ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳಿಂದ ಮುಂದುವರಿದ ಉಗ್ರ ಬೇಟೆ: ಹಫೀಜ್ ಸಯೀದ್ ಆಪ್ತಅಫ್ರಿದಿ ಗುಂಡೇಟಿಗೆ ಬಲಿ

Published : Apr 27, 2026, 11:37 AM IST
Sheikh Yousuf Afridi, Lashkar Terrorist Shot Dead By Gunmen In Pakistan

ಸಾರಾಂಶ

ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳು ಮತ್ತೊಬ್ಬ ಕುಖ್ಯಾತ ಭಯೋತ್ಪಾದಕನ ಕತೆ ಮುಗಿಸಿದ್ದಾರೆ. ಲಷ್ಕರ್ ಇ ತೈಬಾ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ಶೇಕ್ ಯೂಸುಫ್ ಅಫ್ರಿದಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಪಾಕ್‌ನಲ್ಲಿ ಒಂದಾದ ಮೇಲೊಂದರಂತೆ ಉದುರುತಿದೆ ಉಗ್ರರ ತಲೆಗಳು

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳು ಮತ್ತೊಬ್ಬ ಕುಖ್ಯಾತ ಭಯೋತ್ಪಾದಕನ ಕತೆ ಮುಗಿಸಿದ್ದಾರೆ. ಲಷ್ಕರ್ ಇ ತೈಬಾ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ಶೇಕ್ ಯೂಸುಫ್ ಅಫ್ರಿದಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರಂಭಿಕ ವರದಿಯ ಪ್ರಕಾರ ದಾಳಿಕೋರರು ಅಫ್ರಿದಿ ಮೇಲೆ ಹಲವು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಈಗ ಹತ್ಯೆಗೊಳಗಾದ ಶೇಖ್ ಆಫ್ರಿದಿ ಎಲ್‌ಇಟಿ ಕಮಾಂಡರ್ ಹಫೀಜ್ ಸಯೀದ್‌ನ ಅತ್ಯಾಪ್ತ ಸಹಚರ ಎಂದು ತಿಳಿದು ಬಂದಿದೆ.

ಅಜ್ಞಾತ ದಾಳಿಕೋರರ ಗುಂಡಿಗೆ ಲಷ್ಕರ್-ಎ-ತೈಬಾ ಕಮಾಂಡರ್ ಅಫ್ರಿದಿ ಅಂತ್ಯ

ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ಅಮೆರಿಕ ನಿಷೇಧಿಸಿದ ಭಯೋತ್ಪಾದಕ ಗುಂಪಿನ ಕಾರ್ಯಾಚರಣೆಗಳಲ್ಲಿ ಅಫ್ರಿದಿಯನ್ನು ಪ್ರಮುಖ ಕೊಂಡಿ ಎಂದು ಪರಿಗಣಿಸಲಾಗಿತ್ತು ಮತ್ತು ತನಿಖಾಧಿಕಾರಿಗಳು ಅವರ ಸಾವನ್ನು ಗುರಿಯಾಗಿ ಮಾಡಿದ ಹತ್ಯೆ ಎಂದು ಪರಿಗಣಿಸಿದ್ದಾರೆ.

ಪಾಕಿಸ್ತಾನದಲ್ಲಿ ಇತ್ತೀಚಿನ ದಿನಗಳಲ್ಲಿ ಒಬ್ಬರಾದ ಮೇಲೊಬ್ಬರಂತೆ ಪ್ರಮುಖ ಭಯೋತ್ಪಾದಕರನ್ನು ಗುರಿಯಾಗಿಸಿ ಅಪರಿಚಿತ ಬಂದೂಕುಧಾರಿಗಳಿಂದ ಗುಂಡಿನ ದಾಳಿ ನಡೆಯುತ್ತಲೇ ಇದ್ದು, ಈಗ ನಡೆದ ಆಫ್ರಿದಿ ಹತ್ಯೆಯೂ ಈ ಸರಣಿ ಹತ್ಯೆಯ ಭಾಗವಾಗಿದೆ. ಕಳೆದ ತಿಂಗಳು ಕೂಡ ಪಾಕಿಸ್ತಾನದಲ್ಲಿ ಭಯೋತ್ಪಾದಕ ಹಾಗೂ ಎಲ್‌ಇಟಿ ಸಂಸ್ಥಾಪಕ ಸದಸ್ಯ ಅಮಿರ್ ಹಮ್ಜಾ ಎಂಂಬಾತನ ಹತ್ಯೆ ನಡೆದಿತ್ತು. ಪಾಕಿಸ್ತಾನದ ಲಾಹೋರ್‌ನಲ್ಲಿ ಟಿವಿ ಸ್ಟೇಷನ್ ಒಂದರ ಮುಂಭಾಗವೇ ಈ ಹತ್ಯೆ ನಡೆದಿತ್ತು. ಈ ಗುಂಡಿನ ದಾಳಿಯಲ್ಲಿ 67 ವರ್ಷದ ಹಮ್ಜಾ ಸ್ಥಳದಲ್ಲೇ ಸಾವನ್ನಪ್ಪಿದ.

ಭಯೋತ್ಪಾದಕರಿಗೆ ನಡುಕ ಹುಟ್ಟಿಸಿದ 'ಅಪರಿಚಿತ' ಬಂದೂಕುಧಾರಿಗಳು

ಅದಕ್ಕೂ ಮೊದಲು, ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಹಿರಿಯ ಸಹೋದರ ಮುಹಮ್ಮದ್ ತಾಹಿರ್ ಅನ್ವರ್ ಪಾಕಿಸ್ತಾನದಲ್ಲಿ ನಿಗೂಢವಾಗ ಸಾವನ್ನಪ್ಪಿದ್ದ. ಈ ಅನ್ವರ್ ಜೈಶ್-ಎ-ಮೊಹಮ್ಮದ್‌ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮತ್ತು ಭಯೋತ್ಪಾದಕ ಸಂಘಟನೆಯ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ.

ನಿಗೂಢ ದಾಳಿಗೆ ಲಷ್ಕರ್ ಮತ್ತು ಜೈಶ್ ಉಗ್ರರು ಉಡೀಸ್

ಕಳೆದ ವರ್ಷ ಮಾರ್ಚ್‌ನಲ್ಲಿ, ಪಾಕಿಸ್ತಾನದ ಝೇಲಂ ಸಿಂಧ್‌ನಲ್ಲಿ ಎಲ್‌ಇಟಿಯ ಪ್ರಮುಖ ಭಯೋತ್ಪಾದಕ ಅಬು ಕತಲ್ ಅಕಾ ಕತಲ್ ಸಿಂಧಿ ಕೂಡ ಅಪರಿಚಿತ ಬಂದೂಕುಧಾರಿಗಳಿಂದ ಹತ್ಯೆಯಾಗಿದ್ದ. ಈ ಅಬು ಕತಲ್ 26/11 ಮುಂಬೈ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಹಫೀಜ್ ಸಯೀದ್‌ನ ಆಪ್ತ ಸಹಾಯಕನಾಗಿದ್ದ. ಹಾಗೆಯೇ 2024 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂಬತ್ತು ಜನರನ್ನು ಕೊಂದು 33 ಜನರನ್ನು ಗಾಯಗೊಳಿಸಿದ ರಿಯಾಸಿ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಕೂಡ ಆಗಿದ್ದ ಎಂಬ ಮಾಹಿತಿ ಇದೆ.

ಇದನ್ನೂ ಓದಿ:  ಮದುವೆಯಾಗುವುದಾಗಿ ನಂಬಿಸಿ ಕೋಟ್ಯಾಂತರ ರೂ ಹಣ ಪಡೆದು ಮೋಸ: ಟಾಲಿವುಡ್ ನಟಿ ವಿರುದ್ಧ ಎನ್‌ಆರ್‌ಐ ಟೆಕ್ಕಿ ದೂರು

2023ರಿಂದಲೂ ಪಾಕಿಸ್ತಾನ ಇದೇ ರೀತಿ ನಿಗೂಢ ಹತ್ಯೆ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಕೇವಲ 7 ತಿಂಗಳ ಅವಧಿಯಲ್ಲಿ 7 ಪ್ರಮುಖ ಭಯೋತ್ಪಾದಕ ಹೆಡೆಮುರಿ ಕಟ್ಟಲಾಗಿದೆ. ಕೇವಲ 2026 ರಲ್ಲಿಯೇ ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ಸಂಘಟನೆಗಳಿಗೆ ಸಂಬಂಧಿಸಿದ ಕನಿಷ್ಠ 30 ಭಯೋತ್ಪಾದಕರನ್ನು ಲಾಹೋರ್, ಕರಾಚಿ ಮತ್ತು ಇತರ ಪ್ರದೇಶಗಳಂತಹ ನಗರಗಳಲ್ಲಿ ಅಪರಿಚಿತ ಬಂದೂಕುಧಾರಿಗಳು ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ: ರಾಯಚೂರು: ನಾಲ್ವರು ಸಾಗುತ್ತಿದ್ದ ಬೈಕ್‌ಗೆ ಟಿಪ್ಪರ್ ಡಿಕ್ಕಿ: ಇಬ್ಬರು ಸಾವು, ಇಬ್ಬರ ಸ್ಥಿತಿ ಗಂಭೀರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

100 ಮೀ. ದೂರದಲ್ಲಿ ಬಿಜೆಪಿ ರ್‍ಯಾಲಿ ಸದ್ದು: ಭಾಷಣ ನಿಲ್ಲಿಸಿ ನಿರ್ಗಮಿಸಿದ ಸಿಎಂ ಮಮತಾ!
ಏಳು ಪಕ್ಷಾಂತರಿಗಳ ಸದಸ್ಯತ್ವ ರದ್ದುಗೊಳಿಸುವಂತೆ ರಾಜ್ಯಸಭೆ ಸ್ಪೀಕರ್‌ಗೆ ಆಪ್‌ ಮನವಿ