ಅತ್ಯಾಚಾರಿಗಳಿಗೆ 10 ದಿನದಲ್ಲಿ ಗಲ್ಲು ಶಿಕ್ಷೆ, ಆ್ಯಂಟಿ ರೇಪ್ ಬಿಲ್ ಪಾಸ್ ಮಾಡಿದ ಬಂಗಾಳ ಸರ್ಕಾರ!

By Chethan Kumar  |  First Published Sep 3, 2024, 2:32 PM IST

ಪಶ್ಚಿಮ ಬಂಗಾಳ ವಿಧಾನಸಭೆ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಇಂದು ಮಂಡಿಸಲಾಗ ಅತ್ಯಾಚಾರ ವಿರೋಧಿ ಬಿಲ್ ಸರ್ವಾನುಮತದಿಂದ ಪಾಸ್ ಆಗಿದೆ. ಪ್ರಮುಖಾಗಿ ಕೇವಲ 10 ದಿನದಲ್ಲಿ ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಲು ಈ ಬಿಲ್ ಅನುಮತಿಸುತ್ತದೆ


ಕೋಲ್ಕತಾ(ಸೆ.03) ಮಹಿಳೆ ಮತ್ತು ಮಕ್ಕಳ ಸುರಕ್ಷತೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಐತಿಹಾಸಿಕ ಹೆಜ್ಜೆ ಇಟ್ಟಿದೆ.ಇಂದು ಬಂಗಾಳ ವಿಧಾನ ಸಭೆಯಲ್ಲಿ ಆ್ಯಂಟಿ ರೇಪ್ ಬಿಲ್ ಪಾಸ್ ಆಗಿದೆ. ಅಪರಾಜಿತ ಮಹಿಳಾ ಮತ್ತು ಮಕ್ಕಳ ಬಿಲ್ 2024 ಕಾಯ್ದೆಯನ್ನು ಇಂದು ರಾಜ್ಯ ಕಾನೂನು ಸಚಿವ ಮೊಲೊಯ್ ಘಾಚಕ್ ಮಂಡಿಸಿದ್ದರು. ಆರೋಪ ಸಾಬೀತಾದ 10 ದಿನದಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಈ ಬಿಲ್ ಅನುಮತಿಸುತ್ತದೆ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಭಾರತದಲ್ಲಿ ಇದೇ ಮೊದಲಾಗಿ ಪಶ್ಚಿಮ ಬಂಗಾಳ ಜಾರಿಗೆ ತರಲು ನಿರ್ಧರಿಸಿದೆ. 

ಬಂಗಾಳ ವಿಧಾನಸಭೆಯಲ್ಲಿ ಈ ಮಸೂದೆಗೆ ಪಾಸ್ ಆಗಿದೆ. ಇದೀಗ ಮೇಲ್ಮನೆಯಲ್ಲಿ ಈ ಬಿಲ್ ಸೆಪ್ಟೆಂಬರ್5ರಂದು ಮಂಡನೆಯಾಗಲಿದೆ. ಬಳಿಕ ರಾಜ್ಯಪಾಲರ ಅಂಕಿತದೊಂಂದಿಗೆ ಜಾರಿಗೆ ಬರುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಈ ಬಿಲ್ ಸೆಪ್ಟೆಂಬರ್ 5ರಿಂದ ಬಂಗಾಳದಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ .ಆರ್‌ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಮತಾ ಬ್ಯಾನರ್ಜಿ ಸರ್ಕಾರ ಇದೀಗ ಐತಿಹಾಸಿಕ ಬಿಲ್ ಪಾಸ್ ಮಾಡಿ ಅತ್ಯಾಚಾರಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಲು ಮುಂದಾಗಿದೆ.

Tap to resize

Latest Videos

ಪಶ್ಚಿಮ ಬಂಗಾಳ ವೇಳೆ ಬಂದ್‌ ಹಿಂಸೆ, ಗುಂಡಿನ ದಾಳಿ: ಮಮತಾ ಬ್ಯಾನರ್ಜಿ ರಾಜೀನಾಮೆಗೆ ಆಗ್ರಹ

ಇದೇ ವೇಳೆ ಪೊಲೀಸರು ಅತ್ಯಾಚಾರ ಪ್ರಕರಣದ ವೇಳೆ ಕೇಸ್ ದಾಖಲಿಸಿಕೊಳ್ಳಲು ವಿಳಂಬ ಮಾಡಿದರೆ, ಹಿಂದೇಟು ಹಾಕಿದರೆ ಅಂತವರನ್ನು ಅಮಾನತು ಮಾಡಲು ಈ ಬಿಲ್ ಅನುಮತಿಸುತ್ತದೆ. ಪ್ರಕರಣದ ಗಂಭೀರತೆ ಮೇಲೆ ಅತ್ಯಾಚಾರಿಗಳಿಗೆ ಮರಣದಂಡನೆ, ಯಾವುದೇ ಪರೋಲ್ ಇಲ್ಲದೆ ಜೈಲು ಶಿಕ್ಷೆ ಸೇರಿದಂತೆ ಹಲವು ಕಠಿಣ ಶಿಕ್ಷೆಗಳಿಗೆ ಈ ಮಸೂದೆ ಅನುವು ಮಾಡಿಕೊಡುತ್ತದೆ.

ಆರ್‌ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಳಿಕ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಹೋರಾಟಗಳು ನಡೆದಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೂ ಪತ್ರ ಬರೆದಿದ್ದ ಮಮತಾ ಬ್ಯಾನರ್ಜಿ 15 ದಿನದಲ್ಲಿ ಶಿಕ್ಷೆ ವಿಧಿಸುವಂತೆ ತ್ವರಿತ ಕೋರ್ಟ್‌ಗಳಲ್ಲಿ ವಿಚಾರಣೆ ನಡೆಯಬೇಕು ಎಂದು ಬ್ಯಾನರ್ಜಿ ಆಗ್ರಹಿಸಿದ್ದರು. 

ಇದೀಗ ಪಶ್ಚಿಮ ಬಂಗಾಳದಲ್ಲಿ ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ಸುರಕ್ಷತೆಗೆ ಮಹತ್ವದ ಬಿಲ್ ಪಾಸ್ ಮಾಡಲಾಗಿದೆ. ಕಠಿಣ ಶಿಕ್ಷೆ ಮೂಲಕ ಅತ್ಯಾಚಾರ ಪ್ರಕರಣಕ್ಕೆ ಅಂತ್ಯಹಾಡಲು ಬಂಗಾಳ ಮುಂದಾಗಿದೆ. 

ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳ ಬೃಹತ್ ಪ್ರತಿಭಟನೆ

click me!