ ಭಬಾನಿಪುರಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದಾರೆ. ಎಂದೂ ತರಕಾರಿ ಖರೀದಿ ಮಾಡದ ಅವರು ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಿದ್ದಾರೆ. ಅವರ ಅನುಯಾಯಿಗಳು ಕೈಚೀಲ ತಂದು ತರಕಾರಿ ತುಂಬಿಕೊಂಡಿದ್ದಾರೆ. ಅತ್ತ ನರೇಂದ್ರ ಮೋದಿ ಅವರು 'ಬೇಲ್ ಪುರಿ' ಸವಿಯುವ ಮೂಲಕ ಸುದ್ದಿಯಾಗಿದ್ದರು. ಈಗ ಮಮತಾ ಬ್ಯಾನರ್ಜಿ ತರಕಾರಿ ಖರೀದಿ ಮಾಡಿದ್ದಾರೆ.
ಬಿಳಿ ಸೀರೆ ಉಟ್ಟು ಮಾರುಕಟ್ಟೆಗೆ ಬಂದ 71 ವರ್ಷದ ಮಮತಾ ಬ್ಯಾನರ್ಜಿ, ತರಕಾರಿ ಮಾರಾಟಗಾರರ ಜೊತೆ ಮಾತನಾಡಿದ್ದಾರೆ. ಬೆಲೆ ಏರಿಕೆ, ತರಕಾರಿ ಪೂರೈಕೆಯ ಬಗ್ಗೆ ಮಾತನಾಡಿದ್ದಾರೆ. ಮೋದಿಯವರು ಹೂಗ್ಲಿ, ಉತ್ತರ 24 ಪರಗಣಗಳಲ್ಲಿ ಬೃಹತ್ ರೋಡ್ ಶೋ ಮಾಡುತ್ತಿದ್ದ ದಿನವೇ ಮಮತಾ ಅವರು ಭಬಾನಿಪುರದ ಗಲ್ಲಿಗಳಲ್ಲಿ ಪಾದಯಾತ್ರೆ ಮಾಡಿದ್ದಾರೆ.
ಆ ವೇಳೆ ಮಾತನಾಡಿದ ಅವರು, "ನಾವು ಎಲ್ಲರೂ ಒಂದಾಗಿ ಬಾಳಬೇಕು. ನಮ್ಮವರಿಗೆ ಉತ್ತಮ ಸೌಲಭ್ಯಗಳು ಸಿಗಬೇಕು. ಈಗಾಗಲೇ ನಾವು ಅನೇಕ ದೇವಾಲಯ, ಜೈನ ಮಂದಿರ, ಇಸ್ಕಾನ್ ದೇವಾಲಯ, ಜಗನ್ನಾಥ ಧಾಮವನ್ನು ನಿರ್ಮಿಸಿದ್ದೇವೆ. ಶಿಕ್ಷಣ ಸಂಸ್ಥೆಗಳಿಗೆ ಭೂಮಿ ಕೊಟ್ಟಿದ್ದೇವೆ" ಎಂದು ಹೇಳಿದ್ದಾರೆ.
2026ರ ವಿಧಾನಸಭಾ ಚುನಾವಣೆಯಲ್ಲಿ ಭಬಾನಿಪುರ ಕ್ಷೇತ್ರವು ಪ್ರಮುಖ ರಣರಂಗವಾಗಲಿದೆ. ಇಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯವರನ್ನು ಕಣಕ್ಕಿಳಿಸಲಿದ್ದಾರಂತಡ. 2021ರ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾರನ್ನು ಸುವೇಂದು ಸೋಲಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ