ಆಸ್ತಿ ವಿವರ ಸಲ್ಲಿಸದ 13 ಲಕ್ಷ ಸರ್ಕಾರಿ ನೌಕರರ ವೇತನ ತಡೆ ಹಿಡಿದ ಉತ್ತರ ಪ್ರದೇಶ ಸರ್ಕಾರ

By Anusha KbFirst Published Sep 3, 2024, 12:38 PM IST
Highlights

ಉತ್ತರ ಪ್ರದೇಶ ಸರ್ಕಾರವೂ ತನ್ನ ನೌಕರರಿಗೆ ತಮ್ಮ ಆಸ್ತಿ ಘೋಷಣೆ ಮಾಡಲು ಆದೇಶಿಸಿದ್ದು, ಆಸ್ತಿ ಘೋಷಣೆ ಮಾಡದ ಒಟ್ಟು 13 ಲಕ್ಷಕ್ಕೂ ಅಧಿಕ ನೌಕರರ ಆಗಸ್ಟ್ ತಿಂಗಳ ವೇತನವನ್ನು ತಡೆ ಹಿಡಿದಿದೆ ಎಂದು ವರದಿ ಆಗಿದೆ.

ಲಕ್ನೋ: ಉತ್ತರ ಪ್ರದೇಶ ಸರ್ಕಾರವೂ ತನ್ನ ನೌಕರರಿಗೆ ತಮ್ಮ ಆಸ್ತಿ ಘೋಷಣೆ ಮಾಡಲು ಆದೇಶಿಸಿದ್ದು, ಆಸ್ತಿ ಘೋಷಣೆ ಮಾಡದ ಒಟ್ಟು 13 ಲಕ್ಷಕ್ಕೂ ಅಧಿಕ ನೌಕರರ ಆಗಸ್ಟ್ ತಿಂಗಳ ವೇತನವನ್ನು ತಡೆ ಹಿಡಿದಿದೆ ಎಂದು ವರದಿ ಆಗಿದೆ.  ಸರ್ಕಾರಿ ನೌಕರರು ತಮ್ಮ ಸ್ಥಿರ ಹಾಗೂ ಚರಾಸ್ತಿಯನ್ನು ಸರ್ಕಾರಿ ಪೋರ್ಟಲ್‌ ಮಾನವ ಸಂಪದದಲ್ಲಿ ದಾಖಲಿಸುವಂತೆ ಸರ್ಕಾರ ಆದೇಶಿಸಿತ್ತು. ಆಗಸ್ಟ್ 31ರೊಳಗೆ ತಮ್ಮ ಆಸ್ತಿಯನ್ನು ಮಾನವ ಸಂಪದದಲ್ಲಿ ಘೋಷಿಸಿ ಇಲ್ಲದೇ ಹೋದರೆ ಈ ತಿಂಗಳ ಸ್ಯಾಲರಿ ಪಾವತಿಯಾಗುವುದಿಲ್ಲ ಎಂದು ನೌಕರರಿಗೆ ಸೂಚಿಸಿತ್ತು ಎನ್ನಲಾಗಿದೆ. ಸರ್ಕಾರದ ಈ ಆದೇಶವನ್ನು ಪಾಲಿಸದೇ ಇದ್ದಲ್ಲಿ ಪ್ರಮೋಷನ್‌ ಮೇಲೂ ಇದು ಪರಿಣಾಮ ಬೀರಲಿದೆ ಎಂದು ಆದೇಶದಲ್ಲಿ ಹೇಳಲಾಗಿತ್ತು. 

ಆದರೆ 13 ಲಕ್ಷದಷ್ಟು ಉದ್ಯೋಗಿಗಳು ಇನ್ನೂ ಮಾನವ ಸಂಪದ ಪೋರ್ಟಲ್‌ನಲ್ಲಿ ತಮ್ಮ ಆಸ್ತಿ ಬಗ್ಗೆ ಘೋಷಣೆ ಮಾಡದ ಹಿನ್ನೆಲೆಯಲ್ಲಿ ಅವರಿಗೆ  ಆಗಸ್ಟ ತಿಂಗಳ ವೇತನ ಆಗುವುದಿಲ್ಲ ಎನ್ನಲಾಗುತ್ತಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ತನ್ನ ಉದ್ಯೋಗಿಗಳಿಗೆ ಆಗಸ್ಟ್ 31 ರೊಳಗೆ ತಮ್ಮ ಆಸ್ತಿಯನ್ನು ಘೋಷಿಸಬೇಕು ಅಥವಾ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತನ್ನ ಅಂತಿಮ ಆದೇಶದಲ್ಲಿ ತಿಳಿಸಿದೆ ಎನ್ನಲಾಗಿದೆ. ಈ ಆದೇಶವನ್ನು ಕಳೆದ ವರ್ಷವೇ ಮಾಡಲಾಗಿತ್ತು. ಕಳೆದ ವರ್ಷ ಡಿಸೆಂಬರ್‌ 31ಕ್ಕೆ  ಇದನ್ನು ಪಾಲಿಸುವುದಕ್ಕೆ ಅಂತಿಮ ಗಡುವು ನೀಡಲಾಗಿತ್ತು. ಆದರೆ ಈ ಆದೇಶವನ್ನು ಹಲವು ಬಾರಿ ವಿಸ್ತರಣೆ ಮಾಡಲಾಗಿತ್ತು. ಆದರೂ ಶೇಕಡಾ 26 ರಷ್ಟು ನೌಕರರು ಮಾತ್ರ ತಮ್ಮ ಆಸ್ತಿ ವಿವರವನ್ನು ಸಂಪದ ಪೋರ್ಟಲ್‌ನಲ್ಲಿ ದಾಖಲಿಸಿದ್ದರು. 

Latest Videos

ಅಯೋಧ್ಯೆ ರಾಮಮಂದಿರ ನಿರ್ಮಾಣ ಕ್ರೆಡಿಟ್ ಮೋದಿಗೆ ಮಾತ್ರವಲ್ಲ, ಯೋಗಿಗೂ ಸಲ್ಲುತ್ತೆ: ಚಕ್ರವರ್ತಿ ಸೂಲಿಬೆಲೆ

ಉತ್ತರ ಪ್ರದೇಶ ರಾಜ್ಯದಲ್ಲಿ ಒಟ್ಟು 17 ಲಕ್ಷದ 88 ಸಾವಿರದ 429 ಸರ್ಕಾರಿ ನೌಕರರಿದ್ದಾರೆ. ಇವರಲ್ಲಿ ಸುಮಾರು 13 ಲಕ್ಷದಷ್ಟು ಜನ ಇನ್ನೂ ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿಲ್ಲ, ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಅವರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಆಗ್ರಹಿಸಿದ್ದಾರೆ, ವರದಿಗಳ ಪ್ರಕಾರ ಹೊಸ ಗಡುವಿನ ಮೊದಲು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸುವವರಿಗೆ ಮಾತ್ರ ಅವರ ವೇತನವನ್ನು ವಿತರಿಸಲಾಗುತ್ತದೆ. ಈ ನಿಯಮವು ಎಲ್ಲಾ ವರ್ಗದ ಅಧಿಕಾರಿಗಳು ಮತ್ತು ನೌಕರರಿಗೆ ಅನ್ವಯಿಸುತ್ತದೆ. ಈ ನಿಯಮ ಮೀರಿದ ಅಧಿಕಾರಿಗಳು, ತಮ್ಮ ಆಸ್ತಿಯನ್ನು ಘೋಷಿಸದವರೂ ಬಡ್ತಿಗೆ ಅನರ್ಹರಾಗಬಹುದು ಎಂದು ಅವರು ಹೇಳಿದ್ದಾರೆ. 

ರಾಮ ಮಂದಿರದಿಂದ ತುಂಬಲಿದೆ ಉತ್ತರ ಪ್ರದೇಶ ಸರ್ಕಾರದ ಬೊಕ್ಕಸ; 25 ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಆದಾಯದ ನಿರೀಕ್ಷೆ

click me!